ನಟ ನಾಗಚೈತನ್ಯ ಮತ್ತು ಸಮಂತಾ ವಿಷಯದಲ್ಲೂ ಹಾಗೆ ಆಗಿತ್ತು. ಪ್ರೀತಿಸಿ ಮದುವೆ ಆಗಿದ್ದ ಸಮಂತಾ ನಾಗಚೈತನ್ಯ ಸಂಸಾರ ಸಾಗಿಸಲಾಗದೆ ಡಿವೋರ್ಸ್ ಕೊಟ್ಟು ದೂರಾಗಿದ್ರು. ಇದಾಗಿ ಎರಡೇ ವರ್ಷಕ್ಕೆ ಈಗ ನಾಗ ಚೈತನ್ಯ ..

ಅಂತೆಕಂತೆ ಸುದ್ದಿಗಳೆಲ್ಲಾ ನಿಜವಾಗಿದೆ. ತೆಲುಗು ನಟ ನಾಗಚೈತನ್ಯ (Naga Chaitanya) ಹಾಗೂ ನಟಿ ಶೋಭಿತಾ ದುಲಿಪಾಲ (Sobhitha Dhulipala) ಮದುವೆ ನಿಶ್ಚಯವಾಗಿದೆ. ಸಮಂತಾಗೆ ಡಿವೋರ್ಸ್ ಕೊಟ್ಟ ಬಳಿಕ ಚೈತನ್ಯ ಶೋಭಿತಾ ಜೊತೆ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಎಲ್ಲಾ ಸುಳ್ಳು ಎನ್ನುತ್ತಲೇ ಇದ್ದ ಜೋಡಿ ಇದೀಗ ಉಂಗುರ ಬದಲಿಸಿಕೊಂಡಿದ್ದಾರೆ. ಇದು ನಿನ್ನೆ ನಡೆದ ಕಾರ್ಯಕ್ರಮ. 

ಆದ್ರೆ ಇದರ ಮುಂದುವರೆದ ಭಾಗ ಒಂದಿದೆ..? ಅದನ್ನ ನೋಡಿದ್ರೆ ಸಮಂತಾರನ್ನ ಇಷ್ಟ ಪಡೋ ಗಂಡ್ ಹೈಕ್ಳು ಹೊಟ್ಟೆ ಉರಿದುಕೊಳ್ತಾರೆ. ಬೇಸರ ಮಾಡಿಕೊಳ್ತಾರೆ..? ಹಾಗಾದ್ರೆ ಸಮಂತಾ (Samantha Ruthprabhu) ಕತೆ ಏನು..? ನೋಡೋಣ ಬನ್ನಿ.. ಸಿನಿಮಾ ಸೆಲೆಬ್ರಿಟಿಗಳಿಗೆ ಲವ್, ಬ್ರೇಕಪ್, ಮದುವೆ, ಡಿವೋರ್ಸ್​, ಸಕೆಂಡ್ ಮ್ಯಾರೇಜ್ ಇದೆಲ್ಲಾ ಕಾಮಲ್. ಆದ್ರೆ ಇವರನ್ನ ತೆರೆ ಮೇಲೆ ನೋಡಿ ಆನಂದಿಸಿ ಹೊಗಳಿ ಅಟ್ಟಕ್ಕೇರಿಸಿ ಬೆಳೆಸೋ ಅಭಿಮಾನಿಗಳಿಗೆ ಮಾತ್ರ ಅದೆಲ್ಲಾ ಶಾಕಿಂಗ್ ವಿಚಾರ. 

ನಟ ನಾಗಚೈತನ್ಯ ಮತ್ತು ಸಮಂತಾ ವಿಷಯದಲ್ಲೂ ಹಾಗೆ ಆಗಿತ್ತು. ಪ್ರೀತಿಸಿ ಮದುವೆ ಆಗಿದ್ದ ಸಮಂತಾ ನಾಗಚೈತನ್ಯ ಸಂಸಾರ ಸಾಗಿಸಲಾಗದೆ ಡಿವೋರ್ಸ್ ಕೊಟ್ಟು ದೂರಾಗಿದ್ರು. ಇದಾಗಿ ಎರಡೇ ವರ್ಷಕ್ಕೆ ಈಗ ನಾಗ ಚೈತನ್ಯ ಎರಡನೇ ಮದುವೆ ಆಗಿದ್ದಾರೆ. ಆ ಕಡೆ ಒಡೆದ ಹೃದಯದೊಂದಿಗೆ ನೊಂದು ಬೆಂದಿದ್ದಾರೆ ಸಮಂತಾ.. 

ಐಶ್ವರ್ಯಾ ರೈ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ಸಂಗತಿಗಳು ಇಲ್ಲಿರಬಹುದು ಒಮ್ಮೆ ನೋಡಿ..!

ನಾಗ ಚೈತನ್ಯ ನಿಶ್ಚಿತಾರ್ಥ, ಹಾರ್ಟ್​ ಬ್ರೇಕ್​​ ಎಂದ ಸಮಂತಾ..!
ನಾಗಚೈತನ್ಯ ಎರಡನೇ ಭಾರಿ ಮದುವೆಗೆ ಸಿದ್ಧರಾಗಿದ್ದಾರೆ. ಆದ್ರೆ ನಟಿ ಸಮಂತಾ ರುತ್​ ಪ್ರಭು ಮಾತ್ರ ಇನ್ನೂ ಸಿಂಗಲ್​ ಆಗಿಯೇ ಉಳಿದಿದ್ದಾರೆ. ನಟಿ ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಇದೇ ದಿನ ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಒಂದು ಪೋಸ್ಟ್​ ವೈರಲ್​ ಆಗಿದೆ. 

ಮಾಜಿ ಗಂಡ ಬೇರೆ ನಟಿ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರಿಂದ ಸಮಂತಾ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕೌತುಕ ಇತ್ತು. ನಾಗಚೈತನ್ಯ ನಿಶ್ಚಿತಾರ್ಥದ ದಿನವೇ ಸಮಂತಾ ಒಡೆದ ಹೃದಯದ ಎಮೋಜಿ ಶೇರ್​ ಮಾಡಿದ್ದಾರೆ. 
ಸಮಂತಾ ತನ್ನ ಇನ್ಸ್​​ಸ್ಟಾ ಖಾತೆಯಲ್ಲಿ ಹಾಕಿರೋ ಒಡೆದ ಹೃದಯದ ಎಮೋಜಿ ನಾಗಚೈತನ್ಯ ಎರಡನೇ ಮದುವೆಯ ನಿಶ್ಚಿತಾರ್ಥಕ್ಕಲ್ಲ. 

ಭಾರತ ಕ್ರೀಡಾಪ್ರೇಮಿಗಳಿಗೆ ಆಗಸ್ಟ್​ 8 ಬೇಸರದ ದಿನ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬಂಗಾರದ ಪದಕ ಗೆಲ್ಲುವ ಅವಕಾಶದಿಂದ ಕೊನೇ ಕ್ಷಣದಲ್ಲಿ ವಂಚಿತರಾದ ವಿನೇಶ್​ ಫೋಗಟ್​ ಅವರು ಕುಸ್ತಿಗೆ ವಿದಾಯ ಹೇಳಿದ್ದಾರೆ. ಈ ವಿಷಯವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಸಮಂತಾ ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಈ ಎಮೋಜಿಗೆ ನಾಗಚೈತನ್ಯ ನಿಶ್ಚಿತಾರ್ಥ ಕೂಡ ಕಾರಣ ಅನ್ನಲಾಗ್ತಿದೆ. 

ಟಾಕ್ಸಿಕ್ ಬೆನ್ನಲ್ಲೇ ಯಶ್ ನೆಕ್ಸ್ಟ್‌ ಸಿನಿಮಾ ಸುಳಿವೂ ಸಿಕ್ತು, ಜೋರಾಯ್ತು ಚರ್ಚೆ; ಗೆಸ್ ಮಾಡ್ತೀರಾ?

ಎನಿ ವೇ ಆ ಕಡೆ ಮಾಜಿ ಪತಿ ಎರಡನೆ ಮದುವೆಗೆ ಸಿದ್ಧರಾಗುತ್ತಿದ್ರೆ ಈ ಕಡೆ ಸಮಂತಾ ಮಾತ್ರ ಸಿಂಗಲ್ ಆಗಿ ನೊಂದು ಬೇಯುತ್ತಿದ್ದಾರೆ ಅಂತ ಟಾಲಿವುಡ್​ ಮಾತಾಡಿಕೊಳ್ತಿದೆ. ಆದಷ್ಟು ಬೇಗ ಸಮಂತಾಗು ಒಬ್ಬ ಒಳ್ಳೆ ಹುಡುಗ ಸಿಗ್ಲಿ ಅನ್ನೋದೆ ಅಭಿಮಾನಿಗಳ ಆಸೆ.