ಸುದ್ದಿಯಾಗುತ್ತಲೇ ಇಳಿಯಿತು ನಟಿಯ ಕೊಬ್ಬು! ಪೊಲೀಸ್ ಬಳಿ ಕ್ಷಮೆ ಕೋರುವಲ್ಲೂ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ
ರಾಂಗ್ ರೂಟ್‌ನಲ್ಲಿ ಬಂದ ಬಗ್ಗೆ ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ನಟಿ ಕೊನೆಗೂ ಕ್ಷಮೆ ಕೋರಿದ್ದಾರೆ. ಅವರು ಹೇಳಿದ್ದೇನು?
ನಟಿಯೊಬ್ಬರು ರಾಂಗ್ ರೂಟ್‌ನಲ್ಲಿ ಬಂದಿದ್ದೂ ಅಲ್ಲದೇ, ಕರ್ತವ್ಯ ನಿರತ ಪೊಲೀಸರಿಗೇ ಆವಾಜ್ ಹಾಕಿ, ಸಮವಸ್ತ್ರ ಹರಿದ ಸುದ್ದಿ ಕಳೆದ ಎರಡು ದಿನಗಳಿಂದ ಭಾರಿ ಸುದ್ದಿ ಮಾಡುತ್ತಿದೆ. ಸೌಮ್ಯ ಜಾನು ಎನ್ನುವ ಟಾಲಿವುಡ್ ನಟಿ ಈ ರೀತಿ ರಂಪಾಟ ಮಾಡಿದ್ದರು. 'ತಡಾಕ', 'ಚಂದಮಾನ ಕಥಲು' ಹಾಗೂ 'ಲಯನ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿರೋ ನಟಿ, ಟ್ರಾಫಿಕ್ ಪೊಲೀಸ್ ವಿರುದ್ಧ ನಡೆದುಕೊಂಡ ರೀತಿಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಅಷ್ಟಕ್ಕೂ ಆಗಿದ್ದೇನೆಂದರೆ, ತಮ್ಮ ಜಾಗ್ವಾರ್ ಕಾರಿನಲ್ಲಿ ಪ್ರಯಾಣಿಸುವಾಗ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದ್ದ ನಟಿ, ಟ್ರಾಫಿಕ್ ಪೊಲೀಸ್‌ಗೆ ಆವಾಜ್ ಹಾಕಿದ್ದರು. ಟ್ರಾಫಿಕ್ ಪೊಲೀಸ್ ಕಾರು ತಡೆದು . ದಂಡ ಕಟ್ಟುವಂತೆ ಹೇಳಿದ್ದ ಕಾರಣ, ಈಕೆಯ ಕೋಪ ನೆತ್ತಿಗೇರಿತ್ತು. ಎಷ್ಟೆಂದರೂ ಸೆಲೆಬ್ರಿಟಿ ಅಲ್ಲವೆ? ತಾವ್ಯಾಕೆ ದಂಡ ಕಟ್ಟಬೇಕು ಎಂದು ಕೇಳಿದ್ದೂ ಅಲ್ಲದೇ ನಡು ರಸ್ತೆಯಲ್ಲಿಯೇ ಗಲಾಟೆ ಶುರು ಮಾಡಿದ್ದರು.
ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್ ಆಗ್ತಿದ್ದಂತೆಯೇ ಮಗುವಿನ ಬಿಗ್ ಅಪ್ಡೇಟ್ ನೀಡಿದ ರಣವೀರ್ ಸಿಂಗ್!
ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೌಮ್ಯ ಹಾಗೂ ಟ್ರಾಫಿಕ್ ಹೋಮ್ ಗಾರ್ಡ್ಗಳ ನಡುವಣ ವಾಗ್ವಾದದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ಟ್ರಾಫಿಕ್ ಹೋಮ್ ಗಾರ್ಡ್ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಅವರು ಟ್ರಾಫಿಕ್ ಗಾರ್ಡ್ಗಳ ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸ್‌ರ ಸಮವಸ್ತ್ರವನ್ನೂ ನಟಿ ಹರಿದಿದ್ದರು. ಈ ಹಿನ್ನೆಲೆಯಲ್ಲಿ ಬಂಜಾರ ಹಿಲ್ಸ್ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಟಿ ಎಚ್ಚೆತ್ತುಕೊಂಡು ನಟಿ ಸ್ಥಳೀಯ ಚಾನೆಲ್ ಅನ್ನು ಸಂಪರ್ಕಿಸಿ ತಮ್ಮ ತಪ್ಪು ಇಲ್ವೇ ಇಲ್ಲ ಎಂದಿದ್ದರು. ಇದೀಗ ಎಲ್ಲಾ ದಾಖಲೆಗಳೂ ಇವರ ವಿರುದ್ಧ ಬಂದಿದ್ದ ಹಿನ್ನೆಲೆಯಲ್ಲಿ, ಕೊನೆಗೂ ಕ್ಷಮೆ ಕೋರಿದ್ದಾರೆ. ತಾನು ಕುಡಿದು ವಾಹನ ಚಲಾಯಿಸುತ್ತಿದ್ದ ಎನ್ನುವುದು ಸುಳ್ಳು ಎಂದಿರುವ ನಟಿ, ಅಮ್ಮನಿಗೆ ತುರ್ತು ಔಷಧ ಬೇಕಿತ್ತು. ಆ ಗಾಬರಿಯಲ್ಲಿ ರಾಂಗ್ ಸೈಡ್‌ಗೆ ಹೋಗಿದ್ದೆ. ಅಮ್ಮನಿಗೆ ಹುಷಾರು ಇಲ್ಲದ ಹಿನ್ನೆಲೆಯಲ್ಲಿ ತುಂಬಾ ನೋವಿನಲ್ಲಿದ್ದೆ. ಆದ ಕಾರಣ ಅಚಾತುರ್ಯವಾಯಿತು ಎಂದು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ, ಟ್ರಾಫಿಕ್ ಪೊಲೀಸ್ ನನ್ನನ್ನು ಕೆಟ್ಟದಾಗಿ ನಿಂದಿಸಿದರು. ಹಾಗಾಗಿ ನಾನು ಗರಂ ಆಗಿದ್ದೆ ಎಂದಿದ್ದರು. ಇದೀಗ ತಪ್ಪು ಒಪ್ಪಿಕೊಂಡಿದ್ದಾರೆ.
ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಮದ್ವೆ ನಿಜನಾ? ನಟಿ ಹೇಳಿದ್ದೇನು?