Asianet Suvarna News Asianet Suvarna News

ಬಿಕಿನಿ ಧರಿಸಿದ್ದಕ್ಕೆ ಅಸಭ್ಯವಾಗಿ ವರ್ತಿಸಿದ ಮೇಕಪ್ ಮ್ಯಾನ್; ಎಲ್ಲೆಲ್ಲಿ ಹೇಗೆಲ್ಲ ಮುಟ್ಟಿದ್ದ ನಂಗೆ ಗೊತ್ತು ಎಂದು ಶಕೀಲಾ

ಮಲಯಾಳಂನಲ್ಲಿ ಮಾತ್ರವಲ್ಲ ತೆಲುಗು-ತಮಿಳು ಸಿನಿಮಾಗಳಿಗೂ ಸಮಿತಿ ಬರಬೇಕು ಎಂದು ಡಿಮ್ಯಾಂಡ್ ಇಟ್ಟ ನಟಿ ಶಕೀಲಾ......

Actress Shakeela reacts to Malayalam hema committee statements and me too controversy vcs
Author
First Published Aug 29, 2024, 2:01 PM IST | Last Updated Aug 29, 2024, 2:01 PM IST

90ರ ದಶಕದಲ್ಲಿ ನೀಲಿ ತಾರೆಯಾಗಿ ಮಿಂಚಿದ ನಟಿ ಶಕೀಲಾ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ಹಾಟ್ ಆಂಡ್ ಬೋಲ್ಡ್ ನಟಿಯರು ಎದುರಿಸುವ ಕಷ್ಟಗಳು ಆಗಾಗ ಸಂದರ್ಶನಗಳಲ್ಲಿ ಶಕೀಲಾ ಹಂಚಿಕೊಳ್ಳುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ಆರೋಪ ಮತ್ತು ಹೇಮಾ ಮಹಿಳಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶಕೀಲಾ ಪ್ರತಿಕ್ರಿಯೆ ನೀಡಿದ್ದಾರೆ. 

ಮಲಯಾಳಂ ಚಿತ್ರರಂಗದಲ್ಲಿ ಸಮಿತಿ ರಚನೆಯಾದಂತೆ ಅಕ್ಕ ಪಕ್ಕದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡ ಆಯೋಗ ರಚನೆಯಾಗಬೇಕು ಏಕೆಂದರೆ ಮಲಯಾಳಂ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗದಲ್ಲಿ ವ್ಯವಸ್ಥೆ ಅತಿ ಹೆಚ್ಚು ಕೆಟ್ಟದಾಗಿದೆ. ಹೇಮಾ ಸಮಿತಿ ಅಲ್ಲಿಸಿರುವ ವರದಿಯಲ್ಲಿ ಎಣ್ಣೆ ಹೊಡೆದು ನಾಯಕಿಯರ ರೂಮಿಗೆ ನುಗ್ಗುವ ಸಂಪ್ರದಾಯವಿದೆ ಎಂದಿದ್ದಾರೆ ಇದನ್ನು ನಾನು ಒಪ್ಪಿಕೊಳ್ಳುತ್ತೀನಿ ಎಂದು ಸಂದರ್ಶನವೊಂದರಲ್ಲಿ ಶಕೀಲಾ ಮಾತನಾಡಿದ್ದಾರೆ. 

ಬೆನ್ನಿನ ಮೇಲೆ ಶಂಕು,ಚಕ್ರ ಟ್ಯಾಟೂ ಹಾಕಿಸಿದ ಕಿರುತೆರೆ ನಟಿ ಅನು; ತಿಮ್ಮಪ್ಪನಿಗಿದು ಅವಮಾನ ಎಂದ ನೆಟ್ಟಿಗರು!

ಶಕೀಲಾ ನೆನಪಿಸಿಕೊಂಡ ಘಟನೆ: 

ರೂಪಾಶ್ರೀ ಎಂದ ನಟಿ  ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದರು ಆ ಸಮಯದಲ್ಲಿ ನಾಲ್ಕು ಜನರು ಮಧ್ಯಪಾನ ಸೇವಿಸಿ ರೂಪಾಶ್ರೀ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಪಟ್ಟಿದ್ದಾರೆ ಆ ವಿಚಾರ ನನ್ನ ಕಿವಿಗೆ ಬೀಳುತ್ತಿದ್ದಂತೆ ನಾನು ತಕ್ಷಣವೇ ಅಲ್ಲಿಗೆ ಹೋಗಿ ಆ ನಾಲ್ಕು ಜನರನ್ನು ಬೈದು ಕಳುಹಿಸಿದ್ದೀನಿ  ಎಂದು ಶಕೀಲಾ ಹೇಳಿದ್ದಾರೆ.

ಬ್ಲಾಕ್ ಸೀರೆಯಲ್ಲಿ ಮಿಂಚಿದ ನಟಿ ತಾರಾ; ಚೆಂದುಳ್ಳಿ ಚೆಲುವೆನೇ ಎಂದು ಕಾಮೆಂಟ್ ಮಾಡಿದ ಅಂಕಲ್!

ಇನ್ನು ಶಕೀಲಾ ತಮ್ಮ ಮೊದಲ ಚಿತ್ರದಲ್ಲಿ ಬಿಕಿನಿ ಧರಿಸಿ ಮೇಕಪ್‌ಗೆಂದು ಕುಳಿತುಕೊಂಡಾಗ ಮೇಕಪ್ ಮ್ಯಾನ್ ಎಲ್ಲೆಲ್ಲಿ ಹೇಗೆಲ್ಲ ಮುಟ್ಟಿದ್ದ ಅನ್ನುವುದು ನನಗೆ ಮಾತ್ರ ಗೊತ್ತಿದೆ ಆಗ ನನಗೆ ತುಂಬಾ ಹಿಂಸೆ ಆಯ್ತು. ಗೋಲ್‌ಮಾಲ್‌ ಚಿತ್ರದಲ್ಲಿ ಆಕ್ಟ್ ಮಾಡುವಾಗ ವಸ್ತ್ರವಿನ್ಯಾಸಕರೊಬ್ಬರು ನನ್ನ ಮನೆಗೆ ಬಂದು ಅಳತೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಕೂಡ ನನ್ನ ಜೊತೆ ತೀರಾ ಅಸಭ್ಯವಾಗಿ ವರ್ತಿಸಿದ್ದರು ಎಂದಿದ್ದಾರೆ ಶಕೀಲಾ. 

Latest Videos
Follow Us:
Download App:
  • android
  • ios