ನಾಗ ಚೈತನ್ಯ, ಶೋಭಿತಾ ಜೊತೆ ಮದುವೆ ವದಂತಿ ನಡುವೆ, ಸಮಂತಾ, 'ದಿ ಫ್ಯಾಮಿಲಿ ಮ್ಯಾನ್‌' ನಿರ್ದೇಶಕ ರಾಜ್ ಜೊತೆ ಹೊಸ ಜರ್ನಿ ಆರಂಭಿಸಿದ್ದಾರೆ. ರಾಜ್ ಈಗಾಗಲೇ ವಿವಾಹಿತರಾಗಿದ್ದು, ಸಮಂತಾ ಜೊತೆಗಿನ ಸಂಬಂಧದ ಬಗ್ಗೆ ಇಬ್ಬರೂ ಮೌನವಾಗಿದ್ದಾರೆ. ಸಮಂತಾ ನಿರ್ಮಾಪಕಿಯಾಗಿ 'ಶುಭಂ' ಚಿತ್ರ ನಿರ್ಮಿಸಿದ್ದು, ಮೇ 9 ರಂದು ಬಿಡುಗಡೆಯಾಗಿದೆ.

ನಟ ನಾಗ ಚೈತನ್ಯ ಅವರಂತೂ ಶೋಭಿತಾ ಧುಲಿಪಾಲ ಅವರನ್ನು ಮದುವೆ ಆಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗುಸು ಗುಸು ಶುರುವಾಗಿದೆ. ಈಗ ನಟಿ ಸಮಂತಾ ಪ್ರಭು ( Samantha ) ಅವರು ಡೈರೆಕ್ಟರ್‌ ಜೊತೆ ಹೊಸ ಜೀವನ ಶುರು ಮಾಡುವ ಲಕ್ಷಣ ಕಾಣುತ್ತಿದೆ. ಕೆಲ ದಿನಗಳಿಂದ ʼದಿ ಫ್ಯಾಮಿಲಿ ಮ್ಯಾನ್‌ʼ ನಿರ್ದೇಶಕನ ಜೊತೆ ಸಮಂತಾ ಓಡಾಟ ಜಾಸ್ತಿ ಆಗ್ತಿದೆ. ಈಗ ಅವರು ʼಹೊಸ ಜರ್ನಿʼ ಎಂದು ಹೇಳಿದ್ದಾರೆ. 

ಈಗಾಗಲೇ ಮದುವೆ ಆಗಿರೋ ರಾಜ್‌
ಇತ್ತೀಚೆಗೆ ಒಂದಿಷ್ಟು ಫೋಟೋಗಳನ್ನು ಶೇರ್‌ ಮಾಡಿರುವ ಸಮಂತಾ, "ಹೊಸ ಆರಂಭ" ಎಂದು ಹೇಳಿದ್ದಾರೆ. ಇದರಲ್ಲಿ ರಾಜ್‌ ನಿಡಿಮೊರು ಕೂಡ ಇದ್ದಾರೆ. ಇವರಿಬ್ಬರು ಡೇಟ್‌ಮಾಡುತ್ತಿರುವ ವಿಷಯ ಕೇಳಿ ಬರುತ್ತಿರೋದು ನಿನ್ನೆ ಮೊನ್ನೆಯಿಂದಲ್ಲ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಸಾಕಷ್ಟು ಒಟ್ಟಿಗೆ ಕಾಣಿಸಿದ್ದಾರೆ. ಅಂದಹಾಗೆ ಶ್ಯಾಮಿಲಿ ದೇ ಎನ್ನುವವರ ಜೊತೆ ರಾಜ್‌ ಮದುವೆ ಆಗಿದೆ. ರಾಜ್‌ ಅವರ ಪತ್ನಿ ಶ್ಯಾಮಿಲಿ ಅವರು 2023ರಲ್ಲಿ ವಿವಾಹ ವಾರ್ಷಿಕೋತ್ಸವದ ಪೋಸ್ಟ್‌ ಹಂಚಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಪತಿಯ ಜೊತೆಗಿನ ಪೋಸ್ಟ್‌ ಹಂಚಿಕೊಂಡಿಲ್ಲ, ಹಳೇ ಫೋಟೋಗಳನ್ನು ಕೂಡ ಡಿಲಿಟ್‌ ಮಾಡಿಲ್ಲ.

ಡೇಟಿಂಗ್‌ ಬಗ್ಗೆ ಸಮಂತಾ ಏನು ಹೇಳ್ತಾರೆ? 
ಇನ್ನು ಡೇಟಿಂಗ್‌ ಗಾಸಿಪ್ ಬಗ್ಗೆ ಸಮಂತಾ ಆಗಲೀ, ರಾಜ್‌ಆಗಲೀ ಮೌನ ಮುರಿದಿಲ್ಲ. "ಶುಭಂ" ಎನ್ನುವ ಸಿನಿಮಾದಲ್ಲಿ ಸಮಂತಾ ನಟಿಸಿದ್ದಲ್ಲದೆ, ಹಣ ಕೂಡ ಹಾಕಿದ್ದಾರೆ. ಈ ಮೂಲಕ ಅವರು ನಿರ್ಮಾಪಕಿ ಆಗಿ ಬಡ್ತಿ ಪಡೆದಿದ್ದಾರೆ. ಹೈದರಾಬಾದ್‌ಮನೆಯಲ್ಲಿ ತನ್ನ ಶ್ವಾನ, ರಾಜ್‌ ಅವರು ಇರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ. ಇನ್ನು ರಾಜ್‌ಜೊತೆ ಇನ್ನೋರ್ವ ಸ್ನೇಹಿತ ಇರುವ ಫೋಟೋವನ್ನು ಕೂಡ ಸಮಂತಾ ಹಂಚಿಕೊಂಡಿದ್ದಾರೆ. 

ʼದಿ ಫ್ಯಾಮಿಲಿ ಮ್ಯಾನ್ 2' ಸಿರೀಸ್‌ನಿಂದ ಸ್ನೇಹ! 
"ಇದು ನಿಜಕ್ಕೂ ಉದ್ದದ ಜರ್ನಿ. ನಾವು ಈಗ ಇಲ್ಲಿದ್ದೇವೆ. ಮೇ 9ರಂದು ಶುಭಂ ರಿಲೀಸ್‌ ಆಗ್ತಿದೆ" ಎಂದು ಸಮಂತಾ ಅವರು ಸೋಶಿಯಲ್‌ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼದಿ ಫ್ಯಾಮಿಲಿ ಮ್ಯಾನ್ 2' ಸಿರೀಸ್‌ನಲ್ಲಿ ಸಮಂತಾ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಆಕ್ಷನ್‌ ಮಾಡಿದ್ದಲ್ಲದೆ ಬೋಲ್ಡ್‌ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದಲೇ ನಾಗಚೈತನ್ಯ ಹಾಗೂ ಸಮಂತಾ ಮಧ್ಯೆ ಮನಸ್ತಾಪ ಬಂದಿದೆ ಎಂದು ಹೇಳಲಾಗಿತ್ತು. ಅದಾದ ನಂತರದಲ್ಲಿ ʼಸಿಟಡೆಲ್; ಹನಿ ಬನಿʼ ಸಿನಿಮಾದಲ್ಲಿ ಕೂಡ ಸಮಂತಾ, ರಾಜ್‌ ಒಟ್ಟಿಗೆ ಕೆಲಸ ಮಾಡಿದ್ದರು. 

'ಟ್ರಾಲಾ ಮೂವಿಂಗ್ ಪಿಕ್ಚರ್ಸ್' ಅಡಿಯಲ್ಲಿ ಸಮಂತಾ ಅವರು ನಿರ್ಮಿಸಿರುವ ಮೊದಲ ಸಿನಿಮಾ 'ಶುಭಂ'. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಪ್ರವೀಣ್ ಕಂದ್ರೇಗುಲ ನಿರ್ದೇಶನದ ಈ ಚಿತ್ರ ಮೇ 9 ರಂದು ರಿಲೀಸ್‌ ಆಗಲಿದೆ. 

ಸಿನಿಮಾ ಬಗ್ಗೆ ಸಮಂತಾ ಗ್ಯಾರಂಟಿ! 
ಚರಣ್ ಪೇರಿ, ಹರ್ಷಿತ್ ರೆಡ್ಡಿ, ಗವಿರೆಡ್ಡಿ ಶ್ರೀನಿವಾಸ್, ಶ್ರಾವಣಿ ಲಕ್ಷ್ಮಿ, ಶ್ರೀಯ ಕೊಂತಂ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯವಾಡದಲ್ಲಿ ಅದ್ದೂರಿಯಾಗಿ ಈ ಸಿನಿಮಾ ರಿಲೀಸ್‌ ಮಾಡಲಾಗಿತ್ತು. ವಿಜಯವಾಡಕ್ಕೆ ಬಂದರೆ ನಮ್ಮ ಸಿನಿಮಾ ಬ್ಲಾಕ್ ಬಸ್ಟರ್ ಆಗತ್ತೆ, ಹಾಗಾಗಿ 'ಶುಭಂ' ಸಿನಿಮಾವನ್ನೂ ಕೂಡ ಬ್ಲಾಕ್ ಬಸ್ಟರ್ ಮಾಡ್ತೀರ ಅಲ್ವಾ? ಎಂದು ಸಮಂತಾ ಅವರು ಅಭಿಮಾನಿಗಳನ್ನು ಕೇಳಿದರು. ಶುಭಂ ಸಿನಿಮಾ ನೋಡಿದ ನಂತರ ನೀವು ಥಿಯೇಟರ್‌ನಿಂದ ಹೊರಬರುವಾಗ ನಗ್ತಾ ಬರ್ತೀರಿ. ಇದಂತೂ ಪಕ್ಕಾ. ಇದು ಹಾರರ್ ಕಾಮಿಡಿ ಸಿನಿಮಾ ಅಂತ ಅನಿಸಿದರೂ ಕೂಡ, ಈ ಸಿನಿಮಾದ ನಿಜವಾದ ಕಥೆ ಬೇರೆಯೇ ಇದೆ ಎಂದು ಅವರು ಹೇಳಿದ್ದಾರೆ.