ಮಾಧ್ಯಮಗಳು ತಮ್ಮ ಮನೆಯ ಒಳಗೆ ಪ್ರವೇಶಿಸಿದ್ದಕ್ಕೆ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ದೂರು ನೀಡಿದ್ದಾರೆ.

ಮುಂಬೈ ಪೊಲೀಸರಿಗೆ ದೂರು ನೀಡಿದ ನಟಿ, ತನ್ನನ್ನು ತಡೆಯುವುದು, ಅಡ್ಡಗಟ್ಟುವುದು ಮಾಡಬಾರದು. ತನ್ನ ಸಾಂವಿಧಾನಿಕ ಹಕ್ಕುಗಳನ್ನು ಗಮನದಲ್ಲಿಟ್ಟು ಮಾಧ್ಯಮ ಕೆಲಸ ಮಾಡಬೇಕು ಎಂದು ಮಾಧ್ಯಮಗಳಿಗೆ ಹೇಳಿ ಎಂದು ನಟಿ ರಿಯಾ ಚಕ್ರವರ್ತಿ ಪೊಲೀಸರಿಗೆ ತಿಳಿಸಿದ್ದಾರೆ.

ಮಾಧ್ಯಮಗಳು ತಮ್ಮ ಮನೆಯ ಒಳಗೆ ಪ್ರವೇಶಿಸಿದ್ದಕ್ಕೆ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ದೂರು ನೀಡಿದ್ದಾರೆ. ಈಗಾಗಲೇ ಮಾಧ್ಯಮದ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದ ನಟಿ, ಮನೆಯ ಹತ್ತಿರ ಮಾಧ್ಯಮ ಬರಬಾರದು ಎಂದು ಮುಂಬೈ ಪೊಲೀಸರಿಗೆ ಹೇಳಿದ್ದರು.

ಸಿಬಿಐನಿಂದ ರಿಯಾ ಚಕ್ರವರ್ತಿಗೆ 10 ತಾಸು 'ಡ್ರಿಲ್';ಡ್ರಗ್ಸ್‌, ಹಣಕಾಸು, ವೈಯಕ್ತಿಕ ಸಂಬಂಧದ ಕುರಿತು ಪ್ರಶ್ನೆ!

ವಿಡಿಯೋ ಒಂದನ್ನು ಶೇರ್ ಮಾಡಿದ ನಟಿ, ಇದು ನನ್ನ ಮನೆಯ ಕಂಪೌಂಡ್ ಒಳಗಿನ ದೃಶ್ಯ. ವಿಡಿಯೋದಲ್ಲಿರುವವರು ನನ್ನ ತಂದೆ ಇಂದ್ರಜಿತ್ ಚಕ್ರವರ್ತಿ,(ನಿವೃತ್ತ ಆರ್ಮಿ ಆಫೀಸರ್). ನಾವು ಸಿಬಿಐ, ಇಡಿ ತನಿಖೆಗೆ ಸಹಕರಿಸಲು ಮನೆಯಿಂದ ಹೊರ ಬರುತ್ತಿದ್ದೇವೆ.

ನನ್ನ ಹಾಗೂ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಇದೆ. ನಾವು ಇದಕ್ಕೆ ನೆರವು ಕೇಳಿದ್ದರೂ ಯಾವುದೇ ನೆರವು ಸಿಕ್ಕಿಲ್ಲ. ತನಿಖೆಗೆ ಸಹಕರಿಸುವುದಕ್ಕಾಗದರೂ ನಮಗೆ ರಕ್ಷಣೆ ನೀಡಿ ಎಂದು ಕೆಳಿಕೊಂಡಿದ್ದರು.

ಸುಶಾಂತ್ ಮಾಜಿ ಗರ್ಲ್‌ಫ್ರೆಂಡನ್ನು ವಿಧವೆ ಎಂದ ನಟಿ ರಿಯಾ ಚಕ್ರವರ್ತಿ..!

ಇನ್ನೊಂದು ವಿಡಿಯೋ ಶೇರ್ ಮಾಡಿದ ನಟಿ ತಮ್ಮ ಬಾಡಿಗಾರ್ಡ್‌ ಮೇಲೆ ಮಾಧ್ಯಮ ಯಾವ ರೀತಿ ಹಲ್ಲೆ ಮಾಡಿತು ಎಂಬುದನ್ನು ತಿಳಿಸಿದ್ದಾರೆ. ರಾಮ್ ತಮ್ಮ ಮನೆಯಲ್ಲಿ 10 ವರ್ಷದಿಂದ ವಾಚ್‌ಮನ್ ಆಗಿದ್ದು, ಅವರನ್ನು ಹಾಗೂ ನನ್ನ ತಂದೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

View post on Instagram

ಇದು ಅಪರಾಧ ಅಲ್ಲವೇ..? ಇದಕ್ಕೆ ಯಾರು ಹೊಣೆ..? ಏನಾದರೂ ಕಾನೂನು ಅನ್ನೋದು ಇದೆಯಾ..? ನಾವು ಅನಾಗರಿಕರಾ..? ಸಂಬಂಧ ಪಟ್ಟವರು ಕೂಡಲೇ ಸ್ಪಂದಿಸಿ. ಈ ಕಟ್ಟಡದಲ್ಲಿ ಮಕ್ಕಳು, ವೃದ್ಧರೂ ಇದ್ದಾರೆ ಎಂದಿದ್ದರು.