Asianet Suvarna News Asianet Suvarna News

ಹಣಕ್ಕಾಗಿ ರಾಖಿ ಸಾವಂತ್ ಬೆತ್ತಲೆ ಫೋಟೋ, ವಿಡಿಯೋ ಮಾರಾಟ; ಪತಿ ವಿರುದ್ಧ ಹೊಸ ಆರೋಪ?

ಆದಿಲ್ ಖಾನ್ ವಿರುದ್ಧ ಹೊಸ ಆರೋಪ ಮಾಡಿದ ರಾಖಿ ಸಾವಂತ್. ಕೋಟಿ ಬೆಲೆ ಬಾಳುವ ಹುಡುಗ ನಗ್ನ ಫೋಟೋ ಕ್ಲಿಕ್ ಮಾಡಿದ್ದು ನಿಜವೇ?
 

Adil khan durrani from mysore sold my nude for money says Rakhi Sawant vcs
Author
First Published Feb 10, 2023, 2:21 PM IST

ಬಾಲಿವುಡ್‌ ಅಂಗಳದಲ್ಲಿ ಸಿನಿಮಾ ರಿಲೀಸ್‌, ಸ್ಟಾರ್ ವೆಡ್ಡಿಂಗ್‌ಗಿಂತ ಹೆಚ್ಚಿಗೆ ಸೌಂಡ್ ಮಾಡುತ್ತಿರುವುದು ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಮದುವೆ ವಿಚಾರ. ಮುಂಬೈ ಪೊಲೀಸ್ ಠಾಣೆಯಲ್ಲಿರುವ ಆದಿಲ್ ವಿರುದ್ಧ ರಸ್ತೆಯಲ್ಲಿ ನಿಂತುಕೊಂಡು ರಾಖಿ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಕೋರ್ಟ್‌ ವಿಚಾರಣೆಗೆಂದು ಪೊಲೀಸರು ಆದಿಲ್‌ನ ಕರೆದುಕೊಂಡು ಹೋಗುವಾಗ ರಾಖಿ ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಜೊತೆಗೆ ಆದಿಲ್ ಮಾಡಿರುವ ಮೋಸದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ರಾಖಿ ಆರೋಪಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಆದಿಲ್ ಬೇಲ್‌ ಮೇಲೆ ಹೊರ ಬಂದ ನಂತರ ತಿಳಿಯುತ್ತದೆ.

ರಾಖಿ ಹೊಸ ಆರೋಪ: 

' ಆದಿಲ್ ಖಾನ್‌ ನನ್ನ ನಗ್ನ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಮ್ ಡಿಪಾರ್ಟ್‌ಮೆಂಟ್‌ ಈ ಕೇಸ್‌ನ ನಡೆಸುತ್ತಿದೆ. ಆದಿಲ್ ನನಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುವ ಕಾರಣ ಆತನಿಗೆ ಬೇಲ್ ಸಿಗಬಾರದು. ಹೀಗಾಗಿ ವೈಯಕ್ತಿಕವಾಗಿ ಪ್ರತಿಯೊಂದು ವಿಚಾರಣೆಯಲೂ ಭಾಗಿಯಾಗುತ್ತಿರುವೆ. ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡು ಸಂಪೂರ್ಣ ರಿಪೋರ್ಟ್‌ ಸಲ್ಲಿಸಿರುವೆ. ಆದಿಲ್ ನನಗೆ ತುಂಬಾ ಟಾರ್ಚರ್‌ ಕೊಟ್ಟಿದ್ದಾನೆ ಅಲ್ಲದೆ ನನ್ನ ಮೊಬೈಲ್‌ನಿಂದ ಓಟಿಪಿ ಪಡೆದುಕೊಂಡು ಹಣ ಹೊಡೆದಿದ್ದಾನೆ' ಎಂದು ರಾಖಿ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಲವ್ ಜಿಹಾದ್‌ನಲ್ಲಿ ಸಿಲುಕಿಕೊಳ್ಳುವ ಹುಡುಗಿಯರಿಗೆ ದೊಡ್ಡ ಪಾಠವಿದು; ರಾಖಿ ಸಾವಂತ್ ಮಾಜಿ ಪತಿ ರಿತೇಶ್

'ಮನೆಯಲ್ಲಿ ಬೆಳಗ್ಗೆ ಸುಮ್ಮನಿ ಕುಳಿತಿರುವಾಗ ಆದಿಲ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ನಾನು ಪೊಲೀಸ್‌ಗೆ ಕರೆ ಮಾಡಿರುವೆ. ಆಗಾಗ ಮನೆಗೆ ಭೇಟಿ ನೀಡಿ ಜೀವ ಬೆದರಿಕೆ ಹಾಕುತ್ತಿದ್ದ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾಗಿ ಹೇಳಿದ್ದರೆ ನಿಮ್ಮ ಕುಟುಂಬ ನಾಶ ಮಾಡುವುದಾಗಿ ಹೆದರಿಸುತ್ತಿದ್ದಾನೆ' ಎಂದು ರಾಖಿ ಹೇಳಿದ್ದಾರೆ. 

ಇದಾದ ಕೆಲವೇ ನಿಮಿಷಗಳಲ್ಲಿ ಆದಿಲ್ 1.50 ಕೋಟಿ ರೂಪಾಯಿ ಸಾಲ ಪಡೆದುಕೊಂಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸ್ವತಃ ಆದಿಲ್ ಹಣ ಪಡೆದುಕೊಂಡಿರುವ ಎಂದು ಒಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಹೊಸ ಕಾರಿಗೆಂದು ಹಣ ತೆಗೆದುಕೊಂಡಿರುವ ನಾಲ್ಕು ತಿಂಗಳುಗಳಲ್ಲಿ ರಾಖಿಗೆ ಕೊಡುವೆ ಎನ್ನುತ್ತಾರೆ. 

ಸುಪಾರಿ ಕೊಟ್ಟಿದ್ದು ನಿಜವೇ?

ಅನೈತಿಕ ಸಂಬಂಧ ಮತ್ತು ಹಲ್ಲೆ ಆರೋಪ ಮೇಲೆ ಫೆಬ್ರವರಿ 7ರಂದು ಮುಂಬೈ ಓಶಿವಾರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಒಂದುವರೆ ದಿನಗಳ ಕಾಲ ತನಿಖೆ ನೆಡಿಸಿದ ಪೊಲೀಸರು ನಿನ್ನೆ ಆಂಧೇರಿ ಕೋರ್ಟ್‌ನಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ರಾಖಿ ಮೆಡಿಕಲ್ ಟೆಸ್ಟ್‌ಗೆಂದು ಆಸ್ಪತ್ರೆಗೆ ಹೋಗುತ್ತಿರುವ ವಿಡಿಯೋವನ್ನು ಪ್ಯಾಪರಾಜಿಗಳು ಸೆರೆ ಹಿಡಿದಿದ್ದಾರೆ. ಆದಿಲ್ ನನ್ನ ಮೇಲೆ ಹಲ್ಲೆ ಮಾಡಿರುವ ಕಾರಣ ಪೊಲೀಸರು ಮೆಡಿಕಲ್ ಟೆಸ್ಟ್‌ ಮಾಡಿಸಲು ಹೇಳಿದ್ದಾರೆ ಎಂದು ರಾಖಿ ಮಾತನಾಡಿರುವ ವಿಡಿಯೋ ವೈರಲ್ ಅಗುತ್ತಿದೆ. 

ಪತಿ ಅರೆಸ್ಟ್‌ ಆಗುತ್ತಿದ್ದಂತೆ ನಡು ರಸ್ತೆಯಲ್ಲಿ ತಲೆ ಸುತ್ತಿ ಬಿದ್ದ ರಾಖಿ ಸಾವಂತ್; ವಿಡಿಯೋ ವೈರಲ್

'ನಾನು ಸಲ್ಲಿಸಿರುವ ಎಲ್ಲ ಕೇಸ್‌ಗಳು ಕೋರ್ಟ್‌ನಲ್ಲಿ ಇವೆ. ಸರಿ ಮಾಡಿಕೊಳ್ಳೋಣ ಅಂತ ನಾನು ಅದಿಲ್‌ಗೆ 100 ಅವಕಾಶ ಕೊಟ್ಟೆ. ಆದಿಲ್‌ ಮದುವೆಯಾಗಿದ್ದೇನೆ ಅಂತ ನನಗೆ ಬ್ರೇಕಿಂಗ್ ನ್ಯೂಸ್‌ ಸಿಕ್ಕಿದೆ. ಆದಿಲ್‌ನ ಮದುವೆ, ವಿಚ್ಛೇದನದ ಪತ್ರ ನನಗೆ ಸಿಕ್ಕಿದೆ. ಯಾಕೆ ಇದೆಲ್ಲ ನನಗೆ ಆಗುತ್ತೆ ಅಂತ ದೇವರೇ ಹೇಳಬೇಕು. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ಆದರೆ ಕೆಲವರು ಹೇಳೋದಿಲ್ಲ. ಎಲ್ಲ ಮಹಿಳೆಯರು ಹೇಳಲು ಧೈರ್ಯ ಮಾಡಲ್ಲ, ನಾನು ಮಾಡ್ತೀನಿ ಅಷ್ಟೇ' ಎಂದಿದ್ದಾರೆ ರಾಖಿ ಸಾವಂತ್. 
 

Follow Us:
Download App:
  • android
  • ios