Asianet Suvarna News Asianet Suvarna News

ಉದ್ದೇಶ ಒಳ್ಳೆಯದು, ಆದ್ರೆ ದಾರಿ ಸರಿಯಿಲ್ಲ; ಪೂನಂ ಪಾಂಡೆ ತುಂಟಾಟಕ್ಕೆ ಜನ ಫುಲ್ ಗರಂ..!

ನಿನ್ನೆ ಎಲ್ಲರ ಬಾಯಲ್ಲಿ ಸತ್ತು ಹೋಗಿದ್ದ ನಟಿ ಪೂನಂ ಪಾಂಡೆ ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಇಲ್ಲ ಇಲ್ಲ ನಾನು ಸತ್ತಿಲ್ಲ ಬದುಕಿದ್ದೇನೆ ಎಂದಿದ್ದಾರೆ ಪೂನಂ. ಪೂನಂ ಪಾಂಡೆ ಸತ್ತು ಹೋಗಿರೋ ಸುದ್ದಿ ಬಗ್ಗೆ ಸ್ವತಃ ಪೂನಂ ಅವರೇ ಕ್ಷಮೆ ಕೇಳಿದ್ದಾರೆ.

Actress Poonam Pandey aim is right but way is wrong says people srb
Author
First Published Feb 3, 2024, 7:33 PM IST

ನಟಿ ಪೂನಂ ಪಾಂಡೆ ಹೆಸರು ಕೇಳಿದರೆ ಅದೆಷ್ಟೋ ಪಡ್ಡೆ ಹುಡುಗರ ಹಾರ್ಟ್​ ಬೀಟ್ ಹೆಚ್ಚುತ್ತದೆ. ಪೂನಂ ವಯ್ಯಾರಕ್ಕೆ ಗಂಡ್ ಹೈಕ್ಳ ಬಳಗ ವಾವ್ಹ್ ಅನ್ನದೇ ಇರಲ್ಲ. ಇನ್ನು ಪೂನಂ ಇನ್ನಿಲ್ಲ, ಪೂನಂ ಇನ್ನು ನೆನಪು ಮಾತ್ರ, ಪೂನಂ ಪಾಂಡೆ ನಿಧನ ಅಂದ್ರೆ ಆ ಹುಡುಗರ ಹೃದಯ ಏನ್ ಆಗ್ಬೇಡಾ ಹೇಳಿ. ಒಡೆದು ಚೂರ್ ಚೂರ್ ಆಗಲ್ವಾ. ಪೂನಂ ಪಾಂಡೆ ನಿಧನ ಆಗಿದ್ದಾರೆ ಅನ್ನೋ ಸುದ್ದಿ ನಿನ್ನೆ ಇಡೀ ಪ್ರಪಂಚವನ್ನೇ ಕಾಡ್ಗಿಚ್ಚಿನಂತೆ ಹಬ್ಬಿತ್ತು.. 

ಪೂನಂ ಪಂಡೆ ನಿಧನ ಹೊಂದಿದ್ದಾರೆ. ಪೂನಂ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿದ್ದಾರೆ. ಇಲ್ಲ ಇಲ್ಲ ಪೂನಂ ಓವರ್​ಡೋಸ್​ ಡ್ರಗ್ಸ್​ನಿಂದ ಸತ್ತಿದ್ದಾರೆ ಅಂತೆಲ್ಲಾ ನಿನ್ನೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡಿತ್ತು. ಪೂನಂ ಮ್ಯಾನೇಜರ್ ಪಾರುಲ್ ಚಾವ್ಲಾ ಕೂಡ ಪೂನಂ ಪಾಂಡೆ ಮೃತಪಟ್ಟಿದ್ದಾರೆ. ಅವರ ಶವ ಉತ್ತರ ಪ್ರದೇಶದ ಕಾನ್ಪುರದಲ್ಲಿದೆ ಎಂದಿದ್ರು. ಕೊನೆಗೆ ಇಲ್ಲ ಇಲ್ಲ ಪೂನಂ ಶವ ಪೂಣೆಯಲ್ಲಿದೆ ಅಂತ ಸುದ್ದಿ ಕೇಳಿ ಬಂತಿತ್ತು. ಆದ್ರೆ ಪೂನಂ ನಿಧನ ಹೊಂದಿದ್ದೆಲ್ಲಿ ಅಂತ ಯಾರಿಗೂ ಗೊತ್ತಾಗಲಿಲ್ಲ. 

ಬಟ್ ನಿನ್ನೆ ಎಲ್ಲರ ಬಾಯಲ್ಲಿ ಸತ್ತು ಹೋಗಿದ್ದ ನಟಿ ಪೂನಂ ಪಾಂಡೆ ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಇಲ್ಲ ಇಲ್ಲ ನಾನು ಸತ್ತಿಲ್ಲ ಬದುಕಿದ್ದೇನೆ ಎಂದಿದ್ದಾರೆ ಪೂನಂ. ಪೂನಂ ಪಾಂಡೆ ಸತ್ತು ಹೋಗಿರೋ ಸುದ್ದಿ ಬಗ್ಗೆ ಸ್ವತಃ ಪೂನಂ ಅವರೇ ಕ್ಷಮೆ ಕೇಳಿದ್ದಾರೆ. ತಮ್ಮ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹಬ್ಬಿಸಿಕೊಳ್ಳಲು ಒಂದು ಕಾರಣವನ್ನೂ ಹೇಳಿದ್ದಾರೆ.  ಅದು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ಮಾಡಿದೆ ಎಂದಿದ್ದಾರೆ. 

'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!

'ನಾನು ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್​ನಿಂದ ನಾನು ಸತ್ತಿಲ್ಲ. ಆದರೆ, ಈ ರೋಗವನ್ನು ಹೇಗೆ ಎದುರಿಸಬೇಕು ಎನ್ನುವ ಜ್ಞಾನ ಇಲ್ಲದೆ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಬಹುದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳಿಂದ ಇದು ಸಾಧ್ಯ. ಈ ಕಾಯಿಲೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ' ಎಂದಿದ್ದಾರೆ ಪೂನಂ ಪಾಂಡೆ.

ಜಿಯೋ ಸಿನಿಮಾದಲ್ಲಿ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' & ಸಲ್ಮಾನ್ ಖಾನ್ 'ಮುಂಬೈ ಹೀರೋಸ್' ಸಿಸಿಎಲ್‌ 10 ಲೈವ್!

ಪೂನಂ ಪಾಂಡೆ ಉದ್ದೇಶ ಉತ್ತಮವಾಗಿದೆ. ಆದ್ರೆ ಅದಕ್ಕೆ ಆಯ್ಕೆ ಮಾಡಿಕೊಂಡ ಮಾರ್ಗ ಸರಿ ಇಲ್ಲ. ಸ್ವಂತ ಅಥವಾ ಬೇರೆಯವರ ಸಾವಿನ ವಿಚಾರದಲ್ಲಿ ಈ ರೀತಿ ಮಾಡಬಾರದು ಎಂದು ನೆಟ್ಟಿಗರು ಪೂನಂಗೆ ಉಗಿಯುತ್ತಿದ್ದಾರೆ. ಆದರೆ, ಅದೆಷ್ಟು ಉಗಿದು ಉಪ್ಪಿಕಾಯಿ ಹಾಕಿದರೂ ಪೂನಂ ತಲೆಗೆ ಇದು ನಾಟುತ್ತಾ ಎನ್ನುವುದು ಪ್ರಶ್ನೆ! ಅದಕ್ಕೆ ಉತ್ತರ 'ಬಹುಶಃ ಇಲ್ಲ' ಎನ್ನುಬಹುದು. ಏಕೆಂದರೆ, ಅವರು ಯಾವತ್ತೂ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಬೇರೆಯವರ ತಲೆಗೆ ಹುಳ ಬಿಟ್ಟು ತಲೆ ಕೆಡಿಸುತ್ತಾರೆ. 

ಹಂಪಿ ಉತ್ಸವದಲ್ಲಿ ಡಾನ್ಸ್ ಮಾಡ್ತಾರೆ 'ಶೇಕ್ ಇಟ್ ಪುಷ್ಪಾವತಿ' ನಟಿ ನಿಮಿಕಾ ರತ್ನಾಕರ್..!

Follow Us:
Download App:
  • android
  • ios