ಪಿರಿಯಡ್ಸ್‌ಗೆ ವಾರ ಮುನ್ನ ನಟಿ ಕೃತಿ ಸನೋನ್ ಮಾಡ್ತಾರಂತೆ ಈ ಕೆಲಸ
ಬಾಲಿವುಡ್ ನಟಿ ಕೃತಿ ಸನೋನ್ ಹೊಳೆಯುವ ತ್ವಚೆ ಹೊಂದಿದ್ದಾರೆ. ಮೊಡವೆ ಇಲ್ಲದ ಅವರ ಚರ್ಮದ ಗುಟ್ಟೇನು ಎಂಬುದು ಈಗ ಬಹಿರಂಗವಾಗಿದೆ. ಕೃತಿ ಪಿರಿಯಡ್ಸ್ ಮೊದಲು ಮಾಡುವ ಈ ಕೆಲಸ ಅವರ ತೃಚೆಯನ್ನು ಇಷ್ಟು ಸುಂದರಗೊಳಿಸಿದೆ.
ಬಾಲಿವುಡ್‌ನ ಹೊಳೆಯುವ ತ್ವಚೆ ಹೊಂದಿರುವ ನಟಿಯರಲ್ಲಿ ಕೃತಿ ಸನೋನ್ ಒಬ್ಬರು. ಅವರ ಮುಖದಲ್ಲಿ ಮೊಡವೆ, ಕಪ್ಪು ಕಲೆ ಕಾಣ ಸಿಗೋದಿಲ್ಲ. ಸಾಮಾನ್ಯವಾಗಿ ಪಿರಿಯಡ್ಸ್ ಹತ್ತಿರ ಬರ್ತಿದ್ದಂತೆ ಮಹಿಳೆಯರ ದೇಹದಲ್ಲಿ, ಮಾನಸಿಕ ಸ್ಥಿತಿಯಲ್ಲಿ (Mental Health) ಮಾತ್ರವಲ್ಲ ತ್ವಚೆಯಲ್ಲೂ ಬದಲಾವಣೆಯಾಗುತ್ತದೆ. ಕೆಲವರಿಗೆ ಅಲ್ಲೊಂದು ಇಲ್ಲೊಂದು ಮೊಡವೆ ಎದ್ರೆ ಮತ್ತೆ ಕೆಲವರಿಗೆ ಮುಖದ ತುಂಬ ಮೊಡವೆ ಇರುತ್ತೆ. ಆದ್ರೆ ನಟಿ ಕೃತಿ ಸನೋನ್ ಮಾತ್ರ ಈ ಸಮಸ್ಯೆಯಿಂದ ಬಚಾವ್ ಆಗ್ತಾರೆ. ಅದಕ್ಕೆ ಕಾರಣ ಅವರು ರೂಢಿಸಿಕೊಂಡಿರುವ ನಿಯಮ.
ತಮ್ಮ ಬ್ಯೂಟಿ ಸೀಕ್ರೆಟ್ (Beauty Secret) ಬಗ್ಗೆ ಆಗಾಗ ಅಭಿಮಾನಿಗಳ ಮುಂದೆ ಹೇಳುವ ಕೃತಿ ಸನೋನ್ (Kriti Sanon) ಈಗ ಮತ್ತೊಂದು ಗುಟ್ಟನ್ನು ರಟ್ಟು ಮಾಡಿದ್ದಾರೆ. ಪಿರಿಯಡ್ಸ್ (Periods) ಸಮಯದಲ್ಲಿ ಮುಖದ ಮೇಲೆ ಮೊಡವೆ ಏಕೆ ಕಾಣಿಸಿಕೊಳ್ಳೋದಿಲ್ಲ ಎಂಬುದನ್ನು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಕೃತಿ ಪಿರಿಯಡ್ಸ್ ಗಿಂತ ಏಳು ದಿನ ಮೊದಲು ಮಾಡುವ ಈ ಕೆಲಸ.
ಪತಿ ಹುಟ್ಟುಹಬ್ಬಕ್ಕೆ ಅದಿತಿ ಪ್ರಭುದೇವ ರೊಮ್ಯಾಂಟಿಕ್ ವಿಶ್, ಗಂಡನಿಗೆ ಕೊಟ್ಟಿದ್ದು ಸ್ಪೆಷಲ್ ಗಿಫ್ಟ್!
ಮುಟ್ಟಿಗೆ ಏಳು ದಿನ ಮೊದಲು ಕೃತಿ ಸನೋನ್ ಏನು ಮಾಡ್ತಾರೆ?: ಮುಟ್ಟಿಗೆ ಮೊದಲೇ ತಮ್ಮ ಚರ್ಮದಲ್ಲಾಗುವ ಬದಲಾವಣೆಯನ್ನು ಕೃತಿ ಗಮನಿಸ್ತಾರೆ. ಮುಟ್ಟಿನ ಸಮಯದಲ್ಲಿ ಮುಖದ ಮೇಲೆ ಮೊಡವೆ ಏಳ್ಬಾರದು ಎನ್ನುವ ಕಾರಣಕ್ಕೆ ಕೃತಿ ಸನೋನ್, ಒಂದು ವಾರದ ಮೊದಲೇ ತಮ್ಮ ಮುಖಕ್ಕೆ ಹಚ್ಚುವ ಕ್ರೀಂ ಬದಲಿಸ್ತಾರೆ. ಅವರು ಆಂಟಿ ಪಿಂಪಲ್ ಸಿರಮ್ ಹಚ್ಚಿಕೊಳ್ತಾರೆ. ನಟಿ ತನ್ನ ಸ್ಕಿನ್ ಕೇರ್ ಬ್ರಾಂಡ್ ACNE DEFENCE DAILY SERUM ಹಚ್ಚಿಕೊಳ್ತಾರೆ. ಈ ಸೀರಮ್, ಅಜೆಲೈಕ್ ಆಸಿಡ್, ಸ್ಯಾಲಿಸಿಲಿಕ್ ಆಸಿಡ್, ನಿಯಾಸಿನಾಮೈಡ್ ಮತ್ತು ಟೀ ಟ್ರೀ ಎಕ್ಸ್‌ಟ್ರಾಕ್ಟ್‌ನಂತಹ ಚರ್ಮಕ್ಕೆ ಹಿತ ನೀಡುವ ಪದಾರ್ಥಗಳಿಂದ ತುಂಬಿದೆ. ಇವು, ಉರಿಯೂತವನ್ನು ಕಡಿಮೆ ಮಾಡುವ ಮತ್ತು ಒಡೆಯುವಿಕೆಯನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ಹಾರ್ಮೋನ್ ಬದಲಾಗುವ ಈ ದಿನಗಳಲ್ಲಿ ಇದರ ಬಳಕೆ ಬಹಳ ಒಳ್ಳೆಯದು ಎನ್ನುತ್ತಾರೆ ಕೃತಿ. ಕೃತಿ ತಮ್ಮ ಚರ್ಮಕ್ಕೆ ಏನು ಅಗತ್ಯ ಎಂಬುದನ್ನು ಅರಿತಿದ್ದಾರೆ. ಅದೇ ರೀತಿ ಅವರು ಚರ್ಮದ ಆರೈಕೆಯನ್ನು ಮಾಡ್ತಾರೆ.
ಕೃತಿ ಬೆಳಗಿನ ದಿನಚರಿ ಹೀಗಿದೆ (Morning Activity of Kruithi Sanoon): ಹೈಡ್ರೇಷನ್, ಕೃತಿಯ ಬೆಳಗಿನ ದಿನಚರಿಯ ಆರಂಭವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಅವರು ದೇಹವನ್ನು ಮತ್ತು ಚರ್ಮವನ್ನು ಹೆಚ್ಚು ಹೈಡ್ರೀಕರಿಸಲು ಬಯಸ್ತಾರೆ. ಹಾಗಾಗಿ ಸಾಕಷ್ಟು ನೀರು ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಮೃದುವಾದ ಕ್ಲೆನ್ಸರ್ನೊಂದಿಗೆ ತನ್ನ ಮುಖವನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸುತ್ತಾರೆ. ನಂತರ ರಿಫ್ರೆಶ್ ವಾಟರ್ ಸ್ಪ್ರೇ ಬಳಸ್ತಾರೆ. ತೇವಾಂಶವನ್ನು ಲಾಕ್ ಮಾಡಲು ಜೆಲ್-ಆಧಾರಿತ ಸೀರಮ್ ಬಳಸುವುದಾಗಿ ಅವರು ಹೇಳಿದ್ದಾರೆ. ಇದು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಇನ್ನು ರಾತ್ರಿ ತಮ್ಮ ಮೇಕಪ್ ತೆಗೆಯಲು ಕೃತಿ, ಆಯಿಲ್ ಆಧಾರಿತ ಕ್ಲೆನ್ಸರ್ ಬಳಕೆ ಮಾಡ್ತಾರೆ. ಇದು ಅವರ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಹಾಗೆ ಇಡುತ್ತದೆ. ಇದ್ರ ನಂತ್ರ ಅವರು ಕ್ರೀಮ್ ಕ್ಲೆನ್ಸರ್ ಬಳಸ್ತಾರೆ. ತುಟಿಗೆ ಲಿಪ್ ಬಾಮ್ ಹಚ್ಚುತ್ತಾರೆ. ಲಿಪ್ ಬಾಬ್, ತುಟಿಯನ್ನು ರಾತ್ರಿಯಿಡಿ ಮೃದು ಹಾಗೂ ಹೈಡ್ರೀಕರಿಸಿರುತ್ತವೆ.
ಬಾಯ್‌ಫ್ರೆಂಡ್‌ನ ಪುರಷತ್ವ ಪರೀಕ್ಷೆ ನೀವೇ ಮಾಡ್ಬೋದು; ಇಲ್ಲದೆ ಟಿಪ್ಸ್
ಇಷ್ಟೇ ಅಲ್ಲ, ಮೇಕಪ್ ಗೆ ಮೊದಲು ಏನು ಮಾಡ್ತೇನೆ ಎಂಬುದನ್ನೂ ನಟಿ ಹೇಳಿದ್ದಾರೆ. ಅವರು ಮೇಕಪ್ ಹಾಕಿವ ಮುನ್ನ ಐಸ್ ವಾಟರ್‌ನಲ್ಲಿ ಮುಖವನ್ನು ಅದ್ದುತ್ತಾರೆ. ಇದರಿಂದ ಚರ್ಮ ತಂಪಾಗಿರುತ್ತದೆ. ಇದು ಚರ್ಮದ ಕೊಳಕನ್ನು ತೆಗೆದು ಹಾಕುತ್ತದೆ. ಮುಖದ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೃತಿ.