34 ವರ್ಷದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್  ಕೊರೋನಾ ಸೋಂಕಿಗೆ ತುತ್ತಾಗಿದ್ದು, ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ರಕ್ತದೊತ್ತಡ ನಿಯಂತ್ರಣಕ್ಕೆ ಬಾರದ ಕಾರಣ ಇಂದು ಬೆಳಗ್ಗೆ ನಿಧನರಾಗಿದ್ದಾರೆ.  ದಿವ್ಯಾ ಆರೋಗ್ಯದ ಸ್ಥಿತಿ ಬಗ್ಗೆ ತಾಯಿ ಖಾಸಗಿ ವೆಬ್‌ಸೈಟ್‌ವೊಂದಕ್ಕೆ ಮಾಹಿತಿ ನೀಡಿದ್ದರು. 

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟಿ ಸಾವು 

'ದಿವ್ಯಾ ಆರೋಗ್ಯ ದಿನೇ ದಿನೆ ಹದಗೆಡುತ್ತಿತ್ತು. ನವೆಂಬರ್ 26ರಂದು ಆಸ್ಪತ್ರೆಗೆ ದಾಖಲಿಸಿದೆವು. ದಿವ್ಯಾ ನ್ಯುಮೋನಿಯಾದಿಂದ ಬಳಲುತ್ತಿದ್ದಳು. ಆಕೆ ಆರೋಗ್ಯ ಬಗ್ಗೆ ತಿಳಿದ ತಕ್ಷಣವೇ ನಾವು ಡೆಲ್ಲಿಯಿಂದ ಮುಂಬೈಗೆ ಆಗಮಿಸಿದೆವು, ' ಎಂದು ದಿವ್ಯಾ ತಾಯಿ ಮಾತನಾಡಿದ್ದಾರೆ.

2019ರ ಡಿಸೆಂಬರ್‌ನಲ್ಲಿ ದಿವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪತಿ ಗಗನ್ ಕೂಡ ಕಿರುತೆರೆ ಕಲಾವಿದರಾಗಿದ್ದು, ಕಾರಣಾಂತರಗಳಿಂದ ಅವರಿಬ್ಬರೂ ದೂರವಾಗಿದ್ದರು. ಈ ವಿಚಾರದ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡಿದ್ದ ದಿವ್ಯಾ ಆರೋಗ್ಯ ಹಾಳು ಮಾಡಿಕೊಂಡಿದ್ದಳು. ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಳು ಎಂದು ತಾಯಿ  ಹೇಳಿದ್ದಾರೆ. 

ಸ್ನೇಹನಾ ಪ್ರೀತಿನಾ ಚಿತ್ರದ ನಿರ್ದೇಶಕ ಶಾಹುರಾಜ್‌ ಶಿಂಧೆ ಇನ್ನಿಲ್ಲ 

'ಜೀತ್‌ ಗಯಿ ತೋ ಪಿಯಾ ಮೋರೆ' ಹಾಗೂ 'ವಿಶ್' ದಿವ್ಯಾಗೆ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿಗಳು. 'ಯೇ ರಿಷ್ತಾ ಕ್ಯಾ ಕೆಹತಾ ಹೈ' ಹಾಗೂ 'ಉಡಾನ್' ಧಾರಾವಾಹಿಗಳಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಜನರ ಮನಸೂರೆಗೊಂಡಿದ್ದರು.

ದಿವ್ಯಾ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಕಿರುತೆರೆಯ ಸಹ ಕಲಾವಿದರು ಕಂಬನಿ ಮಿಡಿದಿದ್ದಾರೆ. ದಿವ್ಯಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೂ ಪ್ರಾರ್ಥಿಸೋಣ.