Asianet Suvarna News Asianet Suvarna News

ಕಮಲ ಹಾಸನ್​ ಮಾಜಿ ಪ್ರೇಯಸಿ ಗೌತಮಿಗೆ ಕೊಲೆ ಬೆದರಿಕೆ, 25 ಕೋಟಿ ವಂಚನೆ: ದೂರು ದಾಖಲು

ಕಮಲ ಹಾಸನ್​ ಮಾಜಿ ಪ್ರೇಯಸಿ ಗೌತಮಿಗೆ ಕೊಲೆ ಬೆದರಿಕೆ, 25 ಕೋಟಿ ವಂಚನೆ. ದೂರು ದಾಖಲು ಮಾಡಿದ ನಟಿ
 

Actress Gauthami lodges shocking police complaint after death threats to her daughter suc
Author
First Published Sep 13, 2023, 2:59 PM IST

ಖ್ಯಾತ ತಮಿಳು ನಟಿ, ನಟ ಕಮಲ್​ಹಾಸನ್​ ಜೊತೆ 13 ವರ್ಷಗಳ ಸಂಬಂಧದ ಬಳಿಕ ಸಂಬಂಧ ಕಡಿದುಕೊಂಡಿದ್ದ ನಟಿ ಗೌತಮಿ ಅವರು ತಮಗೆ 25 ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ದೂರು ದಾಖಲು ಮಾಡಿದ್ದಾರೆ. ಹಣ ವಾಪಸು ಕೇಳಲು ಹೋದರೆ ತಾವು ಹಾಗೂ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ನಟಿ ದೂರಿದ್ದಾರೆ.  ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನಿಗೆ ಸಂಬಂಧಿಸಿದಂತೆ ಈ ದೂರು ದಾಖಲಾಗಿದೆ. ಈ ಜಮೀನಿನ ವಿವಾದದಲ್ಲಿ ತಮಗೆ 25 ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಆಗಿರುವುದು ಏನೆಂದರೆ,  ಅಳಗಪ್ಪನ್ ಕಂಪನಿಯ ಮುಖ್ಯಸ್ಥರಿಂದ ತಮಗೆ ವಂಚನೆಯಾಗಿದ್ದು,   ನ್ಯಾಯ ಕೊಡಿಸಬೇಕೆಂದು ಅವರು ಚೆನ್ನೈ ಸಿಟಿ ಪೊಲೀಸ್ ಕಮಿಷರ್​ಗೆ ದೂರು ಸಲ್ಲಿಸಿದ್ದಾರೆ. ಶ್ರೀಪರೆಂಬುದುರ್​ನಲ್ಲಿ  ಗೌತಮಿ ಅವರ 46 ಎಕರೆ ಜಮೀನು ಇದೆ. ಅದನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪೆನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎನ್ನುವುದು ನಟಿಯ ದೂರು.  ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿದರೂ ಕಂಪೆನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ದೂರಿದ್ದಾರೆ. ಅಳಗಪ್ಪನ್ ಕಂಪೆನಿಯ ಮುಖ್ಯಸ್ಥ ನಟಿ ಸಂಪಾದಿಸಿದ ಸುಮಾರು 25 ಕೋಟಿ ರೂಪಾಯಿ ಆಸ್ತಿ ವಿಚಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. 17 ವರ್ಷದಿಂದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸುಮಾರು 125 ಸಿನಿಮಾಗಳಲ್ಲಿ ನಟಿಸಿರುವುದಾಗಿ ನಟಿ ಹೇಳಿದ್ದಾರೆ.

ನಟಿ ಆಲಿಯಾ, ಪೂಜಾ ಭಟ್​ರ ಮಗಳೆ? ಶಾಕಿಂಗ್​ ಸುದ್ದಿಗೆ ಕೊನೆಗೂ ಮೌನ ಮುರಿದ ಪೂಜಾ ಹೇಳಿದ್ದೇನು?
 
 ತಮ್ಮ ಸಹಿ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ತಮಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ಕಂಪೆನಿಯವರು ತಮಗೆ ಹಾಗೂ ಮಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯದು. ಇದೀಗ ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಟಿ ಗೌತಮಿ ಅವರು,  ಕಮಲ್ ಹಾಸನ್‌ ಜೊತೆ ಲಿವ್ ಇನ್ ರಿಲೇಷನ್‌ಶಿಪ್​ನಲ್ಲಿದ್ದರು.  2004ರಿಂದ 2016ರವರೆಗೂ ಇಬ್ಬರೂ ಜೊತೆಯಾಗಿಯೇ ಇದ್ದರು. ಬಳಿಕ ಗೌತಮಿ ಸುದೀರ್ಘ ಪತ್ರ ಬರೆದು ಬೇರೆಯಾಗುತ್ತಿರುವುದಾಗಿ ಹೇಳಿದ್ದರು.  ಗೌತಮಿ ಮತ್ತು ಕಮಲ್ 1989 ರಲ್ಲಿ ಅವರ ಅಪೂರ್ವ ಸಾಗೋಧರರಗಳ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು, ಅದು ಭಾರಿ ಹಿಟ್ ಆಗಿತ್ತು. ಅಂದಿನಿಂದ ಇವರಿಬ್ಬರು ಆತ್ಮೀಯ ಗೆಳೆಯರಾಗಿದ್ದರು ಎನ್ನಲಾಗಿದೆ. ಶೋಬಿಜ್‌ಗೆ ಕಾಲಿಡುವ ಮೊದಲು ತಾನು ಕಮಲ್ ಹಾಸನ್ ಅವರ ಕಟ್ಟಾ ಅಭಿಮಾನಿಯಾಗಿದ್ದೆ ಎಂದು ಗೌತಮಿ ಬಹಿರಂಗಪಡಿಸಿದ್ದರು. ಸಾರಿಕಾ ಅವರನ್ನು ಮದುವೆಯಾಗಿರುವಾಗಲೇ ಕಮಲ್ ಗೌತಮಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದರು ಎಂದು ವರದಿಯಾಗಿತ್ತು. 2004 ರಲ್ಲಿ ಸಾರಿಕಾ ಅವರೊಂದಿಗೆ ನಟನ ವಿಚ್ಛೇದನದ ಹಿಂದಿನ ಕಾರಣಗಳಲ್ಲಿ ಇದು ಒಂದು ಕಾರಣವಾಯಿತು. ಮದುವೆಯ ವಿಷಯದಲ್ಲಿ ಇಬ್ಬರಿಗೂ ನಂಬಿಕೆ ಇಲ್ಲದ ಕಾರಣ   ಪರಸ್ಪರ ಮದುವೆಯಾಗಲು ನಿರಾಕರಿಸಿದರು ಎನ್ನಲಾಗಿದೆ. 

ಜವಾನ್​ ಚಿತ್ರ ನೋಡಿ ರೊಚ್ಚಿಗೆದ್ದ ಶಾರುಖ್​ ಫ್ಯಾನ್ಸ್​: ಸಂಪೂರ್ಣ ಟಿಕೆಟ್​ ಹಣ ವಾಪಸ್​ ನೀಡಿದ ಮಾಲೀಕ!

Follow Us:
Download App:
  • android
  • ios