Asianet Suvarna News Asianet Suvarna News

ರಿಷಬ್​ ಪಂತ್​ರನ್ನು ಕಾಡುತ್ತಿರೋ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿ!

ಕ್ರಿಕೆಟಿಗ ರಿಷಬ್​ ಪಂತ್​ ಅವರನ್ನು ಬಿಟ್ಟೂಬಿಡದೆ ಕಾಡುತ್ತಿರುವ ನಟಿ ಊರ್ವಶಿ ರೌಟೇಲಾ, ಈಗ ವಾಲ್ಟೇರ್​ ವೀರಯ್ಯ ಚಿತ್ರಕ್ಕೆ ಪಡೆದಿರುವ ಸಂಭಾವನೆಯಿಂದ  ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಪಡೆದ ಸಂಭಾವನೆ ಎಷ್ಟು?
 

Actress Urvashi Rautela who is chasing Rishabh Pant is again in the news because of Waltair Veerayya
Author
First Published Jan 25, 2023, 5:04 PM IST

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ  ಊರ್ವಶಿ ರೌಟೇಲಾ (Uravashi Rautela) ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ನಟಿ. ಕ್ರಿಕೆಟಿಗ  ರಿಷಬ್ ಪಂತ್  (Rishab Pant) ಅವರನ್ನು ಬಿಟ್ಟೂಬಿಡದೆ ಕಾಡುತ್ತಿದ್ದ ಈ ನಟಿಯ ಬಗ್ಗೆ ರಿಷಬ್ ಪಂತ್​ ಅಭಿಮಾನಿಗಳು ಹರಿಹಾಯ್ದಿದ್ದರು. ರಿಷಬ್​ ಮತ್ತು ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೂ ರಿಷಬ್​ ಅವರನ್ನು ಊರ್ವಶಿ   ಬಿಡದೇ ಕಾಡುತ್ತಿದ್ದರು.  ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, 'ಅಕ್ಕಾ ನನ್ನ ಬಿಟ್ಟು ಬಿಡು' ಎಂದಿದ್ದರು. ಹೀಗೆ ಈಕೆ ಅವರನ್ನು ಕಾಡಿದ್ದು  ಎಲ್ಲಿಯವರೆಗೆ ಎಂದರೆ ಭೀಕರ ಅಪಘಾತದಲ್ಲಿ ರಿಷಬ್​ ಪಂತ್​ ಆಸ್ಪತ್ರೆಗೆ ದಾಖಲಾಗಿದ್ದರೂ  ಊರ್ವಶಿ ರೌಟೇಲಾ ಅವರ ಹಿಂದೆ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ರಿಷಬ್‌ ಅವರಿಗೆ ಅಪಘಾತವಾಗಿದೆ ಎಂದು ತಿಳಿದಾಗ ಊರ್ವಶಿ  'ಪ್ರಾರ್ಥನೆ' (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್​ ಅಭಿಮಾನಿಗಳು ಛೀಮಾರಿ ಹಾಕಿದ್ದರು.

ಇಂತಿಪ್ಪ ಊರ್ವಶಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಅವರ 'ವಾಲ್ಟೇರ್​ ವೀರಯ್ಯ' (Waltair Veerayya) ಚಿತ್ರದಿಂದ ಆಗಿರುವ ಸುದ್ದಿ.  ತೆಲುಗು ಚಿತ್ರವಾಗಿರುವ 'ವಾಲ್ಟೇರ್​ ವೀರಯ್ಯ' ಬಾಕ್ಸ್ ಆಫೀಸ್ ನಲ್ಲಿ ಅಸಾಧಾರಣವಾಗಿ ಗಳಿಕೆ ಮಾಡುತ್ತಿದೆ. ಸುಮಾರು 140 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ವಿಶ್ವದಾದ್ಯಂತ 156 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಊರ್ವಶಿ ಅವರದ್ದು ಚಿಕ್ಕ ಪಾತ್ರ. ಈಗ ಅವರು ಪಡೆದಿರುವ ಸಂಭಾವನೆಯಿಂದ ಬಹಳ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ದಿನ ಈ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ (success meet)  ಊರ್ವಶಿ ರೌಟೇಲ ಅವರು ಚಿರಂಜೀವಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರೋದು ಅನೇಕರ ಮೆಚ್ಚುಗೆ ಪಡೆದಿದ್ದದ್ದು ನೆನಪಿರಬಹುದು. ಸಂಸ್ಕಾರಯುತ ಹುಡುಗಿ. ಹಿರಿಯರ ಮೇಲೆ ಊರ್ವಶಿಗೆ ಗೌರವವಿದೆ. ಈ ರೀತಿ ಪೀಳಿಗೆಯವರು ಹೀಗೆ ಮಾಡೋದು ಬಹಳ ಅಪರೂಪ" ಎಂದು ಅನೇಕರು ಊರ್ವಶಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Shah Rukh Khan: ಟಾಪ್​ 20 ಸಿನಿಮಾ ಲಿಸ್ಟ್​ ರಿಲೀಸ್​: ಶಾರುಖ್​ ಖಾನ್​ಗೆ ಬಿಗ್​ ಶಾಕ್​!

ಆದರೆ ಇದೇ ಸಿನಿಮಾದಲ್ಲಿ ಈಕೆ ಪಡೆದಿರುವ ಸಂಭಾವನೆ ಮೇಲೆ ಅನೇಕರ ಕಣ್ಣು ಬಿದ್ದಿದ್ದು, ಮತ್ತೊಮ್ಮೆ ಈಕೆ ಸುದ್ದಿಯಲ್ಲಿದ್ದಾರೆ. ಬಾಬಿ ಕೋಲಿ ನಿರ್ದೇಶನದ ಈ ಆಕ್ಷನ್ ಕಾಮಿಡಿ ಡ್ರಾಮಾದಲ್ಲಿ ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳನ್ನು ನಂಬುವುದಾದರೆ, ಅವರು ಚಿತ್ರಕ್ಕಾಗಿ ಸುಮಾರು 50 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ. ಈ ಚಿತ್ರದಲ್ಲಿ ರವಿತೇಜ ಎರಡನೇ ಪ್ರಮುಖ ಪಾತ್ರದಲ್ಲಿದ್ದು, ಎಸಿಪಿ ವಿಕ್ರಮ್ ಸಾಗರ್ ಅವರ ಪಾತ್ರ. ತೆಲುಗು ಚಿತ್ರರಂಗದಲ್ಲಿ ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿ ಈ ಚಿತ್ರಕ್ಕಾಗಿ ಸುಮಾರು 17 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಚಿತ್ರದ ನಾಯಕಿ ಶ್ರುತಿ ಹಾಸನ್ (Shruthi Hassan). ಇವರು ರಾ ಏಜೆಂಟ್ ಪಾತ್ರ ನಿರ್ವಹಿಸಿದ್ದಾರೆ.  ಈ ಚಿತ್ರಕ್ಕಾಗಿ ಅವರು ಸುಮಾರು 2.5 ಕೋಟಿ ಪಡೆದಿದ್ದಾರೆ.  ಚಿತ್ರದಲ್ಲಿ ಪ್ರಕಾಶ್ ರಾಜ್ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಮೈಕೆಲ್ ಸೀಸರ್. ಈ ಪಾತ್ರಕ್ಕಾಗಿ ಪ್ರಕಾಶ್ ರಾಜ್ ಸುಮಾರು 1.5 ಕೋಟಿ ರೂ. ಪಡೆದಿದ್ದಾರೆ. 

ಇನ್ನು  ಊರ್ವಶಿ ರೌಟೇಲಾ ಅವರ ಸಂಭಾವನೆ ಹೇಳುವುದಾದರೆ, ಇಲ್ಲಿ ಈಕೆಯದ್ದು  ಐಟಂ ಸಾಂಗ್​ (Item song) ಅಷ್ಟೇ. ಅದು ಅಬ್ಬಬ್ಬಾ ಎಂದರೆ ಮೂರು ನಿಮಿಷಗಳದ್ದು. ಈ ಮೂರು ನಿಮಿಷಕ್ಕೆ ಈಕೆ ಪಡೆದಿರುವುದು ಬರೋಬ್ಬರಿ ಎರಡು ಕೋಟಿ ರೂಪಾಯಿಗಳಂತೆ! ರಾಷ್ಟ್ರ ಪ್ರಶಸ್ತಿ ವಿಜೇತ ಬಾಬಿ ಸಿಂಹ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ (Gangster) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ಚಿತ್ರಕ್ಕಾಗಿ ಸುಮಾರು 85 ಲಕ್ಷ ರೂ. ಪಡೆದುಕೊಂಡಿದ್ದಾರೆ. ಕ್ಯಾಥರೀನ್ ತೆರೇಸಾ ಈ ಚಿತ್ರದಲ್ಲಿ ಡಾ.ನಿತ್ಯ ಪಾತ್ರವನ್ನು ನಿರ್ವಹಿಸಿದ್ದಾರೆ  ಈ ಪಾತ್ರಕ್ಕಾಗಿ ಅವರು ಸುಮಾರು 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಚಿತ್ರಕ್ಕೆ ರಾಜೇಂದ್ರ ಪ್ರಸಾದ್ ಸುಮಾರು 40 ಲಕ್ಷ ರೂಪಾಯಿ ಪಡೆದಿದ್ದಾರೆ. ಚಿತ್ರದಲ್ಲಿ ಅವರದ್ದು ಎಸ್ ಐ ಸೀತಾಪತಿಯ ಪಾತ್ರ. ಎಲ್ಲರೂ ತಂತಮ್ಮ ಪಾತ್ರಕ್ಕೆ ತಕ್ಕಂತೆ ಸಂಭಾವನೆ ಪಡೆದುಕೊಂಡಿದ್ದರೆ ಊರ್ವಶಿ ಎರಡು ಕೋಟಿ ರೂಪಾಯಿ ಪಡೆದಿರುವುದು ಭಾರಿ ಸುದ್ದಿಯಾಗಿದೆ. 

RRR ಯಶಸ್ಸಿನ ಬೆನ್ನಲ್ಲೇ ರಾಜಮೌಳಿಗೆ ನಿರ್ಮಾಪಕ ರಾಮ್​ಗೋಪಾಲ್ ವರ್ಮಾ ಕೊಲೆ ಬೆದರಿಕೆ!

Follow Us:
Download App:
  • android
  • ios