ಖುಷಿ ಮುಖರ್ಜಿ ಡ್ರೆಸ್ ಇದೀಗ ಭಾರಿ ಟ್ರೆಂಡ್ ಆಗಿದೆ. ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿ ಹಲವರ ಕಣ್ಣು ತಂಪಾಗಿಸಿದೆ. ಖುಷಿ ಮುಖರ್ಜಿಯ ಹೊಸ ವಿಡಿಯೋ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಸೂಪರ್ ಎಂದರೆ, ಕೆಲ ಸೆಲೆಬ್ರೆಟಿಗಳು ಇವರಿಗೆ ದಂಡ ಹಾಕಿ ಎಂದು ಸೂಚಿಸಿದ್ದಾರೆ. 

ಮುಂಬೈ (ಜೂ. 28) ಖುಲ್ಲಾಂ ಖುಲ್ಲಾ ಡ್ರೆಸ್ ಹಾಕಿ ನಟಿ ಹಾಗೂ ಮಾಡೆಲ್ ಖುಷಿ ಮುಖರ್ಜಿ ಎಲ್ಲರ ಗಮನೆಸೆಳೆದಿದ್ದಾರೆ. ಹೊಸ ಫ್ಯಾಶನ್ ಡ್ರೆಸ್ ಹಾಕಿ ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿಯಿಂದ ನಟಿ ಪರದಾಡಿದ್ದು ಮಾತ್ರವಲ್ಲ, ಮುಜುಗರಕ್ಕೀಡಾಗಿದ್ದಾರೆ. ಡ್ರೆಸ್ ಹಿಡಿದಿಟ್ಟುಕೊಂಡರು ಮೇಲಕ್ಕೆ ಹಾರುತ್ತಿದ್ದರೆ, ಪಾಪರಾಜಿಗಳು ಕ್ಯಾಮೆರಾ ಆಫ್ ಮಾಡಿ ಎಂದು ಸೂಚಿಸಿದ ಘಟನೆ ನಡೆದಿದೆ. ಇದೀಗ ಖುಷಿ ಮುಖರ್ಜಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಗಾಳಿಯಿಂದ ಹಲವರ ಖುಷಿ ಹೆಚ್ಚಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ನಟಿ ಫಾಲಖ್ ನಾಝಿ ಗರಂ ಆಗಿದ್ದಾಳೆ. ಈ ರೀತಿ ಡ್ರೆಸ್ ಹಾಕಿ ಪ್ರದರ್ಶಿಸುವವರ ಮೇಲೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಖುಲ್ಲಂ ಖುಲ್ಲಾ ಡ್ರೆಸ್

ಆಪ್ತರ ಭೇಟಿ, ಕಾರ್ಯಕ್ರಮ ಹಾಗೂ ಔತಣಕೂಟಕ್ಕೆ ಮಾಡೆಲ್ ಹಾಗೂ ಟಿವಿ ನಟಿ ಖುಷಿ ಮುಖರ್ಜಿ ವಿಶೇಷವಾಗಿ ರೆಡಿಯಾಗಿ ಆಗಮಿಸಿದ್ದಾರೆ. ಬ್ಲಾಕ್ ಡ್ರೆಸ್‌ನಲ್ಲಿ ಆಗಮಿಸಿದ ಖುಷಿ ಮೇಲೆ ಎಲ್ಲರ ಗಮನ ಬಿದ್ದಿದೆ. ಕಾರಣ ಈಕೆಯ ಡ್ರೆಸ್. ಖುಷಿ ಮುಖರ್ಜಿ ಧರಿಸಿದ್ದ ಡ್ರೆಸ್ ಖುಲ್ಲಾಂ ಖುಲ್ಲ. ಈ ಡ್ರೆಸ್ ಹಾಕಿ ಹೊರಗಡೆ ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ಖುಷಿಯತ್ತ ದೌಡಾಯಿಸಿದ್ದಾರೆ. ಪಾಪರಾಜಿಗಳ ಕ್ಯಾಮೆರಾಗಳು ವಿಡಿಯೋ ಸೆರೆಹಿಡಿದಿತ್ತು. ನಿಲ್ಲುವಂತಿಲ್ಲ, ನಡೆಯುವಂತಿಲ್ಲ, ಏನೇ ಮಾಡಿದರೂ ರಸ್ತೆಯಲ್ಲೇ ಎಲ್ಲಾ ಬಯಲಾಗುವ ಆತಂಕವನ್ನು ಖುಷಿ ಎದುರಿಸಿದ್ದಾರೆ.

Scroll to load tweet…

ಏನಿದು ಖುಷಿ ಮುಖರ್ಜಿ ಡ್ರೆಸ್ ಫಜೀತಿ?

ಕಾರಿನಿಂದ ಇಳಿದ ಖುಷಿ ಮುಖರ್ಜಿಯ ಫೋಟೋ, ವಿಡಿಯೋ ತೆಗೆಯಲು ಪಾಪರಾಜಿಗಳು ಹಾಜರಿದ್ದರು. ಇದೇ ವೇಳೆ ಬೀಸಿದ ತಣ್ಣನೆ ಗಾಳಿ ಇಡಿ ಪರಿಸರವನ್ನೇ ಹಾಟ್ ಮಾಡಿತ್ತು. ಇಷ್ಟೇ ಅಲ್ಲ ಇದೀಗ ಸೋಶಿಯಲ್ ಮೀಡಿಯಾದ ಬಿಸಿ ಏರಿಸಿದೆ. ಗಾಳಿ ಬೀಸಿದ ಕಾರಣ ಖುಷಿ ಮುಖರ್ಜಿ ಡ್ರೆಸ್ ಮೈಮೇಲೆ ನಿಲ್ಲಲಿಲ್ಲ. ಹಾರಾಡುತ್ತಿದ್ದ ಡ್ರೆಸ್ ಹಿಡಿದಿಟ್ಟುಕೊಳ್ಳಲು ಖುಷಿ ಪರದಾಡಿದರು. ನಡೆಯಲು ಸಾಧ್ಯವಾಗದೆ, ಇತ್ತ ಡ್ರೆಸ್ ಹಿಡಿದಿಟ್ಟು ಕೊಳ್ಳಲು ಸಾಧ್ಯವಾಗದೆ ಫಜೀತಿ ಅನುಭವಿಸಿದರು.

ಕ್ಯಾಮೆರಾ ಆಫ್ ಮಾಡುವಂತೆ ಸೂಚನೆ

ಗಾಳಿಯಲ್ಲಿ ಡ್ರೆಸ್ ಹಾರಾಡುತ್ತಿದ್ದಂತೆ ಕ್ಯಾಮೆರಾ ಆಫ್ ಮಾಡುವಂತೆ ಖುಷಿ ಮುಖರ್ಜಿಸೂಚಿಸಿದ್ದರೆ. ಆದರೆ ಯಾರೂ ಕೂಡ ಕ್ಯಾಮೆರಾ ಆಫ್ ಮಾಡಿಲ್ಲ. ಹೇಗೋ ಡ್ರೆಸ್ ಸರಿಮಾಡಿಕೊಂಡ ಖುಷಿ ಒಂದೆರೆಡು ಫೋಸ್ ನೀಡಿ ತೆರಳಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಡ್ರೆಸ್ ಹಾಕಿದ ಮೇಲೆ ಗಾಳಿ ಬಂದರೇನು? ಹಾಕಿದ್ದ ಈ ಡ್ರೆಸ್ ಎಂದರೆ ಕ್ಯಾಮೆರಾ ಆಫ್ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಇಂತವರ ಮೇಲೆ ದಂಡ ಹಾಕಿ ಎಂದ ನಟಿ

ಖುಷಿ ಮುಖರ್ಜಿ ವಿಡಿಯೋಗೆ ಪರ ವಿರೋಧಗಳು ಹೆಚ್ಚಾಗಿದೆ. ವಿರೋಧದ ಪೈಕಿ ಟಿವಿ ನಟಿ ಫಾಲಕ್ ನಾಝಿ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಡ್ರೆಸ್ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಯಾರಿಗೂ ಇದು ಕಾಣುತ್ತಿಲ್ಲವೇ. ಡ್ರೆಸ್, ಫ್ಯಾಶನ್ ಹೆಸರಿನಲ್ಲಿ ಏನು ಮಾಡುತ್ತಿದ್ದಾರೆ. ಇದು ಮಾನ್ಯವೇ? ಸಭ್ಯವೇ? ಎಂದು ನಟಿ ಸಾಲು ಸಾಲು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಕೇಳಿದ್ದಾರೆ. ಅಧಿಕಾರಿಗಳು, ಸರ್ಕಾರ ಇಂತಹ ಎಲ್ಲೆ ಮೀರಿದ ಫ್ಯಾಶನ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಫಾಲಕ್ ನಾಝಿ ಹೇಳಿದ್ದಾರೆ.

View post on Instagram