18 ವರ್ಷ ಹಿರಿಯ ನಟನೊಂದಿಗೆ ಅವಿಕಾ ಗೋರ್ ಸಂಬಂಧ. ಮಗುವಿನ ವಿಚಾರದಲ್ಲಿ ಹರಿದಾಡುತ್ತಿರುವ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಟ್ಟ ನಟಿ.
ಸಾಮಾನ್ಯವಾಗಿ ಕಲಾವಿದರ ಜೀವನದ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿರುತ್ತದೆ. ಯಾರ ಜೊತೆ ಓಡಾಡುತ್ತಿದ್ದಾರೆ, ಯಾರನ್ನು ಮದುವೆ ಆಗಲಿದ್ದಾರೆ, ಯಾವ ಕಾರು ಖರೀದಿಸಿದ್ದಾರೆ. .ಹೀಗೆ ಎಲ್ಲ ವಿಚಾರಕ್ಕೂ ತೆಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಸೋಷಿಯಲ್ ಮೀಡಿಯಾ ಬಂದ ಮೇಲೆ ರಿಯಲ್ ನ್ಯೂಸ್‌ಗಿಂತ ಫೇಕ್ ನ್ಯೂಸ್ ಹೆಚ್ಚಾಗಿವೆ. ಸಂಬಂಧ ಇಲ್ಲದಿದ್ದರೂ, ಸಂಬಂಧ ಸೃಷ್ಟಿಸುತ್ತಾರೆ. ಈಗ ನಟಿ ಅವಿಕಾ ಗೋರ್ ಮತ್ತು ಮನೀಶ್ ಅವರದ್ದು ಇದೇ ಕತೆ ಆಗಿದೆ.
'ಸಸುರಾಲ್ ಸಿಮರ್ ಕಾ' ಹಿಂದಿ ಧಾರಾವಾಹಿಯಲ್ಲಿ ಜೋಡಿಯಾಗಿ ಅವಿಕಾ ಮತ್ತು ಮನೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿಯಲ್ಲಿ ಹೇಗೆ ಅವರಿಗೆ ಮಗು ಹುಟ್ಟಿದೆ ಹಾಗೆ, ರಿಯಲ್ ಲೈಫ್‌ನಲ್ಲೂ ಇವರಿಬ್ಬರಿಗೂ ಮದುವೆ ಆಗದೆ. ಮಗು ಮಾಡಿಕೊಂಡಿದ್ದಾರೆ, ಎಂದು ಕೆಲವು ಕಡೆ ಸುದ್ದಿ ಹರಿದಾಡುತ್ತಿದೆ. ಸುಳ್ಳು ವಿಚಾರಗಳಿಗೆ ಬ್ರೇಕ್ ಹಾಕಲು ಅವಿಕಾ ಸ್ಪಷ್ಟನೆ ನೀಡಿದ್ದಾರೆ.
ಅಬ್ಬಬ್ಬಾ! 13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆ ನಟಿ ಈಗ ಹೇಗಾಗಿದ್ದಾರೆ ನೋಡಿ!
'ಸಾಧ್ಯವೇ ಇಲ್ಲ. ನಮಗೆ ಮಗು ಆಗಿದೆ ಅಂತೆಲ್ಲ ಆರ್ಟಿಕಲ್ ಓದಿದೆ. ನನ್ನ ಜೀವನದಲ್ಲಿ ಅವರಿಗೆ ಜಾಗವಿದೆ. ಆದರೆ ಈ ರೀತಿ? ನಾನು ಮನೀಶ್ ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿರುವೆ. ಅವರು ನನಗಿಂತ 18 ವರ್ಷ ದೊಡ್ಡವರು. ಅನೇಕರು ಈ ಸುದ್ದಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾನು ಇಲ್ಲ, ಅವರು ನನ್ನ ತಂದೆ ವಯಸ್ಸಿನಯವರು ಅಂತ ಹೇಳಿರುವೆ. ಇದರಿಂದ ಎರಡು ವಾರಗಳ ಕಾಲ ನಾನು ಮನೀಶ್ ಮಾತನಾಡಿರಲಿಲ್ಲ. ಆದರೂ ಈ ರೀತಿಯ ಸುದ್ದಿಯೊಂದು ಹರಿದಾಡುತ್ತಿರುವುದು ನೋಡಿ ಮಾತು ನಿಲ್ಲಿಸಿದರೂ ಏನೂ ಉಪಯೋಗವಿಲ್ಲ ಎಂದುಕೊಂಡೆವು. ಈ ಆರ್ಟಿಕಲ್‌ಗಳು ನೋಡಿ ನಾವು ನಗುತ್ತೇವೆ,' ಎಂದು ಅವಿಕಾ ಹೇಳಿದ್ದಾರೆ.
