ನಟ ಶರತ್ ಬಾಬು ವಿರುದ್ಧ ವೈಯಕ್ತಿಕವಾಗಿಯೂ ಹಲವು ಆರೋಪಗಳನ್ನು ಮಾಡಿದ್ದರು. ಆ ಸಮಯದಲ್ಲಿ ಶರತ್ ಬಾಬು ಜೀವನದಲ್ಲಿ ಸಾಕಷ್ಟು ಪ್ರೇಮಕಥೆಗಳಿವೆ ಎಂಬ ವರದಿಗಳು ಕೂಡ ಮಾಧ್ಯಮಗಳಲ್ಲ ಹರಿದಾಡಿದ್ದವು. ಇದೀಗ ತೆಲುಗು ನಟಿ ಜಯಲಲಿತಾ ಹೇಳಿಕೆ ವೈರಲ್ ಆಗ್ತಿದೆ.. ಏನಿದು ಸ್ಟೋರಿ ನೋಡಿ..
ಆ ಸ್ಟಾರ್ ನಟನಿಂದ ಮಗುವನ್ನು ಬಯಸಿದ್ದ ಜಯಲಲಿತಾ!?
ಹಲವು ಸಿನಿಮಾ ನಟ-ನಟಿಯರ ಬದುಕೇ ರೋಚಕ ಕಥೆಗಳಿಂದ ತುಂಬಿ ಹೋಗಿರುತ್ತವೆ. ಈಗಂತೂ ಸಿನಿಮಾ ಸೆಲೆಬ್ರಿಟಿಗಳು ಎಂದು ಹೇಳುವುದೂ ಕಷ್ಟ. ಕೆಲವು ನಟನಟಿಯರ ಜೀವನ ತಮ್ಮ ಚಲನಚಿತ್ರಗಳಂತೆ ನಿಜವಾಗಿ ಮತ್ತು ಸುಂದರವಾಗಿರುವುದಿಲ್ಲ. ಸಂದರ್ಭಗಳ ಆಧಾರದ ಮೇಲೆ ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳುತ್ತಾರೆ. ಹಲವು ಏಳುಬೀಳುಗಳನ್ನು ಲೈಪಲ್ಲಿ ನೋಡಿರುತ್ತಾರೆ.
ದಕ್ಷಿಣ ಭಾರತದ ಹ್ಯಾಂಡ್‌ಸಮ್ ಹಿರಿಯ ನಟ ಶರತ್ ಬಾಬು (Sarath Babu) ಅವರ ಬಗ್ಗೆ ಬಹುತೇಕರಿಗೆ ಗೊತ್ತು. 'ಇತ್ತೀಚೆಗೆ ಅವರಿಗೆ ಸಂಬಂಧಪಟ್ಟ ಸಂಗತಿಯೊಂದು ಸಖತ್ ವೈರಲ್ ಆಗಿದೆ. 'ಶರತ್ ಬಾಬು ಅವರಿಂದ ಮಗುಮಾಡಿಕೊಳ್ಳಬೇಕು ಎಂದುಕೊಂಡಿದ್ದೆ' ಎಂದು ತೆಲುಗು ನಟಿ ಜಯಲಲಿತಾ (Jayalalitha) ಹೇಳಿದ್ದು ಇದೀಗ ಭಾರೀ ವೈರಲ್ ಆಗಿ ಹಾಟ್ ಟಾಪಿಕ್ ಆಗಿದೆ. ಸದ್ಯ ಈ ವಿಚಾರವಾಗಿ ಸಿನಿರಂಗದಲ್ಲಿ ಬಾರೀ ಚರ್ಚೆಯಾಗುತ್ತಿದೆ.
ಶರತ್ ಬಾಬು ಮತ್ತು ರಮಾ ಪ್ರಭಾ ಡಿವೋರ್ಸ್
ನಟ ಶರತ್ ಬಾಬು ಅವರು ತಮ್ಮ ಹಿರಿಯ ನಟಿ ರಮಾ ಪ್ರಭಾ (Rama Prabha) ಅವರನ್ನು ತಮ್ಮ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಸ್ವಲ್ಪ ಸಮಯದ ನಂತರ ಶರತ್ ಬಾಬು ಮತ್ತು ರಮಾ ಪ್ರಭಾ ಪರಸ್ಪರ ಬೇರೆಯಾದರು. ಒಂದು ಹಂತದಲ್ಲಿ ರಮಾಪ್ರಭಾ ಅವರು ಶರತ್ ಬಾಬು ಅವರ ವಿರುದ್ದ ಕೆಲವು ಕಟು ಟೀಕೆಗಳನ್ನು ಮಾಡಿದ್ದರು. 'ಸಿನಿರಂಗದಲ್ಲಿ ಬೆಳೆದು ಶರತ್ ಬಾಬು ತಮಗೆ ಅನ್ಯಾಯ ಮಾಡಿದ್ದಾರೆ.. ಅದೇ ರೀತಿ ಶರತ್ ಬಾಬು ತಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ' ಎಂದು ಹೇಳುವ ಮೂಲಕ ರಮಾ ಪ್ರಭಾ ಭಾರೀ ಸಂಚಲನ ಮೂಡಿಸಿದ್ದರು.
ಅಷ್ಟೇಅಲ್ಲ, ನಟ ಶರತ್ ಬಾಬು ವಿರುದ್ಧ ವೈಯಕ್ತಿಕವಾಗಿಯೂ ಹಲವು ಆರೋಪಗಳನ್ನು ಮಾಡಿದ್ದರು. ಆ ಸಮಯದಲ್ಲಿ ಶರತ್ ಬಾಬು ಜೀವನದಲ್ಲಿ ಸಾಕಷ್ಟು ಪ್ರೇಮಕಥೆಗಳಿವೆ ಎಂಬ ವರದಿಗಳು ಕೂಡ ಮಾಧ್ಯಮಗಳಲ್ಲ ಹರಿದಾಡಿದ್ದವು. ಇದೀಗ ತೆಲುಗು ನಟಿ ಜಯಲಲಿತಾ ಅವರು 'ಶರತ್ ಬಾಬು ಜೊತೆ ನಾನು ಕೆಲವು ಕಾಲ ಬದುಕಿದ್ದು ನಿಜ' ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಒಪ್ಪಿಕೊಂಡಿದ್ದಾರೆ. ಅವರಿಬ್ಬರೂ ಹಲವಾರು ತೆಲುಗು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಒಂದು ಕಾಲದಲ್ಲಿ ನಾವಿಬ್ಬರೂ ತುಂಬಾ ಆತ್ಮೀಯರಾಗಿದ್ದೆವು
ಶರತ್ ಬಾಬು ಜೊತೆಗಿನ ಸಂಬಂಧದ ಬಗ್ಗೆ ಮಾತನಾಡುತ್ತಾ ಜಯಲಲಿತಾ ಅವರು, "ಆ ಒಂದು ಕಾಲದಲ್ಲಿ ನಾವಿಬ್ಬರೂ ತುಂಬಾ ಆತ್ಮೀಯರಾಗಿದ್ದೆವು... ಅವರು ನನಗೆ ದೇವರು ಕಳುಹಿಸಿದ ಮಾರ್ಗದರ್ಶಕ ಎಂದೇ ನಾನು ಅವರನ್ನುಅಂದುಕೊಂಡಿದ್ದೆ. ಅವರನ್ನು 'ಬಾವ' ಎಂದು ಕರೆಯುತ್ತೇನೆ. ನಾವು ಒಟ್ಟಿಗೆ ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದೇವೆ. ಒಂದು ಹಂತದಲ್ಲಿ ನನಗೆ ಅವರಿಂದ ಮಗುವಾಗಬೇಕೆಂದು ಅನಿಸಿತ್ತು...
ನಾವು ಪ್ರೀತಿಸಿ ಜೊತೆಯಲ್ಲಿದ್ದಾಗ, ಚಿತ್ರರಂಗದ ಕೆಲವರು ನಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಿದರು.. ಇಂತಹ ಪ್ರಯತ್ನಗಳಿಂದಲೇ ಸ್ವತಃ ಶರತ್ ಬಾಬು ಕೂಡ ನನ್ನೊಂದಿಗೆ ಮಗುವನ್ನು ಹೊಂದಲು ಯೋಚಿಸಿದರು.. ಆದರೆ, ಆಗ ನಮ್ಮಿಬ್ಬರ ವಿವೇಕ ಜಾಗೃತವಾಯ್ತು.. 'ಬಹುಶಃ ನಾವು ಸತ್ತರೆ, ಸಂಬಂಧಿಕರು ನಮ್ಮ ಮಗುವಿಗೆ ಆಸ್ತಿಗಾಗಿ ಕಿರುಕುಳ ನೀಡುತ್ತಾರೆ. ಹೀಗಾಗಿ ನಮಗೆ ಮಗು ಬೇಡ' ಆ ಬಳಿಕ ಶರತ್ ಬಾಬು ಹೇಳಿದ್ದರು.. ಹೀಗಾಗಿ ನಮ್ಮಿಬ್ಬರ ಸಂಬಂಧಕ್ಕೆ ಮಗು ಆಗಲಿಲ್ಲ. ಶರತ್ ಬಾಬು ಕುಟುಂಬದ ಕೆಲವರು ಈಗಲೂ ನನಗೆ ಆತ್ಮೀಯರಾಗಿದ್ದಾರೆ" ಎಂದು ಜಯಲಲಿತಾ ಹೇಳಿಕೆ ನೀಡಿದ್ದಾರೆ. ಸದ್ಯ ಈ ಸಂಗತಿ ಸಿನಿದುನಿಯಾದಲ್ಲಿ 'ಹಾಟ್ ಟಾಪಿಕ್' ಆಗಿ ಓಡಾಡುತ್ತಿದೆ.


