ಶೋಭಿತಾ ದುಲಿಪಾಲಾ ದುಬಾರಿ ಉಡುಗೆ ತೊಡುಗೆಗಳಿಂದ ಸುದ್ದಿಯಲ್ಲಿದ್ದಾರೆ. ಅವರ ಈ ವೈಭವದ ಪ್ರದರ್ಶನ ಸಮಂತಾவுಗೆ ಕಿರಿಕಿರಿ ಉಂಟುಮಾಡಲು ಎಂಬ ವದಂತಿ ಹಬ್ಬಿದೆ. ಇದು ನಿಜವೋ ಸುಳ್ಳೋ ತಿಳಿದಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ.

ನಟಿ ಹಾಗೂ ತೆಲುಗು ನಟ, ಅಕ್ಕಿನೇನಿ ನಾಗಾರ್ಜುನ ಮಗ ನಾಗಚೈತನ್ಯ ಹೆಂಡತಿಯಾಗಿರುವ ಶೋಭಿತಾ ದುಲಿಪಾಲ (Sobhita Dhulipala) ಈಗ ಭಾರೀ ಟ್ರೆಂಡ್‌ನಲ್ಲಿ ಇದ್ದಾರೆ. ಅಂದ್ರೆ, ಅಚವರ ಅಭಿನಯದ ಯಾವುದೋ ಸಿನಿಮಾ ಸೆಟ್‌ ಏರಿದ್ದೋ ಅಥವಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದೋ ಅಲ್ಲವೇ ಅಲ್ಲ. ಬದಲಿಗೆ ಅವರು ಧರಿಸುತ್ತಿರುವ ಡ್ರೆಸ್‌, ಮಾಡುತ್ತಿರುವ ಸ್ಟೈಲ್ ಎಲ್ಲರ ತಲೆ ತಿರುಗಿಸುತ್ತಿದೆ. ಅಂದರೆ, ಅವರು ಅಷ್ಟೊಂದು ಕ್ವಾಸ್ಟ್ಲೀ ಉಡುಪು ಧರಿಸುತ್ತಿದ್ದಾರೆ. ಅದಕ್ಕೆ ಮ್ಯಾಚಿಂಗ್ ಜ್ಯುವೆಲ್ಲರಿಯೀ ಜೊತೆಗೇ ಇರುತ್ತದೆ ಎಂಬುದನ್ನು ಮತ್ತೆಮತ್ತೆ ಬಿಡಿಸಿ ಹೇಳಬೇಕಿಲ್ಲ. 

ಹೌದು, ನಟಿ ಶೋಭಿತಾ ಅವರು ಈಗ ಆಗರ್ಭ ರಿಚ್ ನಟನ ಹೆಂಡತಿ, ಶ್ರೀಮಂತರ ಮನೆಯ ಸೊಸೆ. ಈಗಲ್ಲದೇ ಇನ್ಯಾವಾಗ ಧರಿಸೋದು ಅಂತೀರಾ? ಒಂದರ್ಥದಲ್ಲಿ ಹೌದು, ಆದರೆ, ಅಕ್ಕಿನೇನಿ ನಾಗಾರ್ಜುನರ ಸೊಸೆ ಆಗಿದ್ದೇ ಆಗಿದ್ದು, ನಟಿ ಶೋಭಿತಾ ದುಲಿಪಾಲ ಕಾಲು ಈ ಭೂಮಿಯಿಂದ ನಾಲ್ಕು ಇಂಚು ಮೇಲಕ್ಕೇ ಇದೆ, ಅವರು ಭೂಮಿಯ ಮೇಲೇ ನಡೆಯುತ್ತಿದ್ದರೂ ಅವರ ಆಟಿಟ್ಯೂಡ್ ಆಕಾಶದಲ್ಲೇ ಹಾರಾಡುವಂತಿದೆ ಎಂದು ಆಪ್ತರೇ ಮಾತಾಡುತ್ತಿದ್ದಾರೆ. ಈ ಸಂಗತಿ ಈಗ ಗುಟ್ಟಾಗಿ ಇಲ್ಲ, ರಟ್ಟಾಗಿಹೋಗಿದೆ!, ಬರೀ ರಟ್ಟಾಗಿದ್ದಲ್ಲ, ಸೋಷಿಯಲ್ ಮೀಡಿಯಾ ಮೂಲಕ ವಿಶ್ವಕ್ಕೆಲ್ಲಾ ಹಬ್ಬಿದೆ!

ಅವರೇನೋ ಬೇಕಂತಲೇ ಅಷ್ಟೊಂದು ಸ್ಟೈಲ್ ಮಾಡುತ್ತಿದ್ದಾರಾ? ಅಥವಾ ಅದಕ್ಕೆ ಇನ್ನೇನಾದ್ರೂ ಕಾರಣ ಇದ್ಯಾ ಎಂದು ಹಲವರು ತಲೆ ಕೆಡಿಸಿಕೊಂಡು, ತಲೆ ನೋವು ತಂದುಕೊಂಡಿದ್ದಾರೆ. ಯಾವುದೇ ನೋವಿನ ಬಾಮ್‌ಗೂ ಈ ತಲೆನೋವು ಜಗ್ಗದೇ ಬಗ್ಗದೇ ಇದ್ದಾಗ ಕೊನೆಗೊಮ್ಮೆ ಶೋಭಿತಾ ಸ್ಟೈಲ್ ಗುಟ್ಟು ಅರ್ಥವಾಗಿದೆ. ಅದು, ಶೋಭಿತಾ ಇಷ್ಟೆಲ್ಲಾ ಖರ್ಚು ಮಾಡುತ್ತಿರುವುದು, ಸೌಂದರ್ಯದ ಸಖಿಯಂತೆ ಹೊಳೆಯುತ್ತಿರುವುದು ನಟಿ ಸಮಂತಾ ಹೊಟ್ಟೆ ಉರಿಸಲು ಅಂತ!

ಅದು ನಿಜವೋ ಸುಳ್ಳೋ ಗೊತ್ತಿಲ್ಲ! ಆದರೆ, ಸಮಂತಾ ಆಪ್ತರು, ಅಭಿಪಮಾನಿಗಳು ಹಾಗಂತ ಅಂದ್ಕೊಡಿದಾರೆ. ಅಥವಾ, ಶೋಭಿತಾ ದುಲಿಪಾಲರನ್ನು ಕಂಡರೆ ಆಗಲ್ಲಾ ಅನ್ನುವವರು ಈ ಸುದ್ದಿ ಹರಿಯಬಿಟ್ಟಿದಾರೆ. ಆದರೆ, ಸುದ್ದಿ ಸುಳ್ಳೋ ಸತ್ಯವೋ, ಅದು ಹೊರಬಿದ್ದು ಸೋಷಿಯಲ್ ಮೀಡಿಯಾದಲ್ಲಿ ಓಡಾಡಲು ಶುರು ಮಾಡಿಬಿಟ್ಟರೆ ಮುಗಿಯುತು! ಆ ಹಾರಾಟವನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಇನ್ನೊಬ್ಬರ ಇಂತಹ ಸುದ್ದಿ ಸಿಗೋ ತನಕ ಈ ಸುದ್ದಿ ರೆಕ್ಕೆಪುಕ್ಕ ಸೇರಿಸಿಕೊಂಡು ಹಾರಾಡುತ್ತಲೇ ಇರುತ್ತದೆ.