ನಟಿ ಅಂಜಲಿ ಆನಂದ್ ಬಾಲ್ಯದಲ್ಲಿ ಡ್ಯಾನ್ಸ್ ಟೀಚರ್‌ನಿಂದ ಆದ ಕಿರುಕುಳದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಂದೆ ತೀರಿಕೊಂಡ ನಂತರ, ಆ ಶಿಕ್ಷಕ ತಂದೆಯಂತೆ ವರ್ತಿಸಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದ ಹೊರಬರಲು ಸಾಧ್ಯವಾಗದೆ ನರಳುತ್ತಿದ್ದಾಗ, ಮೊದಲ ಬಾಯ್‌ಫ್ರೆಂಡ್ ಸಹಾಯ ಮಾಡಿದನೆಂದು ತಿಳಿಸಿದ್ದಾರೆ. ಅಂಜಲಿ 'ಡಬ್ಬಾ ಕಾರ್ಟೆಲ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗಳಲ್ಲಿ ನಟಿಸಿದ್ದಾರೆ.
'ಅಪ್ಪ ಎಂದರೆ ನಂಬಿಕೆ, ಅಪ್ಪ ಎಂದರೆ ಆಕಾಶ' ಎಂದು ಹೇಳುತ್ತೇವೆ, ಅದೇ ಅಪ್ಪನ ಹೆಸರಿನಲ್ಲಿ ಮೋಸ ಮಾಡಿದರೆ? ಹೌದು, ಬಾಲಿವುಡ್ ನಟಿಯೋರ್ವರಿಗೆ ಇದೇ ರೀತಿ ಸಮಸ್ಯೆ ಎದುರಾಗಿತ್ತು. ‘ಡಬ್ಬಾ ಕಾರ್ಟೆಲ್’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಖ್ಯಾತಿಯ ನಟಿ ಅಂಜಲಿ ಆನಂದ್ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ನಡೆದ ಭಯಂಕರ ಘಟನೆಯೊಂದನ್ನು ನೆನೆದಿದ್ದಾರೆ.
ಡ್ಯಾನ್ಸ್ ಟೀಚರ್‌ನಿಂದ ಬಚಾವ್ ಆದೆ!
ನಟಿ ಅಂಜಲಿ ಆನಂದ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಬಾಲ್ಯದಲ್ಲಿ ನಡೆದ ಮರೆಯಲಾಗದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅಂಜಲಿಗೆ ಕೇವಲ ಎಂಟು ವರ್ಷ ಇದ್ದಾಗ ಡ್ಯಾನ್ಸ್ ಟೀಚರ್ ಹೇಗೆ ತಮ್ಮ ಲೈಫ್ ನರಕ ಮಾಡಿದರು ಎಂದು ಹೇಳಿದ್ದಾರೆ. ಇದರಿಂದ ಹೇಗೆ ಬಚಾವ್ ಆದೆ, ಮೊದಲ ಬಾಯ್‌ಫ್ರೆಂಡ್ ಹೇಗೆ ಕಾಪಾಡಿದ ಎಂದು ಕೂಡ ಹೇಳಿದ್ದಾರೆ.
ಬಾಲಿವುಡ್ ಹಾಡಿಗೆ ವೇದಿಕೆ ಹತ್ತಿ ವಿದ್ಯಾರ್ಥಿ ಜೊತೆ ಹೆಜ್ಜೆ ಹಾಕಿದ ಪ್ರೊಫೆಸರ್, ವಿಡಿಯೋ!
ಟೀಚರ್ ನಂಬಿದ್ದೆ!
"ನನಗೆ ಆಗ ಎಂಟು ವರ್ಷ, ಆಗ ತಾನೇ ಅಪ್ಪನನ್ನು ಕಳೆದುಕೊಂಡಿದ್ದೆ. ಆ ಡ್ಯಾನ್ಸ್ ಟೀಚರ್ ನನ್ನನ್ನು ಅವನ ಕುಟುಂಬವನ್ನಾಗಿ ಮಾಡಲು ಪ್ರಯತ್ನಿಸಿದ್ದ. ಏಕಾಂತಕ್ಕೆ ಕರೆದೊಯ್ದು ಎಲ್ಲವನ್ನು ಮಾಡಲು ಪ್ರಯತ್ನಿಸಿದ್ದನು. ಆಗ ನನಗೆ ಏನು ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ. ನನ್ನ ತಂದೆ ತೀರಿಕೊಂಡ ತಕ್ಷಣ ಆ ಡ್ಯಾನ್ಸ್ ಟೀಚರ್ ನನಗೆ, 'ನಾನು ನಿನ್ನ ತಂದೆ' ಎಂದು ಹೇಳಿದ್ದರು. ಇದೇ ಬೆಸ್ಟ್ ಎಂದು ಅಂದುಕೊಂಡು ನಾನು ಅವರನ್ನು ನಂಬಿದ್ದೆ. ನನ್ನ ತುಟಿಗೆ ಮುತ್ತು ಕೊಟ್ಟು, ಅಪ್ಪಂದಿರು ಹೀಗೆ ಮಾಡುತ್ತಾರೆ ಎಂದು ಹೇಳಿದ್ದನು. ಆಗ ಇದೆಲ್ಲ ಅರ್ಥ ಆಗುತ್ತಿರಲಿಲ್ಲ” ಎಂದು ಅಂಜಲಿ ಹೇಳಿದ್ದಾರೆ.
ಆ ಹುಡುಗನಿಗೆ ಕ್ರಶ್ ಇತ್ತು!
“ಅನೇಕ ವರ್ಷಗಳ ಕಾಲ ಇದೇ ನಡೆದಿತ್ತು. ನನ್ನ ಜೀವನವನ್ನು ಅವರು ಡೈರೆಕ್ಟ್ ಮಾಡಿದ್ದರು. ನಾನು ಬೇರೆಯವರಿಗೆ ಚೆನ್ನಾಗಿ ಕಾಣಬಾರದು ಅಂತ ಯಾವಾಗಲೂ ಟೀ ಶರ್ಟ್ ಹಾಕಿಸುತ್ತಿದ್ದ. ಬೇರೆ ಹುಡುಗಿಯರ ಥರ ಆಕರ್ಷಕವಾಗಿ ಕಾಣಲು ಬಿಡುತ್ತಿರಲಿಲ್ಲ. ಕೂದಲು ಫ್ರೀ ಆಗಿ ಬಿಡಲು ಕೂಡ ಬಿಟ್ಟಿರಲಿಲ್ಲ. ನನ್ನ ತಂಗಿ ಮದುವೆಯಾದಾಗ ಅಲ್ಲಿಗೆ ನನ್ನ ತಂದೆಯ ಆತ್ಮೀಯ ಸ್ನೇಹಿತನ ಮಗ ಬಂದಿದ್ದನು. ಅವನಿಗೆ ನನ್ನ ಮೇಲೆ ಕ್ರಶ್ ಇತ್ತು. ಆಗ ಅವನು ನನ್ನೊಂದಿಗೆ ಮಾತನಾಡಲು ಶುರು ಮಾಡಿದನು. ಆಗ ನಾನು, 'ಇದು ಸಾಮಾನ್ಯ ಅಂತ ಅಂದುಕೊಂಡೆ. ಆದರೆ ನಾನು ಒಂಥರ ಸಿಕ್ಕಿಹಾಕಿಕೊಂಡ ಹಾಗೆ ಅನಿಸಿತು. ನಾನು ಯಾರಿಗೆ ಯಾವ ಸಂದೇಶಗಳನ್ನು ಕಳಿಸ್ತೀನಿ ಎನ್ನೋದನ್ನು ಅವನು ಗಮನದಲ್ಲಿ ಇಟ್ಟುಕೊಳ್ಳುತ್ತಿದ್ದನು. ನಾನು ಟೀಚರ್ ಜೊತೆ ಮಾತನಾಡುತ್ತಿದ್ದೇನೆ ಅಂತ ಅವನಿಗೆ ಗೊತ್ತಾಯ್ತು. ಆ ಹುಡುಗ ನಿತ್ಯವೂ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬರುತ್ತಿದ್ದನು. ನನ್ನ ಶಾಲೆಯ ಹೊರಗೆ ಅವನು ಕಾಯುತ್ತಿದ್ದನು. ಎಲ್ಲರಿಗೂ ಈ ಹುಡುಗ ಯಾಕೆ ಹೊರಗಡೆ ಇರುತ್ತಾನೆ ಎಂಬ ಪ್ರಶ್ನೆ ಬಂದಿತ್ತೇ ವಿನಃ ಯಾರೂ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ” ಎಂದು ಅಂಜಲಿ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದಾರೆ.
8 ರಿಂದ 14ರವರೆಗೆ ಇದೇ ಸಮಸ್ಯೆ ಮುಂದುವರೆದಿತ್ತು. ಡ್ಯಾನ್ಸ್ ಟೀಚರ್ ಸಮಸ್ಯೆಯಿಂದ ನಾನು ಹೊರಗಡೆ ಬರಲು ನನ್ನ ಮೊದಲ ಬಾಯ್‌ಫ್ರೆಂಡ್ ಸಹಾಯ ಮಾಡಿದ್ದ ಎಂದು ಅವರು ಹೇಳಿದ್ದಾಳೆ.
ಲಕ್ಷಾಂತರ ಮೌಲ್ಯದ ಸೀರೆ, ಒಡವೆ ಹಾಕುವ ನೀತಾ ಮದ್ವೇಗೂ ಮುನ್ನವೂ ಹೀಗೆ ಇದ್ರಾ?
ಮುಂದಿನ ಸಿನಿಮಾಗಳು?
ನಟಿ ಅಂಜಲಿ ಆನಂದ್ ಅವರು ಕೊನೆಯದಾಗಿ ʼಡಬ್ಬಾ ಕಾರ್ಟೆಲ್ʼ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿರೀಸ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿರೀಸ್‌ನಲ್ಲಿ ಶಬಾನಾ ಅಜ್ಮಿ, ಶಾಲಿನಿ ಪಾಂಡೆ, ಜ್ಯೋತಿಕಾ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಫರಾಜ್ ಆರಿಫ್ ಅನ್ಸಾರಿ ಅವರ ʼಬನ್ ಟಿಕ್ಕಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅಭಯ್ ಡಿಯೋಲ್, ಶಬಾನಾ ಅಜ್ಮಿ, ಜೀನತ್ ಅಮನ್, ನುಶ್ರತ್ ಭರುಚ್ಚಾ ಕೂಡ ನಟಿಸಿದ್ದಾರೆ.
