ಬಾಲಿವುಡ್ ನಟ ವರುಣ್ ಧವನ್ ಅವರ ಹಳೆಯ ವಿಡಿಯೋವೊಂದು ಲೀಕ್ ಆಗಿದೆ. ಈ ವಿಡಿಯೋ 'ಮೈ ತೇರಾ ಹೀರೋ' ಚಿತ್ರದ ಶೂಟಿಂಗ್ ವೇಳೆ ನಡೆದಿದ್ದು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವರುಣ್ ಧವನ್ ಟ್ರೋಲ್ ಆಗುತ್ತಿದ್ದಾರೆ.

ಮುಂಬೈ (ಜ.13): ದಕ್ಷಿಣ ಭಾರತದ ಪ್ರಸಿದ್ಧ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಅವರೊಂದಿಗೆ ಬೇಬಿ ಜಾನ್ ಸಿನಿಮಾದಲ್ಲಿ ನಟಿಸಿದ ಬಾಲಿವುಡ್ ನಟ ವರುಣ್ ಧವನ್ ಅವರ ಹಳೆಯ ವಿಡಿಯೋವೊಂದು ಲೀಕ್ ಆಗಿದೆ. ಈ ವಿಡಿಯೋದಲ್ಲಿ ನಟಿಯರೊಂದಿಗೆ ರೊಮ್ಯಾನ್ಸ್ ಮತ್ತು ಕಿಸ್ಸಿಂಗ್ ದೃಶ್ಯಗಳನ್ನು ಮಾಡುವಾಗ ನಿರ್ದೇಶಕರು ಕಟ್ ಹೇಳಿದರೂ ನಟಿಯರನ್ನು ಮಾತ್ರ ಬಿಡುತ್ತಿರಲಿಲ್ಲ ಎಂದು ಬರೆಯಲಾಗಿದೆ. ಆದರೆ, ಇದೀಗ ಬೇಬಿ ಜಾನ್ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೂ ಪರಿಚಿತವಾದ ವರುಣ್ ಧವನ್ ವರ್ತನೆ ಹೀಗಿದೆಯೇ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 

ಬಾಲಿವುಡ್ ನಟ ವರುಣ್ ಧವನ್ ಅವರ ನಟನೆಯನ್ನು ಮೆಚ್ಚಿಕೊಳ್ಳುವುದಕ್ಕೆ ಒಂದು ಅಭಿಮಾನಿಗಳ ವರ್ಗವೇ ಇದೆ. ನಾನಾ ಬಗೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ನರ್ಗಿಸ್ ಫಕ್ರಿ ಜೊತೆ 2014ರಲ್ಲಿ 'ಮೈ ತೇರಾ ಹೀರೋ' ಚಿತ್ರದಲ್ಲಿ ನಟಿಸಿದ್ದರು. ಈಗ ಸುಮಾರು ವರ್ಷಗಳ ನಂತರ ಚಿತ್ರದ ತೆರೆಮರೆಯಲ್ಲಿ ನಡೆದಿದ್ದ ವಿಡಿಯೋ ಒಂದು ಲೀಕ್ ಆಗಿದೆ. ಅದರಲ್ಲಿ ನಟಿಯೊಂದಿಗೆ ವರುಣ್ ಧವನ್ ನಡೆದುಕೊಂಡಿದ್ದಕ್ಕೆ ಭಾರೀ ಟ್ರೋಲ್ ಆಗುತ್ತಿದ್ದಾರೆ.

'ಮೈ ತೇರಾ ಹೀರೋ' ಚಿತ್ರದ ಒಂದು ರೋಮ್ಯಾಂಟಿಕ್ ದೃಶ್ಯದಲ್ಲಿ ವರುಣ್ ಮತ್ತು ನರ್ಗಿಸ್ ಫಕ್ರಿ ನಟಿಸ್ತಿದ್ದಾರೆ. ನಿರ್ದೇಶಕರು 'ಕಟ್-ಕಟ್-ಕಟ್'​ ಅಂತ ಕೂಗಿದರೂ ವರುಣ್​ ಸೀನ್​ ಮುಂದುವರಿಸಿದ್ದಾರೆ. ನರ್ಗಿಸ್ ಮತ್ತು ವರುಣ್ ನಗಲು ಶುರು ಮಾಡ್ತಾರೆ. ಇದನ್ನು ನೋಡಿದವರು ಶೂಟಿಂಗ್ ಸೆಟ್‌ನಲ್ಲಿ ನಾಚಿಕೆ ಬಿಟ್ಟು ರೊಮ್ಯಾನ್ಸ್ ಮಾಡುವುದಕ್ಕೆ ಟೀಕೆ ಮಾಡಿದ್ದಾರೆ. ಆದರೆ, ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Scroll to load tweet…

ವರುಣ್ ಧವನ್​ಗೆ ಟ್ರೋಲ್​: ವಿಡಿಯೋ ನೋಡಿ ಜನ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಒಬ್ಬರು 'ಭಯಾನಕ ಧವನ್. ನಟನಾಗಿ ಇದನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು' ಅಂತಿದ್ದಾರೆ. ಇನ್ನೊಬ್ಬರು 'ಫೋಟೋಶೂಟ್​ ವೇಳೆ ಕಿಯಾರಾ ಅಡ್ವಾಣಿ ಜೊತೆಗೂ ಹೀಗೆ ಮಾಡಿದ್ದ' ಅಂತಿದ್ದಾರೆ. ಮತ್ತೊಬ್ಬರು 'ಭಯಾನಕ, ಅತಿ ಭಯಾನಕ' ಅಂತಿದ್ದಾರೆ. ಹಳೆಯ ವಿಡಿಯೋದಿಂದಾಗಿ ವರುಣ್ ಧವನ್ ಇದೀಗ ಟೀಕೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಮದುವೆಯಾದ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಅವರೊಂದಿಗೆ ಬೇಬಿ ಜಾನ್ ಸಿನಿಮಾ ಮಾಡಿದ್ದರಿಂದ ವರುಣ್ ಧವನ್ ದಕ್ಷಿಣ ಭಾರತ ಚಿತ್ರರಂಗಕ್ಕೂ ಪರಿಚಿತರಾಗಿದ್ದಾರೆ. ಇದೀಗ ಕೀರ್ತಿ ಸುರೇಶ್ ಜೊತೆಗೆ ಅದೇಗೆ ರೊಮ್ಯಾನ್ಸ್ ಮಾಡಿದ್ದಾರೆ ಎಂಬ ಚರ್ಚೆಗಳು ಬರುತ್ತಿವೆ.

ಇದನ್ನೂ ಓದಿ: ಲಿಪ್​ಲಾಕ್​ಗೆ ಒಲ್ಲೆ ಎನ್ನುತ್ತಲೇ ಸಿನಿಮಾ ರಿಜೆಕ್ಟ್​ ಮಾಡ್ತಿದ್ದ ನಟಿಗೆ ಇದೇನಾಗೋಯ್ತು? ಅಯ್ಯೋ ಕೀರ್ತಿ ಹೀಗೆಕಾದೆ?

ವರುಣ್ ಧವನ್ ಮುಂದಿನ ಚಿತ್ರಗಳು: 'ಮೈ ತೇರಾ ಹೀರೋ' 2014ರಲ್ಲಿ ಬಿಡುಗಡೆಯಾಗಿತ್ತು. 2011ರಲ್ಲಿ ಬಂದ ತೆಲುಗು ಚಿತ್ರ 'ಕಂದಿರೇಗ'ದ ರಿಮೇಕ್ ಇದು. ಚಿತ್ರದಲ್ಲಿ ವರುಣ್ ಧವನ್, ನರ್ಗಿಸ್ ಫಕ್ರಿ ಜೊತೆ ಇಲಿಯಾನಾ ಡಿಕ್ರೂಜ್ ಕೂಡ ನಟಿಸಿದ್ದರು. ವರುಣ್ ಧವನ್ 'ಬೇಬಿ ಜಾನ್'​ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 'ಸನ್ನಿ ಸಂಸ್ಕಾರಿ ಕಿ ತುಲಸಿ ಕುಮಾರ್'​ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.