Asianet Suvarna News

ಈ ಒಂದು ಕಾರಣಕ್ಕೆ ನಿಶ್ಚಿತಾರ್ಥದ ನಂತರ ಬ್ರೇಕಪ್‌ ಎಂದ ನಟಿ ಮೆಹ್ರೀನ್!

ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ನಟಿ ಮೆಹ್ರೀನ್‌ ಮತ್ತು ಭವ್ಯ ಬಿಷ್ಣೋಯರ್‌. ಮದುವೆ ಆಗುತ್ತಿಲ್ಲ, ಇನ್ನು ಸಂಪರ್ಕ ಇರುವುದಿಲ್ಲ ಎಂದು ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ.

Actress Mehreen Pirzasa politician Bhavya Bishnoi calls off engagement vcs
Author
Bangalore, First Published Jul 5, 2021, 1:02 PM IST
  • Facebook
  • Twitter
  • Whatsapp

ಈಗಷ್ಟೇ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಟಿ ಮೆಹ್ರೀನ್ ಪಿರ್ಜಾದಾ, ಮಾರ್ಚ್‌ನಲ್ಲಿ ಹರಿಯಾಣ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್‌ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಜೊತೆ ಜೈಯಪುರದಲ್ಲಿ ಮಾರ್ಚ್ 12ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥವೇ ಮದುವೆ ರೀತಿಯಲ್ಲಿ ನಡೆದಿದೆ, ಅಂದರೆ ಮದುವೆ ಇನ್ನೂ ಎಷ್ಟು ಅದ್ಧೂರಿಯಾಗಿರುತ್ತದೋ ಎಂದು ನೆಟ್ಟಿಗರು ಚರ್ಚಿಸುತ್ತಿರುವಾಗಲೇ ಈ ಜೋಡಿ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. 

ಹೌದು! ಇಬ್ಬರ ಕುಟುಂಬಗಳ ಒಪ್ಪಿಗೆ ಮೇಲೆ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. 'ಭವ್ಯ ಬಿಷ್ಣೋಯ್ ಮತ್ತು ನಾನು ನಮ್ಮ ನಿಶ್ಚಿತಾರ್ಥವನ್ನು ಮುರಿದಿದ್ದೇವೆ. ಮದುವೆ ಆಗುತ್ತಿಲ್ಲ. ನಾವಿಬ್ಬರು ಸ್ವಹಿತಾಸಕ್ತಿಯಿಂದ ತೆಗೆದುಕೊಂಡಿರುವ ನಿರ್ಧಾರವಿದು. ಇಂದಿನಿಂದ, ಇನ್ನು ಮುಂದೆ ಯಾವ ಕಾರಣಕ್ಕೂ ನಾನು ನನ್ನ ಕುಟುಂಬ ಭವ್ಯ ಬಿಷ್ಣೋಯ್ ಮತ್ತು ಅವರು ಕುಟುಂಬದ ಹಾಗೂ ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರುವುದಿಲ್ಲ,' ಎಂದು ಮೆಹ್ರೀನ್ ಬರೆದುಕೊಂಡಿದ್ದಾರೆ.

'ಈ ವಿಚಾರವಾಗಿ ನನ್ನ ಕಡೆಯಿಂದ ನಾನು ನೀಡುವುದು ಇದೊಂದೇ ಹೇಳಿಕೆ. ಈ ವಿಚಾರದಲ್ಲಿ ನೀವು ನನ್ನ ಖಾಸಗೀತನವನ್ನು ಗೌರವಿಸುತ್ತೀರಾ ಎಂದು ಭಾವಿಸುತ್ತೇನೆ. ನಾನು ನನ್ನ ಸಿನಿಮಾ ಕೆಲಸಗಳಲ್ಲಿ ಮುಂದುವರೆಯಲಿರುವೆ,' ಎಂದು ಮೆಹ್ರೀನ್ ಹೇಳಿದ್ದಾರೆ.

'ರಾಷ್ಟ್ರ ಪ್ರಶಸ್ತಿ' ನಿರ್ದೇಶಕ ಮಂಸೋರೆ- ಅಖಿಲಾ ನಿಶ್ಚಿತಾರ್ಥ! 

ಇದಾದ ನಂತರ ಭವ್ಯ ಬಿಷ್ಣೋಯ್‌ ಕೂಡ ಟ್ಟೀಟ್ ಮಾಡಿದ್ದು, 'ಎರಡು ದಿನಗಳ ಹಿಂದೆ ಮೆಹ್ರೀನ್ ಮತ್ತು ನಾನು ನಮ್ಮ ನಿಶ್ಚಿತಾರ್ಥ ಮುರಿದೆವು. ಮೌಲ್ಯಗಳು ಮತ್ತು ಹೊಂದಾಣಿಕೆಯಾಗದ ಕಾರಣ ಬೇರೆಯಾಗಲು ನಿರ್ಧರಿಸಿದ್ದೇವೆ. ಮೆಹ್ರೀನ್ ಮತ್ತು ಅವರ ಕುಟುಂಬಕ್ಕೆ ಅತ್ಯಂತ ಪ್ರೀತಿ ಮತ್ತು ಗೌರವವನ್ನು ತೋರಿಸುವಲ್ಲಿ ನಾನು ಯಾವುದೇ ದ್ರೋಹ ಬಗೆದಿಲ್ಲ. ಹೆಮ್ಮೆಯಿಂದ ನಾನು ಈ ಸಂಬಂಧದಿಂದ ದೂರ ಹೋಗುತ್ತಿದ್ದೇನೆ. ಈ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾವಿಬ್ಬರು ಚೆನ್ನಾಗಿರುತ್ತೇವೆ ಎಂದು ಕೊಂಡಿದ್ದೆ. ಆದರೆ, ವಿಧಿಯಾಟವೇ ಬೇರೆಯಾಗಿತ್ತು, ಎಂದೆನಿಸುತ್ತದೆ. ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ತಪ್ಪಾಗಿ ಮಾತನಾಡುತ್ತಿರುವ ಜನರಿಗೆ ಯಾವುದೇ ವಿವರಣೆ ನೀಡುವ ಅಗತ್ಯ ನನಗಿಲ್ಲ. ಆದರೆ ವಿಚಾರಗಳು ನನ್ನ ಕಿವಿಗೆ ಬಿದ್ದರೆ ಅವರಿಗೆ ವೈಯಕ್ತಿಕವಾಗಿ ಹಾಗೂ ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುತ್ತೇನೆ. ನನ್ನ ಕುಟುಂಬ ಮತ್ತು ನಾನು ಪ್ರಾಮಾಣಿಕವಾಗಿ ಬದುಕುತ್ತಿದ್ದೇವೆ. ಮಹಿಳೆಯರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇವೆ. ಮೆಹ್ರೀನ್ ಅವರ ಕುಟುಂಬಕ್ಕೆ ಪ್ರೀತಿ ಮತ್ತು ಸಂತೋಷನ್ನು ಬಯಸುತ್ತೇನೆ. ಕುಟುಂಬ ಮತ್ತು ಸ್ನೇಹಿತರನ್ನು ಅತ್ಯುನ್ನತ ಗೌರವದಲ್ಲಿರಿಸುತ್ತೇನೆ. ಮೆಹ್ರೀನ್ ಅವರ ಮುಂದಿನ ಸಿನಿಮಾಗಳಿಗೆ ಹಾಗೂ ಪ್ರಾಜೆಕ್ಟ್‌ಗಳಿ ಶುಭ ಹಾರೈಸುತ್ತೇನೆ.' ಎಂದು ಭವ್ಯ ಬಿಷ್ಣೋಯ್‌ ಬರೆದುಕೊಂಡಿದ್ದಾರೆ.

Follow Us:
Download App:
  • android
  • ios