ನೀನು ಲಂಬೋರ್ಘಿನಿ, ನಾನು ನ್ಯಾನೋ ಕಾರ್... ಎಲ್ಲಿ ಹೋದೆ ಗೆಳತಿ... ಪೂನಂ ನೆನೆದು ಭಾವುಕರಾದ ರಾಖಿ
ಇಂದು ನಿಧನರಾದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಕೇಳಿ ನಟಿ ರಾಖಿ ಸಾವಂತ್ ತಮ್ಮ ನಡುವಿನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೇಳಿದ್ದೇನು?
ನೀನು ಯಾವಾಗಲೂ ಹೇಳುತ್ತಿದ್ದಿ, ನೀನು ಲಂಬೋರ್ಘಿನಿ, ಮರ್ಸಿಡೀಸ್ ಕಾರು ಆದ್ರೆ ನಾನು ನ್ಯಾನೋ ಕಾರ್ ಎಂದು. ಇವತ್ತು ನಾನು ಹೇಳ್ತಾ ಇದ್ದೇನೆ. ಹೌದು ನಾನು ನ್ಯಾನೋ ಕಾರೆ... ಬಾ ಗೆಳತಿ... ಎಲ್ಲಿಗೆ ಹೋದೆ... ಹೀಗೆ ಯಾರನ್ನಾದರೂ ಬಿಟ್ಟು ಹೋಗ್ತಾರಾ? ಹೇಳದೇ ಕೇಳದೇ ಎಲ್ಲಿಗೆ ಹೋದೆ. ಕ್ಯಾನ್ಸರ್ ಆಗಿ ಇಷ್ಟು ನೋವು ಇಟ್ಟುಕೊಂಡರೂ ಒಂದು ಮಾತನ್ನೂ ಹೇಳಲಿಲ್ಲ ನೀನು, ಯಾಕೆ ಹೀಗೆ ಮಾಡಿದೆ, ಎಲ್ಲಿ ಹೋಗಿರುವೆ, ಬೇಗ ಬಾ...
ಹೀಗೆಂದು ನಟಿ ರಾಖಿ ಸಾವಂತ್ ಇಂದು ಬೆಳಿಗ್ಗೆ ನಿಧನರಾದ ಪೂನಂ ಪಾಂಡೆಯವರನ್ನು ನೆನೆಸಿಕೊಂಡಿದ್ದಾರೆ. ನಟಿ ರಾಖಿ ಸಾವಂತ್ ಮತ್ತು ಪೂನಂ ಪಾಂಡೆ ಇಬ್ಬರೂ ಹಾಟ್ ನಟಿಯರು ಎಂದೇ ಫೇಮಸ್ ಆದವರು. ತಮ್ಮ ಡ್ರೆಸ್ನಿಂದಲೇ ಇವರು ಸದಾ ವಿವಾದಿತರಾಗಿರುತ್ತಿರುತ್ತಿದ್ದರು. ರಾಖಿ ಸಾವಂತ್ ಮತ್ತು ಪೂನಂ ಪಾಂಡೆ ಇಬ್ಬರನ್ನೂ ವಿವಾದಿತ ನಟಿಯರು ಎಂದೇ ಕರೆಯಲಾಗುತ್ತದೆ. ಆದರೆ ಇಂದು ಪೂನಂ ಪಾಂಡೆ 32ನೇ ವಯಸ್ಸಿಗೇ ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಇವರ ಯಾವುದೇ ವಿಡಿಯೋಗಳನ್ನು ನೋಡಿದರೂ ಇವರಿಗೆ ಕ್ಯಾನ್ಸರ್ ಇದೆ ಎಂದು ತಿಳಿಯುವುದೇ ಇಲ್ಲ. ಯಾವತ್ತೂ ವಿಡಿಯೋದಲ್ಲಿ ನಗುಮೊಗದಿಂದಲೇ ಇದ್ದ ನಟಿ ಮನಸ್ಸಿನಲ್ಲಿ ಅದೆಷ್ಟು ನೋವುಗಳನ್ನು ಬಚ್ಚಿಟ್ಟುಕೊಂಡಿದ್ದರು ಎಂದು ತಿಳಿಯುವುದೇ ಇಲ್ಲ.
32 ಲಕ್ಷ ಚಂದಾದಾರರ ಈ ಆ್ಯಪ್ ಪೂನಂ ಪಾಂಡೆಯನ್ನು ಕೋಟ್ಯಧಿಪತಿ ಮಾಡಿತ್ತು! ನಟಿಯ ಸಂಪಾದನೆ ಮಾರ್ಗ ಹೀಗಿತ್ತು
ಅಷ್ಟಕ್ಕೂ ನಟಿಯ ಬಾಳು ಮಾತ್ರ ನರಕದ ಕೂಪವೇ ಆಗಿತ್ತು. ಈ ಬಗ್ಗೆ ಖುದ್ದು ಪೂನಂ ಪಾಂಡೆ ಒಮ್ಮೆ ಹೇಳಿಕೊಂಡಿದ್ದರು. ತಮ್ಮ ಖಾಸಗಿ ಬದುಕಿನ ಕುರಿತು ಮಾತನಾಡಿರುವ ಅವರು, ಜೀವನದ ಕರಾಳ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸ್ಯಾಮ್ ಬಾಂಬೆ ಅವರನ್ನು ಮದುವೆಯಾದ ಬಳಿಕ ತಾವು ಅನುಭವಿಸಿದ್ದ ನೋವಿನ ಕುರಿತು ಪೂನಂ ಮಾತನಾಡಿದ್ದರು. 31 ವರ್ಷದ ಪೂನಂ ಅವರ ಮದುವೆ 2020ರ ಮಾರ್ಚ್ ತಿಂಗಳಿನಲ್ಲಿ ಸ್ಯಾಮ್ ಬಾಂಬೆ (Sam Bombay) ಅವರ ಜೊತೆ ನಡೆದಿತ್ತು. ಇವರ ದಾಂಪತ್ಯ ಜೀವನ ಇದ್ದದ್ದು ಒಂದೇ ವರ್ಷ. ಈ ಒಂದು ವರ್ಷದಲ್ಲಿ ಅನುಭವಿಸಿದ್ದ ನೋವಿನ ಸರಣಿಯನ್ನು ಪೂನಂ ಬಿಚ್ಚಿಟ್ಟಿದ್ದಾರೆ. ಪೂನಂ ಅವರು ಕಂಗನಾ ರಣಾವತ್ (Kangana Ranaut) ಅವರ OTT ಶೋ 'ಲಾಕ್ ಅಪ್' ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೆರೆದಿಟ್ಟಿದ್ದರು.
'ಮದುವೆಯಾದ ದಿನದಿಂದಲೂ ನನ್ನ ಮೇಲೆ ದೈಹಿಕ, ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಹನಿಮೂನ್ ಅವಧಿಯಲ್ಲಿ ನನ್ನ ಮೇಲೆ ಹಲ್ಲೆ ಮತ್ತು ದೈಹಿಕ ಕಿರುಕುಳ ನಡೆದಿದೆ. ಮದುವೆಯನ್ನು ಮುಗಿಸುವ ವಿಚಾರದಲ್ಲಿ ಏನನ್ನೂ ಯೋಚಿಸದೆ ಪ್ರಾಣಿಗಳಂತೆ ಥಳಿಸಿದ್ದಾನೆ' ಎಂದಿದ್ದರು. ಸ್ಯಾಮ್ ಬಾಂಬೆಗೆ ನನ್ನನ್ನು ಕಂಡರೆ ಇಷ್ಟವಿರಲಿಲ್ಲ. ನನ್ನನ್ನು ಪ್ರಾಣಿಯಂತೆ ಹೊಡೆಯುತ್ತಿದ್ದ. ಒಮ್ಮೆ ಆತ ಹೊಡೆದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ' ಎಂದಿದ್ದರು. 'ನನ್ನ ಫೋನ್ ನೋಡುವುದಕ್ಕೂ ನನಗೆ ಅವಕಾಶ ಇರಲಿಲ್ಲ. ಫೋನ್ ಅನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತೆ ಇರಲಿಲ್ಲ. ದಿನವೂ ಚಿತ್ರಹಿಂಸೆ (Torture) ಅನುಭವಿಸಿ ನಲುಗಿ ಹೋಗಿದ್ದೆ. ಆದರೆ ಆ ಕ್ಷಣದಲ್ಲಿ ನನಗೆ ಅದರಿಂದ ಹೊರಗೆ ಬರುವ ಬದಲು ಹೊಂದಿಕೊಂಡು ಹೋಗೋಣ ಎನ್ನಿಸಿತ್ತು. ಆದರೆ ದಿನೇ ದಿನೇ ದೌರ್ಜನ್ಯ ಸಹಿಸಲು ಸಾಧ್ಯವಾಗದಷ್ಟು ನಡೆಯಿತು' ಎಂದಿದ್ದರು.
'ಆತನ ಹೊಡೆತದಿಂದ ನನ್ನ ಮೈಮೇಲೆ ಗಾಯಗಳಾಗಿದ್ದವು. ಮುಖದ ಮೇಲೆಯೂ ಕಲೆಗಳಾಗಿದ್ದವು. ಅದರೆ ಕಲೆಗಳನ್ನು ನಾನು ಮೇಕಪ್ನಿಂದ ಮರೆಮಾಚುತ್ತಿದ್ದೆ. ಬಣ್ಣದ ಲೋಕದಲ್ಲಿ ನಮ್ಮ ಖಾಸಗಿ ವಿಷಯಗಳನ್ನು ತೋರ್ಪಿಡಿಸುವುದು ಸರಿಯಿಲ್ಲ ಅಂದುಕೊಂಡವಳು ನಾನು. ಅದಕ್ಕಾಗಿಯೇ ಒಳಗೆ ಎಷ್ಟೇ ದುಃಖ ಇದ್ದರೂ ಜನರ ಮುಂದೆ ನಗುವುದು ಅನಿವಾರ್ಯವಾಗಿತ್ತು' ಎಂದಿದ್ದರು. 'ಕೊನೆಗೆ ಆತನಿಂದ ದೂರವಾಗುವ ಯೋಚನೆ ಮಾಡಿದೆ. ಆದರೆ ಅದು ಕೂಡ ಸುಲಭವಾಗಿರಲಿಲ್ಲ. ವಿಚ್ಛೇದನ (Divorce) ಪಡೆಯೋ ವಿಚಾರಕ್ಕೂ ಅನೇಕ ಬಾರಿ ಜಗಳವಾಗಿದೆ ಎಂದು ಹೇಳಿದ್ದಾರೆ. ಕುತೂಹಲದ ಅಂಶವೆಂದರೆ ಮದುವೆಯಾದ ಕೇವಲ 12 ದಿನಗಳ ನಂತರ, ಪೂನಂ ಅವರ ಪತಿಯನ್ನು ಗೋವಾ ಪೊಲೀಸರು ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು.