Asianet Suvarna News Asianet Suvarna News

ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಗಾಯಕ ವಿಜಯ್‌ ಪ್ರಕಾಶ್‌!

ಕೊರೋನಾ ಸಂಕಷ್ಟದಲ್ಲಿರುವ ಜನರ ನೆರವಿಗೆ ಹೆಸರಾಂತ ಗಾಯಕ ವಿಜಯ್‌ ಪ್ರಕಾಶ್‌ 10ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಜೊತೆಗೆ ರಾಜ್ಯದ ಜನತೆಯಲ್ಲಿ ಕೊರೋನಾ ತಡೆಗಟ್ಟಲು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದಿಷ್ಟು...

Indian Singer Vijay Prakash contributes 10 lakhs to CM relief fund
Author
Bangalore, First Published Apr 6, 2020, 8:39 AM IST

‘ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೋ’ ಎಂದು ಪುರಂದರ ದಾಸರು ಹೇಳಿದ್ದಾರೆ. ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನು ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಕೊಡೋದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ.

ಗಾಯಕ ವಿಜಯ್ ಪ್ರಕಾಶ್ ಪುತ್ರಿ ಕಾವ್ಯ ಹೀಗಿದ್ದಾರೆ ನೋಡಿದ್ದೀರಾ?

ಕೊರೊನಾ ವೈರಸ್‌ ಎಂಬ ಮಹಾಮಾರಿಯನ್ನ ನಾವೆಲ್ಲರೂ ಮನೆಯೊಳಗಿದ್ದು ಎದುರಿಸುತ್ತೇವೆ. ಹೊರಗೆ ನಮ್ಮ ಮುಖ್ಯಮಂತ್ರಿಗಳು, ಅಧಿಕಾರಿಗಳು, ವೈದ್ಯರ ತಂಡ, ಪೊಲೀಸರು ಹಗಲು ರಾತ್ರಿ ನಮ್ಮನ್ನು ಇದರಿಂದ ರಕ್ಷಿಸಲು ಕೆಲಸ ಮಾಡುತ್ತಿದ್ದಾರೆ. ಸಮಸ್ತ ಜನತೆಯಲ್ಲಿ ನನ್ನ ಪ್ರಾರ್ಥನೆ ಏನೆಂದರೆ ನಿಮ್ಮ ಕೈಯಲ್ಲಿ ಆದಷ್ಟುಕೊಡುಗೆಯನ್ನ ಈ ಪರಿಹಾರ ನಿಧಿಗೆ ಮಾಡಿ. ನಿಮ್ಮಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತದೆ.

ಮೋದಿ ಜತೆ ಕೈಜೋಡಿಸಿದ ಸುಮಲತಾ; ಕೊರೋನಾ ನಿಧಿಗೆ 1 ಕೋಟಿ ರೂ. ಸಹಾಯ

ಇಷ್ಟೇ ಅಲ್ಲದೆ ನಾನು ನಮ್ಮ ದೇಶದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ, ಕೆಲವು ರಾಜ್ಯಗಳ ಪರಿಹಾರ ನಿಧಿಗೆ ಕೂಡ ಒಂದು ಅಳಿಲು ದೇಣಿಗೆಯನ್ನ ನೀಡಿದ್ದೇನೆ. ಇಂಥ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ, ಖಂಡಿತವಾಗಿಯೂ ಈ ಕರೋನಾ ಅನ್ನುವ ಮಹಾಮಾರಿಯನ್ನ ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕುತ್ತೇವೆ ಅನ್ನುವ ಭರವಸೆ ನನಗಿದೆ’ ಎಂದಿದ್ದಾರೆ ವಿಜಯ್‌ ಪ್ರಕಾಶ್‌.

Follow Us:
Download App:
  • android
  • ios