Asianet Suvarna News Asianet Suvarna News

ಬಾಳೆ ಹಣ್ಣಿನ ಜ್ಯೂಸ್ ರೆಸಿಪಿ ಮೂಲಕ ಮತ್ತೆ ಕಿಕ್ಕೇರಿಸಿದ ಪೂನಂ ಪಾಂಡೆ!

ಪೂನಂ ಪಾಂಡೆ ಹಾಟ್ ಅವತರಾಗಳ ನಡುವೆ ರೆಸಿಪಿ ವಿಡಿಯೋಗಳನ್ನು ಆರಂಭಿಸಿ ಕೆಲ ದಿನಗಳು ಉರುಳಿದೆ. ಇದೀಗ ಬಾಳೆ ಹಣ್ಣಿನ ರೆಸಿಪಿಯೊಂದನ್ನು ಪೂನಂ ಪಾಂಡೆ ನೀಡಿದ್ದಾರೆ. ಕಿಕ್ಕೇರಿಸುವ ಪೂನಂ ಪಾಂಡೆ ರೆಸಿಪಿ  ವಿಡಿಯೋ ಇಲ್ಲಿದೆ.
 

Actress Poonam Pandey Share banana juice recipes with hot avatar video goes viral ckm
Author
First Published Jul 9, 2024, 6:06 PM IST

ಮುಂಬೈ(ಜು.09) ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಬೆತ್ತಲಾಗುತ್ತಲೇ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಮೈಮಾಟ ಪ್ರದರ್ಶಿಸಿ, ಜೊತೆಗೊಂದಷ್ಟು ಆಫರ್ ನೀಡಿ ಭಾರಿ ಅಭಿಮಾನಿಗಳ ಬಳಗ ಸೃಷ್ಟಿಸಿದ್ದಾರೆ. ಪೂನಂ ತಮ್ಮ ಹಾಟ್ ಅವತಾರದ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದರ ಜೊತೆಗೆ ಪೂನಂ ಪಾಂಡೆ ಬಗೆ ಬಗೆಯ ತಿನಿಸುಗಳು, ಜ್ಯೂಸ್ ಕುರಿತು ರೆಸಿಪಿ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಪೂನಂ ಪಾಂಡೆ ಬಾಳೆ ಹಣ್ಣಿನ ಜ್ಯೂಸ್ ರೆಸಿಪಿಯೊಂದನ್ನು ನೀಡಿದ್ದಾರೆ. ಈ ಜ್ಯೂಸ್ ಟೇಸ್ಟ್ ಹೇಗಿದೆಯೋ ಗೊತ್ತಿಲ್ಲ. ಆದರೆ ಜ್ಯೂಸ್ ವಿಡಿಯೋ ಕಿಕ್ಕೇರಿಸುತ್ತಿದೆ.

ಫುಡ್‌ಗಾಸಮ್ ವಿಥ್ ಪೂನಂ ಸೀರಿಸ್‌ನಲ್ಲಿ ಇದೀಗ ಪೂನಂ ಪಾಂಡೆ ಜ್ಯೂಸ್ ರೆಸಿಪಿ ಹೇಳಿಕೊಟ್ಟಿದ್ದಾರೆ. ಇಷ್ಟೇ ಈ ರೆಸಿಪಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಭರ್ಜರಿ ಹೆಸರು ತಿಳಿಸಿದ್ದಾರೆ. ಅಷ್ಟಕ್ಕೂ ಪೂನಂ ಈ ಬಾರಿಯ ರೆಸಿಪಿಯಲ್ಲಿ ಒಂದು ಬಾಳೆ ಹಣ್ಣು, ಐಸ್‌ಕ್ರೀಮ್, ಹಾಲು, ಡ್ರೈ ಫ್ರ್ಯೂಟ್ಸ್, ಚಾಕೋಲೇಟ್ ಬಳಸಿ ಜ್ಯೂಸ್ ತಯಾರಿಸಿದ್ದಾರೆ. ಜ್ಯೂಸ್ ತಯಾರಿಸಿ ಕುಡಿದ ಬಳಿಕ ಸೂಪರ್ ಎಂದು ಪೂನಂ ಪಾಂಡೆ ಪ್ರತಿಕ್ರಿಯಿಸಿದ್ದಾರೆ. 

 

 

ಕತ್ತಲು ಬೆಳಕಿನ ಕಣ್ಣಾಮುಚ್ಚಾಲೆ ಆಟದಲ್ಲಿ ಮತ್ತೆ ಬೆತ್ತಲಾದ ಪೂನಂ ಪಾಂಡೆ!

ಇತ್ತೀಚೆಗೆ ಪೂನಂ ಪಾಂಡೆ ಮಾವಿನ ಹಣ್ಣಿನ ರೆಸಿಪಿಯೊಂದನ್ನು ಹಂಚಿಕೊಂಡಿದ್ದರು. ಇಷ್ಟೇ ಅಲ್ಲ ಕೇಕ್ ವಿಥ್ ಐಸ್‌ಕ್ರೀಮ್ ರೆಸಿಪಿಯೊಂದನ್ನೂ ನೀಡಿದ್ದರು. ಚಾಕೋಲೇಟ್ ಕೇಕ್ ತಯಾರಿಸಿ ಅದನ್ನು ಐಸ್‌ಕ್ರೀಮ್ ಜೊತೆ ತಿಂದು ರೆಸಿಪಿ ನೀಡಿದ್ದರು. ಆದರೆ ಈ ವಿಡಿಯೋದಲ್ಲಿ ಪೂರನಂ ಆ್ಯಪ್ರಾನ್ ಮೇಲೆ ಎಲ್ಲರ ಕಣ್ಣುಬಿದ್ದಿತ್ತು. ಕಾರಣ ಪೂನಂ ಮೈಯಲ್ಲಿ ಏಪ್ರನ್ ಬಿಟ್ಟು ಬೇರೇನು ಇರಲಿಲ್ಲ. ಇಷ್ಟೇ ಅಲ್ಲ ಅಡುಗೆ ವೇಳೆ ಏಪ್ರನ್ ಅತೀ ಮುಖ್ಯ ಎಂದು ಪೂನಂ ಹೇಳಿಕೊಂಡಿದ್ದರು.

ಪೂನಂ ಪಾಂಡೆ ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಪದೇ ಪದೇ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾ, ಮಾದಕ ನೋಟ ಬೀರುತ್ತಾ ಅಭಿಮಾನಿಗಳ ಮನತಣಿಸುತ್ತಾರೆ. ಇತ್ತೀಚೆಗೆ ಪೂನಂ ಪಾಂಡೆ ಕತ್ತಲು ಬೆಳಕಿನ ನಡುವೆ ಬೆತ್ತಲಾಗಿ ಫೋಟೋ ಕ್ಲಿಕ್ಕಿಸಿದ್ದರು. ಬಳಿಕ ಈ ಪೋಟೋಗಳನ್ನು ಹಂಚಿಕೊಂಡಿದ್ದರು.

ಪೂನಂ ಪಾಂಡೆ ಸಂದರ್ಶನದಲ್ಲಿ ಕೆಲ ಕಹಿ ಘಟನೆಗಳನ್ನೂ ಮೆಲುಕು ಹಾಕಿದ್ದರು. ಪೂನಂ ಪಾಂಡೆ ಬಾತ್ ರೂಂ ವಿಡಿಯೋಗಳನ್ನು ಮಾಜಿ ಗೆಳೆಯನೇ ಲೀಕ್ ಮಾಡಿದ್ದ ಕಹಿ ಘಟನೆ ನೆನೆದು ಭಾವುಕರಾಗಿದ್ದರು. ಬಾತ್ ರೂಂನಲ್ಲಿನ ಖಾಸಗಿ ವಿಡಿಯೋ ಒಂದನ್ನು ಮಾಜಿ ಗೆಳೆಯ ಸೇಡಿನಿಂದ ಲೀಕ್ ಮಾಡಿದ್ದ. ಈ ಕಹಿ ಘಟನೆಯನ್ನು ಯಾವತ್ತೂ ಮರೆಯಲ್ಲ ಎಂದು ಪೂನಂ ಪಾಂಡೆ ಹೇಳಿದ್ದರು.

ಕೇಕ್ ವಿಥ್ ಐಸ್‌ಕ್ರೀಮ್, ಕುಕಿಂಗ್ ಟಿಪ್ಸ್ ನೀಡಿದ ಪೂನಂ ಪಾಂಡೆ ಏಪ್ರನ್ ಮೇಲೆ ಎಲ್ಲ ಕಣ್ಣು!
 

Latest Videos
Follow Us:
Download App:
  • android
  • ios