ಅಮ್ಮ ಖರೀದಿಸಿದ ಮೊದಲ ಮನೆಯಲ್ಲಿ ನೆನಪಿನಾಳಕ್ಕೆ ಜಾರಿದ ಜಾನ್ವಿ ಕಪೂರ್

ತ್ರಿಲೋಕ ಸುಂದರಿ ನಟಿ ಶ್ರೀದೇವಿ ನಿಧನರಾಗಿ ಈ ಜಗತ್ತನ್ನು ಅಗಲಿ ನಾಲ್ಕು ವರ್ಷಗಳೇ ಸಂದವು. ಆದರೆ ಯಾರಿಗೂ ಆಕೆಯ ದಿಢೀರ್ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಶ್ರೀದೇವಿ ಪುತ್ರಿ ಜಾನ್ವಿಗೂ ತನ್ನಮ್ಮನನ್ನು ಮರೆಯಲಾಗುತ್ತಿಲ್ಲ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅಮ್ಮನ ನೆನಪಿನಲ್ಲಿ ಮಗಳು ಸಾಗುತ್ತಿದ್ದಾಳೆ.

Actress Janhvi Kapoor falls in mother sridevi memory, visits moms house in chennai, which sridevi bought first property akb

ತ್ರಿಲೋಕ ಸುಂದರಿ ನಟಿ ಶ್ರೀದೇವಿ ನಿಧನರಾಗಿ ಈ ಜಗತ್ತನ್ನು ಅಗಲಿ ನಾಲ್ಕು ವರ್ಷಗಳೇ ಸಂದವು. ಆದರೆ ಯಾರಿಗೂ ಆಕೆಯ ದಿಢೀರ್ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಿರುವಾಗ ಶ್ರೀದೇವಿ ಪುತ್ರಿ ಜಾನ್ವಿಗೂ ತನ್ನಮ್ಮನನ್ನು ಮರೆಯಲಾಗುತ್ತಿಲ್ಲ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅಮ್ಮನ ನೆನಪಿನಲ್ಲಿ ಮಗಳು ಸಾಗುತ್ತಿದ್ದಾಳೆ. ಇತ್ತೀಚೆಗಷ್ಟೇ ಆಕೆ ತನ್ನ ತಂದೆ ಬೋನಿ ಕಪೂರ್ ತಾಯಿ ಶ್ರೀದೇವಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಮಗಳು ಜಾನ್ವಿ, ತಾಯಿ ಶ್ರೀದೇವಿ ಮೊದಲ ಬಾರಿ ಖರೀದಿಸಿದ ಮನೆಗೆ ಭೇಟಿ ನೀಡಿದ್ದಾರೆ. ಚೆನ್ನೈನಲ್ಲಿ ಈ ಮನೆ ಇದ್ದು, ಇದಕ್ಕಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ನಟಿ ಜಾನ್ವಿ ಭೇಟಿ ನೀಡಿದ್ದಾರೆ. ವೋಗ್ ಇಂಡಿಯಾಕ್ಕಾಗಿ ಮಾಡಿದ ವಿಡಿಯೋದಲ್ಲಿ ಜಾನ್ವಿಯವರು ತನ್ನ ತಾಯಿ ಖರೀದಿಸಿದ ಮೊದಲ ಮನೆಯ ಮೂಲೆ ಮೂಲೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಹಾಯ್ ಗಯ್ಸ್ ವೆಲ್‌ಕಮ್ ಮೈ ಚೆನ್ನೈ ಹೌಸ್ ಎಂದು ವಿಡಿಯೋ ಆರಂಭಿಸಿದ ಜಾನ್ವಿ ಮನೆಯ ಮೂಲೆ ಮೂಲೆಯನ್ನು ಆ ಮನೆಯೊಂದಿಗಿರುವ ಅನುಬಂಧವನ್ನು ಹಂಚಿಕೊಂಡಿದ್ದಾರೆ. 

ಅಲ್ಲಿ ಮೊದಲಿಗೆ ತನ್ನ ತಂದೆ ಬೋನಿ ಕಪೂರ್ ಇರುವ ಕಚೇರಿಯನ್ನು ತೋರಿಸಿದ ಜಾನ್ವಿ ನಂತರ ಇದು ತನ್ನ ತಾಯಿ ಮೊದಲು ಖರೀದಿಸಿದ ಮೊದಲ ಆಸ್ತಿ ಎಂದು ಹೇಳಿಕೊಂಡಿದ್ದಾರೆ. ಇದು ತುಂಬಾ ವಿಭಿನ್ನವಾಗಿತ್ತು. ಆದರೆ ವಿವಾಹದ ನಂತರ ಅದನ್ನು ಅಭಿವೃದ್ಧಿಗೊಳಿಸಲು ಬಯಸಿದಳು. ತಂದೆಯನ್ನು ಮದುವೆಯಾದ ನಂತರ ಶ್ರೀದೇವಿ ವಿವಿಧ ದೇಶಗಳಿಗೆ ಭೇಟಿ ನೀಡಿದ್ದು, ಅಲ್ಲಿಂದ ತಂದಂತಹ ಕೆಲವು ಅಮೂಲ್ಯ ವಸ್ತುಗಳನ್ನು ಕೂಡ ಇಲ್ಲಿ ಇರಿಸಲಾಗಿದೆ ಎಂದು ಜಾನ್ವಿ ವಿವರ ನೀಡಿದ್ದಾಳೆ. ನಂತರ ಮನೆಯಲ್ಲಿದ್ದ ಸ್ವತಃ ಶ್ರೀದೇವಿ ಮಾಡಿದ ಹಲವು ಪೇಂಟಿಂಗ್‌ಗಳನ್ನು ಜಾನ್ವಿ ತೋರಿಸಿದ್ದಾರೆ. 

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀದೇವಿ ಮಗಳು: ಜ್ಯೂ. ಎನ್‌.ಟಿ.ಆರ್‌ಗೆ ನಾಯಕಿಯಾದ ಜಾಹ್ನವಿ ಕಪೂರ್

ಅಲ್ಲದೇ ಶ್ರೀದೇವಿ ನಿಧನದ ನಂತರ ಬೋನಿ ಕಪೂರ್ ಈ ಮನೆಯನ್ನು ಆಕೆಯ ನೆನಪುಗಳು ಸದಾ ಉಳಿಯುವಂತಾಗುವಂತೆ ರೂಪಿಸಿದ್ದಾರೆ. ಈ ಮನೆಯಲ್ಲಿ ಆಗಾಗ ದಿನಗಳನ್ನು ಕಳೆಯುತ್ತಿರುತ್ತಾರೆ ಎಂದು ಜಾನ್ವಿ ಹೇಳಿಕೊಂಡಿದ್ದಾರೆ. ಶ್ರೀದೇವಿಯ ಆಸೆ ಆಸಕ್ತಿಗಳೇನು ಎಂಬುದು ಮಗಳು ಜಾನ್ವಿ ತೋರಿಸಿದ ವಿಡಿಯೋದಲ್ಲಿ ಎದ್ದು ಕಾಣಿಸುತ್ತಿದೆ. ಸ್ವತಃ ಶ್ರೀದೇವಿ ಮಾಡಿದ್ದ ಪೇಟಿಂಗ್‌ಗಳಲ್ಲದೇ, ಹೊರದೇಶಗಳ ಪ್ರವಾಸದ ವೇಳೆ ಶ್ರೀದೇವಿ ಖರೀದಿಸಿ ತಂದ ಪೇಂಟಿಂಗ್‌ಗಳನ್ನು ಕೂಡ ಜಾನ್ವಿ ತೋರಿಸುತ್ತಿದ್ದಾರೆ. 

ಅಲ್ಲದೇ ಮನೆಯಲ್ಲಿ ಇನ್ನೂ ಹತ್ತು ಹಲವು ಅಮೂಲ್ಯ ನೆನಪುಗಳಿದ್ದು, ಶ್ರೀದೇವಿಯ ಹಲವು ಸಂದರ್ಭಗಳಲ್ಲಿ ಹಲವು ಗಣ್ಯರೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ಗೋಡೆಯ ವಾಲ್ ಶೋಕೇಸ್‌ನಲ್ಲಿ ಜೋಡಿಸಲಾಗಿದೆ. ಇದರ ಜೊತೆಗೆ ಶ್ರೀದೇವಿ ಬಾಲ್ಯದ ಕುಟುಂಬಗಳು ತಾಯಿ ಕಡೆಯ ಬಂಧುಗಳು ಬೋನಿ ಕಪೂರ್ ಬಾಲ್ಯದ ಫೋಟೋಗಳು ಹೀಗೆ  ಮನೆಯ ಮೂಲೆ ಮೂಲೆಯಲ್ಲೂ ಶ್ರೀದೇವಿ ನೆನಪು ಎದ್ದು ಕಾಣುವಂತಿದೆ. 

ಶ್ರೀದೇವಿ ಮತ್ತು ಜಾನ್ವಿ ಕಪೂರ್ ನಡುವೆ ಹೋಲಿಕೆ ಮಾಡಬೇಡಿ - ಬೋನಿ ಕಪೂರ್

ಅಲ್ಲದೇ ಇದೇ ವೇಳೆ ಅಪ್ಪ ಅಮ್ಮನ ನಡುವಿನ ಪ್ರೀತಿಯ ಕತೆಯನ್ನು ಇಲ್ಲಿಂದ ಫೋಟೋವೊಂದರಿಂದ ಜಾನ್ವಿ ವಿವರಿಸಿದ್ದಾಳೆ. ಅಮ್ಮ ಶ್ರೀದೇವಿ ಆಕೆಯ ಗೆಳತಿ ಬೀನಾ ಜೊತೆ ಇಟಲಿಗೆ ಹೋಗಿದ್ದರಂತೆ ಈ ವೇಳೆ ಯಾರೋ ಅಪರಿಚಿತನೋರ್ವ ಶ್ರೀದೇವಿಗೆ ಹೊಡೆದಿದ್ದಾನೆ. ಇದರಿಂದ ಶ್ರೀದೇವಿ ಶಾಕ್ ಆಗಿದ್ದರು. ಅಲ್ಲದೇ ಈ ವಿಚಾರವನ್ನು ಗೆಳತಿ ಬೀನಾ ಶ್ರೀದೇವಿ ಪತಿ ಬೋನ್ ಕಪೂರ್‌ಗೆ ಕರೆ ಮಾಡಿ ತಿಳಿಸಿದ್ದು, ಕೂಡಲೇ ಬೋನಿ ಕಪೂರ್ ಮಕ್ಕಳಾದ ಜಾನ್ವಿ ಹಾಗೂ ಖುಷಿ ಇಬ್ಬರನ್ನು ಮುಂಬೈನ ಮನೆಯಲ್ಲಿ ಬಿಟ್ಟು ಇಟಲಿಗೆ ವಿಮಾನವೇರಿದ್ದರಂತೆ. ಈ ವಿಚಾರವನ್ನು ಒಂದು ಫೋಟೋ ನೋಡುತ್ತಾ ಜಾನ್ವಿ ವಿವರಿಸಿದ್ದಾಳೆ. ಒಟ್ಟಿನಲ್ಲಿ ಈ ವಿಡಿಯೋ ಪೂರ್ತಿ ಶ್ರೀದೇವಿ ನೆನಪುಗಳೇ ರಾರಾಜಿಸುತ್ತಿವೆ. 

ಪುರುಷರ ಬಗ್ಗೆ ಜಾನ್ವಿಯ ಜಡ್ಜ್ಮೇಂಟ್‌ ಅನ್ನು ತಾಯಿ ಶ್ರೀದೇವಿ ಎಂದೂ ನಂಬುತ್ತಿರಲಿಲ್ಲವಂತೆ!

Latest Videos
Follow Us:
Download App:
  • android
  • ios