ಬ್ಯೂಟಿಫುಲ್ & ಟ್ಯಾಲೆಂಟೆಡ್ ನಟಿ ರಶ್ಮಿಕಾ ಮಂದಣ್ಣ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಸ್ಯಾಂಡಲ್‌ವುಡ್, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ವ್ಯಾಯಾಮ, ವರ್ಕೌಟ್‌ಗಳನ್ನು ಮಿಸ್ ಮಾಡ್ಕೊಳೋದೇ ಇಲ್ಲ, ಫುಡ್ ವಿಚಾರದಲ್ಲೂ ಅಷ್ಟೇ.

ರಶ್ಮಿಕಾಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ ಅನ್ನೋದ್ರಲ್ಲಿ ಡೌಟ್ ಇಲ್ಲ. ಸದ್ಯ ಸೌತ್‌ನ ಬೇಡಿಕೆಯ ನಟಿಯರಲ್ಲೊಬ್ಬರಾಗಿ ಬೆಳೆಯುತ್ತಿದ್ದಾರೆ ರಶ್ಮಿಕಾ. ಇವರ ಫಿಟ್ನೆಸ್ ಥಾಟ್ ಏನ್ಗೊತ್ತಾ..? 

ಕಿರಿಕ್ ಚೆಲುವೆ ರಶ್ಮಿಕಾ ತಿನ್ನೋದಕ್ಕೇ ಬದುಕೋದಂತೆ..!

ಸಿಕ್ಕಾಪಟ್ಟೆ ಹಾಟ್ * ಸ್ಟೈಲಿಷ್ ಫೋಟೋ ಶೆರ್ ಮಾಡ್ಕೊಂಡು ಫ್ಯಾನ್ಸ್‌ಗೆ ಖುಷಿ ಕೊಡೋ ರಶ್ಮಿಕಾ ಈ ಸಲ ಏನೇನೋ ಉದ್ದಕ್ಕೆ ಬರೆದಿದ್ದಾರೆ. ಏನ್ ಬರೆದಿದ್ದಾರೆ..? ಇಲ್ಲಿ ನೋಡೋಣ

ಇಂಪಾರ್ಟೆಂಟ್ ಪ್ರಶ್ನೆ ಕೇಳಿರೋ ರಶ್ಮಿಕಾ ಉತ್ತರಿಸೋಕೆ ಫ್ಯಾನ್ಸ್‌ಗೆ ಒಂದು ಅವಕಾಶವನ್ನೂ ಕೊಟ್ಟಿದ್ದಾರೆ. ಇದೊಂದು ರಾಂಡಂ ಥಾಟ್ ಅಷ್ಟೇ..  ಸೋಷಿಯಲ್ ಮೀಡಿಯಾ ನಮಗೆ ಒಳ್ಳೆಯ ಮೋಟಿವೇಷನ್ ಬೇರೆ ಯಾರಾದ್ರೂ ಅನ್ಕೊಂಡಿದ್ದೀರಾ..? ಅಲ್ಲ ನನಗೆ ಮಾತ್ರಾನಾ? ಎಂದು ಪ್ರಶ್ನಿಸಿದ್ದಾರೆ.

ಕರುನಾಡ‌ ಕ್ರಶ್‌ ಅಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್‌!

ಇನ್‌ಸ್ಟಾಗ್ರಾಂನಲ್ಲಿ ನಾವು ನೋಡೋ ಫಿಟ್ ಆಗಿರೋ ಬಾಡಿ ನಮಗೂ ಪ್ರೇರಣೆ ಕೊಡಲ್ವಾ..? ಅದು ಫೇಕ್ ಆಗಿರಲೂಬಹುದು? ಅದ್ರೆ ನಮಗೂ ಒಂಥರಾ ಪುಶ್‌ಅಪ್ ಮಾಡುತ್ತೆ ಅಲ್ವಾ? ಎಂದಿದ್ದಾರೆ.

ಯಾರೂ ತಮ್ಮ ನೋವು, ಬೇಸರವನ್ನು ಹಂಚಿಕೊಳ್ಳೋದಿಲ್ಲ. ಹಾಗಂತ ಅವರು ಮಾಡಿದ್ರು, ನಮಗೆ ಯಾಕೆ ಮಾಡೋಕಾಗಲ್ಲ ಎಂದು ನಮಗನಿಸುತ್ತಲ್ವಾ..? ಎಂದಿದ್ದಾರೆ. ನಾವು ನೋಡುವ ಕೋಟ್ಸ್ ನಮಗೆ ನಮ್ಮನ್ನು ಭಿನ್ನವಾಗಿ ತೋರಿಸಿಕೊಳ್ಳಲು ಪ್ರೇರೇಪಿಸುತ್ತೆ ಅಲ್ವಾ..? ಈ ಬಗ್ಗೆ ಯೋಚಿಸಿ ಎಂದಿದ್ದಾರೆ ರಶ್ಮಿಕಾ. ಯೋಚಿಸ್ಬೇಕಾದ್ದೆ ಅಲ್ವಾ..?