ಬಾಲಿವುಡ್‌ನಲ್ಲಿ 1 ಕೋಟಿ ಸಂಭಾವನೆ ಪಡೆದ ಈ ಮೊದಲ ನಟಿ, ಅಮಿತಾಭ್‌ ಜೊತೆ ನಟಿಸೋಲ್ಲ ಎಂದಿದ್ದಳು!

ಪುರುಷ ಪ್ರಧಾನ ಚಿತ್ರರಂಗದಲ್ಲಿ ತನ್ನ ನಟನೆಯ ಉತ್ತುಂಗದಲ್ಲಿ, ಒಬ್ಬ ನಟಿ ತನ್ನ ಸಹ-ನಟನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಳು. ಬಾಲಿವುಡ್‌ನಲ್ಲಿ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ಹೀರೋಯಿನ್‌ ಕೂಡ ಆಕೆಯೇ.

Actress Sridevi who got 1 crore first in hindi films, said no to Amitabh Bachchan films bni

ಬಾಲಿವುಡ್‌ ಆಗಲೀ, ಸೌತ್‌ ಇಂಡಿಯಾ ಚಲನಚಿತ್ರ ಇಂಡಸ್ಟ್ರಿ ಆಗಲೀ, ಯಾವಾಗಲೂ ಪುರುಷ ಪ್ರಧಾನವಾಗಿಯೇ ಇದೆ. ಇಲ್ಲಿ ಶಾರುಖ್‌ ಖಾನ್‌ಗೆ ಒಂದು ಫಿಲಂಗೆ 100 ಕೋಟಿ ಸಂಭಾವನೆ ಸಿಕ್ಕಿದರೆ ಅದೇ ಫಿಲಂನ ಹೀರೋಯಿನ್‌ಗೆ ಸಿಗುವುದು 10 ಕೋಟಿಗಿಂತಲೂ ಕಡಿಮೆ. ಆದರೆ ಒಬ್ಬಳು ನಟಿ ಮಾತ್ರ, ತನ್ನ ನಟನೆಯ ಉತ್ತುಂಗ ಕಾಲದಲ್ಲಿ, ತನ್ನ ಫಿಲಂನ ಹೀರೋ ಸೂಪರ್‌ ಸ್ಟಾರ್‌ ಆಗಿದ್ದಳೂ, ಆತನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಳು! ಮತ್ತು ಅವಳು ಬಾಲಿವುಡ್‌ನಲ್ಲಿ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ಹೀರೋಯಿನ್‌ ಕೂಡ ಹೌದು!

ಹೀರೋಗಳಿಗೆ ಮಾತ್ರ ಭಾರೀ ಮೊತ್ತ ಸಿಗುತ್ತಿದ್ದಾಗ, ತನಗೆ ಅರ್ಹವಾದದ್ದನ್ನು ಖಾತ್ರಿಪಡಿಸಿಕೊಂಡ ನಟಿ ಈಕೆ. ಇವಳು ಬೇರೆ ಯಾರೂ ಅಲ್ಲ, ಶ್ರೀದೇವಿ. ಆ ಕಾಲದಲ್ಲೂ ಆಕೆ ಹೀರೋಗಿಂತ ಜಾಸ್ತಿ ಚಾರ್ಜ್ ಮಾಡುತ್ತಿದ್ದಳು. ಆ ನಟಿಯ ತಾರಾ ಮೌಲ್ಯ ಎಷ್ಟಿತ್ತೆಂದರೆ ಅಮಿತಾಭ್ ಬಚ್ಚನ್ ಜೊತೆ ಕೂಡ ಕೆಲಸ ಮಾಡಲು ಆಕೆ ಬಹಿರಂಗವಾಗಿ ನಿರಾಕರಿಸಿದಳು. 

ಭಾರತೀಯ ಚಿತ್ರರಂಗದ "ಮೊದಲ ಮಹಿಳಾ ಸೂಪರ್‌ಸ್ಟಾರ್" ಎಂದು ಕರೆಯಲ್ಪಡುವ ಈ ನಟಿ ತನ್ನ ನಾಲ್ಕನೇ ವಯಸ್ಸಿನಲ್ಲಿ ತಮಿಳು ಚಲನಚಿತ್ರ ಕಂದನ್ ಕರುನೈ (1967) ನಲ್ಲಿ ಬಾಲ್ಯದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆರೆಯ ಮೇಲೆ ಹೀರೋಯಿನ್‌ ಆಗಿ ಆಕೆಯ ಮೊದಲ ಪಾತ್ರ, 1976 ರಲ್ಲಿ ಆಕೆಯ 13 ನೇ ವಯಸ್ಸಿನಲ್ಲಿ ಬಂತು. ಶೀಘ್ರದಲ್ಲೇ ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಮಹಿಳಾ ತಾರೆಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಳು. 1979ರಲ್ಲಿ ಈ ನಟಿ ಅಮೋಲ್ ಪಾಲೇಕರ್ ಅವರು ಹೀರೋ ಆಗಿದ್ದ ಸೋಲ್ವಾ ಸಾವನ್ ಎಂಬ ಡ್ರಾಮಾ ಚಲನಚಿತ್ರದೊಂದಿಗೆ ಹಿಂದಿ ಚಿತ್ರರಂಗದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು. 

ಈಕೆ ಅಮಿತಾಭ್‌ ಬಚ್ಚನ್‌ ಜೊತೆಗೆ ನಟಿಸಲು ನಿರಾಕರಿಸಿದ್ದೇಕೆ? ನಿರ್ಮಾಪಕ ಮತ್ತು ನಿರ್ದೇಶಕ ಶಶಿ ಕಪೂರ್ ಅವರು ಅಮಿತಾಭ್‌ ಬಚ್ಚನ್ ಅಭಿನಯದ ಅಜೂಬಾದಲ್ಲಿ ಶ್ರೀದೇವಿಗೆ ಆರಂಭದಲ್ಲಿ ಒಂದು ಪಾತ್ರವನ್ನು ನೀಡಿದ್ದರು. ಅವರೇನೋ ಆಕೆಯನ್ನು ಕರೆತರಲು ಉತ್ಸುಕರಾಗಿದ್ದರು. ಅಮಿತಾಭ್‌ ಕೂಡ ಒಪ್ಪಿದ್ದರು. ಆದರೆ ಶ್ರೀದೇವಿಗೆ ತನ್ನ ಪಾತ್ರದ ಬಗ್ಗೆ ತನ್ನದೇ ನಿರೀಕ್ಷೆಗಳಿದ್ದವು. ಅಮಿತಾಭ್‌ಗೆ ಸರಿಸಮವಾದ ಸ್ಕ್ರೀನ್‌ ಸಮಯ ತನಗೂ ಬೇಕು ಎಂಬುದು ಆಕೆಯ ಬೇಡಿಕೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಕಾರಣ ಶ್ರೀದೇವಿ ಅದರಲ್ಲಿ ನಟಿಸಲಿಲ್ಲ. 

ಇದೇ ವೇಳೆಗೆ, ಅಮಿತಾಭ್‌ ಬಚ್ಚನ್‌ ಮತ್ತು ಶ್ರೀದೇವಿ ಇಬ್ಬರ ಸಂಭಾವನೆಯ ಮೊತ್ತವೂ ಆಕಾಶಕ್ಕೇರಿತ್ತು. ಇಬ್ಬರನ್ನೂ ಒಂದೇ ಚಿತ್ರದಲ್ಲಿ ತರುವುದು ನಿರ್ಮಾಪಕರ ಜೇಬಿಗೆ ಹೊರೆಯಾಗಿತ್ತು. ಆ ಹೊತ್ತಿಗೆ, ಶ್ರೀದೇವಿ ತನ್ನ ಪಾತ್ರಕ್ಕೆ ಅಮಿತಾಭ್‌ಗೆ ಸಮಾನ ಅಥವಾ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪರದೆಯ ಸಮಯವನ್ನು ಹೊಂದಿರದ ಹೊರತು ಅಮಿತಾಭ್‌ ವಿರುದ್ಧದ ಚಿತ್ರಗಳನ್ನು ತಿರಸ್ಕರಿಸಿದಳು. ಅಂತಿಮವಾಗಿ, ಡಿಂಪಲ್ ಕಪಾಡಿಯಾ ಆಕೆಯ ಸ್ಥಾನಕ್ಕೆ ಪಾತ್ರರಾದರು.

ಕನ್ನಡದಲ್ಲೇ ಹಾಡು ಹೇಳಿ ಕನ್ನಡಿಗರ ಮನಗೆದ್ದ ಮಾರ್ಟಿನ್​ ಸಿನಿಮಾ ನಟಿ ವೈಭವಿ ಶಾಂಡಿಲ್

80 ಮತ್ತು 90 ರ ದಶಕದಲ್ಲಿ, ಶ್ರೀದೇವಿ ಪ್ರತಿ ಚಿತ್ರಕ್ಕೆ 1 ಕೋಟಿ ರೂಪಾಯಿಗಳನ್ನು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಆ ಸಮಯದಲ್ಲಿ ಕೇವಲ ಪುರುಷ ನಟರು ಮಾತ್ರ ಅಷ್ಟು ಹೆಚ್ಚಿನ ಶುಲ್ಕವನ್ನು ಗಳಿಸುತ್ತಿದ್ದರು. ಶ್ರೀದೇವಿ ನಾಯಕರಿಗಿಂತ ಹೆಚ್ಚು ಗಳಿಸುವ ಮೂಲಕ ಎಲ್ಲ ಕಲ್ಪನೆಗಳನ್ನು ಮುರಿದಳು. ಶ್ರೀದೇವಿಯ ತಾಯಿ ಆಕೆಯ ವೃತ್ತಿಜೀವನವನ್ನು ನಿರ್ವಹಿಸುತ್ತಿದ್ದಳು. ಆಕೆ ಚಾಣಾಕ್ಷೆ, ಮಾತಿನ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಳು.

ʼಮಿಸ್ಟರ್ ಇಂಡಿಯಾʼ ನಿರ್ಮಾಣದ ಸಮಯದಲ್ಲಿ, ಆಕೆ ಆರಂಭದಲ್ಲಿ 10 ಲಕ್ಷ ರೂ ಕೇಳಿದಳು. ಆದರೆ ನಿರ್ಮಾಪಕ ಬೋನಿ ಕಪೂರ್ ಅದರ ಬದಲಿಗೆ 11 ಲಕ್ಷ ರೂ. ಕೊಟ್ಟರು. ಇದನ್ನು ನೆನಪಿಸಿಕೊಂಡ ಬೋನಿ ಕಪೂರ್ ಹೇಳುತ್ತಾರೆ: “ಆಗಿನ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಶ್ರೀದೇವಿ. ಆಕೆ ಸುಮಾರು 8–8.5 ಲಕ್ಷ ರೂಪಾಯಿಗೆ ಚಿತ್ರ ಮಾಡಿದ್ದಾಳೆ" ಎಂದಿದ್ದಾನೆ. ಶ್ರೀದೇವಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಆಕೆಯ ಅನುಪಮ ನಟನೆ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದೆ.

ಕೈ ಕೈ ಹಿಡಿದುಕೊಂಡು ಬಂದ ಸಮಂತಾ? ಇವರೇನಾ ಸ್ಯಾಮ್ ಹೊಸ ಗೆಳೆಯ?
 

Latest Videos
Follow Us:
Download App:
  • android
  • ios