ಕಳೆದ ಶತಮಾನದ 100 ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ಸತ್ಯ' ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಭಿನ್ನ ಚಿತ್ರ ನೀಡುವುದರಲ್ಲಿ ಎತ್ತಿದ ಕೈ. ಜೊತೆಗೆ ವಿವಾದಾತ್ಮಕ ಟ್ವೀಟ್ ಹಾಗೂ ಹೇಳಿಕೆ ನೀಡುವುದರಲ್ಲಿಯೂ ಸದಾ ಮುಂದೆ. ಅಷ್ಟೇ ಅಲ್ಲ ಶ್ರೀದೇವಿಯನ್ನು ಇನ್ನಿಲ್ಲದಂತೆ ಆರಾಧಿಸುತ್ತಿದ್ದ ಈ ನಿರ್ದೇಶಕ, ಬೋನಿ ಕಪೂರ್ ಅವರನ್ನು ವರಿಸಿದಾಗಲೂ ಕಾಮೆಂಟ್ ಮಾಡದೇ ಬಿಟ್ಟವರಲ್ಲ. ತಮ್ಮ ಬಯೋಗ್ರಾಫಿಯಲ್ಲಿಯೂ ಚಿತ್ರರಂಗ ಅತಿಲೋಕ ಸುಂದರಿಯ ಸೌಂದರ್ಯವನ್ನು ಉಲ್ಲೇಖಿಸಿದ್ದಾರೆ. ಅದೂ ದೊಡ್ಡ ಸುದ್ದಿಯೇ ಆಗಿತ್ತು. 

ಬಲವಂತವಾಗಿ ಕನ್ನಡ ನಟಿಯನ್ನು ತಬ್ಬಿ ಮುತ್ತು ಕೊಟ್ಟ ವರ್ಮ!

ಶ್ರೀದೇವಿ ವಿರಹದಲ್ಲಿಯೇ ಹಲವು ವರ್ಷಗಳನ್ನು ತಳ್ಳಿದ ಆರ್‌ಜಿವಿ ರತ್ನಾ ಎಂಬುವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟು, ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಇವರಿಬ್ಬರಿಗೆ ಹುಟ್ಟಿದ ಮಗಳು ಇದೀಗ ಅಮ್ಮನಾಗಿದ್ದು, ವರ್ಮಾ ಅಜ್ಜನಾಗಿದ್ದಾರೆ. ಅಷ್ಟೇ ಆಗಿದ್ದರೆ ಓಕೆ, ಅಮೆರಿಕದಲ್ಲಿರುವ ಮಗಳಿಗೆ ಹೆಣ್ಣು ಮಗುವನ್ನು ಹೆತ್ತಿದ್ದೇ ಹೆತ್ತಿದ್ದು, ತಾತನ ಲಕ್ ಖುಲಾಯಿಸಿದಂತೆ ಕಾಣುತ್ತಿದೆ.

ಈ ಮಹಾನ್ ನಿರ್ದೇಶಕ ತೆರೆ ಮೇಲೆ ಮಾತ್ರ ನಟ-ನಟಿಯರಿಗೆ ರೊಮ್ಯಾಂಟಿಕ್‌ ಸೀನ್‌ ಮಾಡಿಸುತ್ತಾರೆ ಅಂದುಕೊಬೇಡಿ. ರಿಯಲ್‌ ಲೈಫಲ್ಲೂ ಲವರ್‌ ಬಾಯ್‌. ಆಗೊಮ್ಮೆ, ಈಗೊಮ್ಮೆ ನಟಿ ಚಾರ್ಮಿ ಜೊತೆಯೂ ಹೆಸರು ಕೇಳಿ ಬರುತ್ತಿತ್ತು. ಆದರೆ ಈಗ ಮತ್ತೊಬ್ಬಳು ನಟಿಯೇ ವರ್ಮಾ ಒಪ್ಪಿದರೆ ಮದುವೆಯಾಗುವುದಾಗಿ ಹೇಳಿರುವುದು, ಚಿತ್ರರಂಗದಲ್ಲಿ ಸದ್ಯಕ್ಕೆ ಹರಿದಾಡುತ್ತಿರುವ ಬ್ರೇಕಿಂಗ್ ನ್ಯೂಸ್!

ಹೌದು. ಆರ್‌ಜಿವಿ ನಿರ್ದೇಶನ 'ಬ್ಯುಟಿಫುಲ್‌' ಚಿತ್ರದಲ್ಲಿ ಮಿಂಚಿದ ನಟಿ ಗಾಯಿತ್ರಿ ತಾಮ್‌ ವರ್ಮಾ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ. 'ಆರ್‌ಜಿವಿ ಸರ್‌ ಜೊತೆ ಕೆಲಸ ಮಾಡುವುದು ಒಂಥರಾ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಂತೆ. ತುಂಬಾ ಒಳ್ಳೆಯ ವ್ಯಕ್ತಿ. ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿರದಿದ್ದರೆ ನಾನು ಅವರನ್ನು ಮದುವೆಯಾಗುತ್ತಿದ್ದೆ,' ಎಂದಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದ ಸಕ್ಸೆಸ್ ಪಾರ್ಟಿಯಲ್ಲಿಯೂ ಒಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಲ್ಲದೇ, ತಬ್ಬಿಕೊಂಡಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಕನ್ನಡ ನಟಿ ಮೈ ಮೇಲೆ ಬಿಯರ್ ಚೆಲ್ಲಿದ ನಿರ್ದೇಶಕ RGV!

'ಚಿತ್ರದಲ್ಲಿ ನನ್ನದು ಸಣ್ಣ ಪಾತ್ರವಾಗಿದ್ದರೂ, ಅವರು ನನ್ನನ್ನು ಸಕ್ಸಸ್ ಪಾರ್ಟಿಗೆ ಆಹ್ವಾನಿಸಿದ್ದರು. ಅವರ ಮೇಲಿನ ಗೌರವಕ್ಕೆ ತಬ್ಬಿಕೊಂಡೆ' ಎಂದು ಗಾಯಿತ್ರಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಫೆಬ್ರವರಿ 23ರಂದು ರಾಮ್‌ ಪುತ್ರಿ ರೇವತಿ USನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಬೆನ್ನಲ್ಲೇ ಗಾಯತ್ರಿ ಹಾಗೂ ವರ್ಮಾ ಅವರ ನಡುವಿನ ಗುಸ್ ಗುಸ್ ಸುದ್ದಿಯಲ್ಲಿದ್ದಾರೆ.

ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ  ಇಲ್ಲಿ ಕ್ಲಿಕ್ ಮಾಡಿ: