ಬಾಲಿವುಡ್ ನಟಿ ಅಮೃತಾ ರಾವ್ ತಾಯಿಯ ತಂದೆ ಕಾರವಾರದವರಾಗಿದ್ದು, ಕರ್ನಾಟಕದೊಂದಿಗೆ ನಂಟು ಹೊಂದಿದ್ದಾರೆ. ಕಾರವಾರ, ಕುಮಟಾ, ಮೈಸೂರಿನ ಬಗ್ಗೆ ಚಿರಪರಿಚಿತರಾಗಿರುವ ಅವರು, ಕನ್ನಡದಲ್ಲಿಯೂ ಮಾತನಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಆಸೆ ಇತ್ತಾದರೂ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಲ್ಲಿ ಅದೆಷ್ಟೋ ನಟ ನಟಿಯರು ಕರ್ನಾಟದಿಂದಲೇ ಹೋಗಿ ಅಲ್ಲಿ ನೆಲೆ ಕಂಡು ಜನಪ್ರಿಯತೆ ಗಳಿಸಿದವರು ಇದ್ದಾರೆ. ಕೆಲವರು ತಮ್ಮ ಕರಿಯರ್ ಗಾಗಿ ಕರ್ನಾಟಕ ಬಿಟ್ಟು ಮುಂಬೈ ಸೇರಿದ್ದರೆ, ಇನ್ನೂ ಕೆಲವರ ಮೂಲ ಕುಟುಂಬದ ಸದಸ್ಯರು ಅದ್ಯಾವಗಲೋ ಮುಂಬೈಗೆ ಹೋಗಿ ಅಲ್ಲಿಯೇ ನೆಲೆ ನಿಂತು ನೆಲೆ ಕಂಡವರೂ ಇದ್ದಾರೆ. ಐಶ್ವರ್ಯ ರೈ (Aishwarya Rai), ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ, ಪೂಜಾ ಹೆಗ್ಡೆ, ಸುನೀಲ್ ಶೆಟ್ಟಿ, ಫ್ರೀಡಾ ಪಿಂಟೋ, ದೀಪಿಕಾ ಪಡುಕೋಣೆ, ಜೆನಿಲಿಯಾ ಡಿಸೋಜಾ ಇವರೆಲ್ಲಾ ಕರ್ನಾಟಕದವರೇ, ಆದರೇ ಜನಪ್ರಿಯತೆ ಗಳಿಸಿದ್ದು ಮಾತ್ರ ಬಾಲಿವುಡ್ ನಲ್ಲಿ. ಇದೀಗ ಮತ್ತೊಬ್ಬ ನಟಿ ತಾನು ಕೂಡ ಕನ್ನಡತಿ ಎಂದಿದ್ದಾರೆ. ಅದು ಯಾರು ಗೊತ್ತಾ? 

ತಮ್ಮ ಪ್ರೆಗ್ನೆನ್ಸಿಯನ್ನು ಸೀಕ್ರೆಟ್ ಆಗಿಟ್ಟು, ಡೆಲಿವರಿ ಬಳಿಕವೇ ಸುದ್ದಿಯಾದ ಸೆಲೆಬ್ರೆಟಿಗಳಿವರು...

ಬಾಲಿವುಡ್ ನಲ್ಲಿ ಒಂದಷ್ಟು ಹಿಟ್ ಫಿಲಂ ಗಳನ್ನು ನೀಡಿ, ನಂತರ ನಟನೆಯಿಂದಲೇ ದೂರ ಉಳಿದ ನಟಿ ಇವರು. ಅವರು ಬೇರಾರು ಅಲ್ಲ ನಟಿ ಅಮೃತಾ ರಾವ್. ವಿವಾಹ್ ನಂತಹ ರೊಮ್ಯಾಂಟಿಕ್ ಪ್ರೇಮಕಥೆಯ ಮೂಲಕ ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅಮೃತಾ ರಾವ್ (Amrita Rao), ಅಷ್ಟೇ ಅಲ್ಲ ಮೇ ಹೂಂ ನಾ ಸಿನಿಮಾದಲ್ಲಿ ತಮ್ಮ ಬಿಂದಾಸ್ ಅಭಿನಯದ ಮೂಲಕ ಮೋಡಿ ಮಾಡಿದ್ದ ನಟಿ ಅಮೃತಾ ರಾವ್ ತಾನು ಕೂಡ ಕನ್ನಡತಿ ಅನ್ನೊದನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಡೆದಂತ ಈ ಇಂಟರ್ವ್ಯೂ ತುಣುಕು ಸದ್ಯ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಟಿ ಅಮೃತಾ ರಾವ್ ಇಂಟರ್ವ್ಯೂನಲ್ಲಿ ಹೇಳಿದ್ದೇನು ನೋಡೋಣ. 

Amrita Rao ಅವರಿಗೆ ಕಪಾಳಮೋಕ್ಷ ಮಾಡಿದ್ದು ಪಶ್ಚಾತ್ತಾಪವಿಲ್ಲ ಎಂದ Esha Deol

ಹೆಲೋ ಹಿಂದೂ ಎನ್ನುವ ಯೂಟ್ಯೂಬ್ ಚಾನೆಲ್ (youtube channel) ನಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೃತಾ ರಾವ್, ಪ್ರೀತಿಯ ಕನ್ನಡಿಗರಿಗೆ ನಾನು ಅಮೃತಾ ರಾವ್ ಮಾಡುವ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ. ಬಳಿಕ ಕನ್ನಡ ನಾಡಿಗೂ ತಮಗೂ ಇರುವಂತಹ ನಂಟಿನ ಬಗ್ಗೆ ತಿಳಿಸಿದ್ದಾರೆ. ಅಮೃತಾ ರಾವ್ ಅವರ ಅಮ್ಮನ ಅಪ್ಪ ಕಾರವಾರದವರಂತೆ (Karwar), ಹಾಗಾಗಿ ಕಾರವಾರ, ಕುಮಟಾ, ಮೈಸೂರು ಎಲ್ಲಾ ಜಾಗಗಳ ಬಗ್ಗೆ ಅಮೃತ ರಾವ್ ಗೆ ಚೆನ್ನಾಗಿಯೇ ತಿಳಿದಿದೆ. ಕಾರವಾರ ಇವರ ಫೇವರಿಟ್ ಟ್ರಾವೆಲ್ ತಾಣ ಕೂಡ ಹೌದಂತೆ, ಇಲ್ಲಿನ ಬೀಚ್ ಗಳು ಪ್ರಕೃತಿ ಸೌಂದರ್ಯ ಎಲ್ಲವೂ ಇವರಿಗೆ ಇಷ್ಟ. ಹೆಚ್ಚಾಗಿ ವೇಕೇಶನ್ ಗೆ ತಮ್ಮ ಫ್ಯಾಮಿಲಿ ಜೊತೆ ಇಲ್ಲಿ ಬರ್ತಾರಂತೆ ನಟಿ. ಇವರು ಮಾತೃ ಭಾಷೆ ಕೊಂಕಣಿ. ಕರ್ನಾಟಕ ಅಂದ್ರೆ ನಮ್ಮ ಮನೆ ಇದ್ದ ಹಾಗೆ ಎಂದು ಹೇಳಿರುವ ಅಮೃತಾ, ದಕ್ಷಿಣ ಭಾರತದ ಆಹಾರಗಳೆಂದ್ರೆ ನನಗೆ ಇಷ್ಟ ದೋಸೆ, ಬಿಸಿಬೇಳೆಬಾತ್, ಮೈಸೂರು ಪಾಕ್ (mysore pak) ಅಂದ್ರೆ ತಮಗೆ ತುಂಬಾನೆ ಇಷ್ಟ ಎಂದು ಸಹ ಹೇಳಿದ್ದಾರೆ. ಬೆಂಗಳೂರಲ್ಲಿ ಬಾಲ್ಯವನ್ನು ಕಳೆದ ಬಗ್ಗೆ ತಿಳಿಸಿರುವ ಅಮೃತಾ ರಾವ ತಾವು ಕಬ್ಬನ್ ಪಾರ್ಕ್ ಗೆ ಹೋಗಿರೋದಾಗಿಯೂ ಹೇಳಿದ್ದಾರೆ. 

ಕೊನೆಗೂ ರಹಸ್ಯ ಮದುವೆಯನ್ನು ಬಹಿರಂಗಗೊಳಿಸಿದ ಅಮೃತಾ ರಾವ್‌!

ಇನ್ನು ಪುನೀತ್ ರಾಜ್ ಕುಮಾರ್ (Puneeth Rajkumar) ಮೇಲಿನ ಪ್ರೀತಿ, ಅಭಿಮಾನದ ಬಗ್ಗೆ ಮಾತನಾಡಿದ ಅಮೃತಾ ರಾವ್, ನನಗೆ ಕನ್ನಡ ಇಂಡಷ್ಟ್ರಿ ಅಂದ್ರೇನೆ ಪುನೀತ್ ಸರ್, ನಾನು ಯಾವಾಗಲೂ ಕನ್ನಡದಲ್ಲಿ ಡೆಬ್ಯೂ ಮಾಡೋದಾದ್ರೆ ಅದು ಪುನೀತ್ ಸರ್ ಜೊತೆ ಅಂತಾನೆ ಅಂದುಕೊಂಡಿದ್ರಂತೆ. ಅಪ್ಪು ಜೊತೆ ನಟಿಸುವ ಅವಕಾಶ ಸಿಕ್ಕಾಗ ಅಮೃತಾ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ರಂತೆ, ಅವರಿಗೆ ನಟಿಸೋ ಮನಸು ಇದ್ದಾಗ, ಯಾರ ಜೊತೆ ಕನೆಕ್ಟ್ ಆಗೋದು ಅಂತಾನೇ ಗೊತ್ತಾಗದೆ, ಕೊನೆಗೆ ಅಪ್ಪು ಜೊತೆ ಸಿನಿಮಾ ಮಾಡೋದಕ್ಕೆ ಸಾಧ್ಯ ಆಗಲಿಲ್ಲ ಎಂದಿದ್ದಾರೆ ಅಮೃತಾ ರಾವ್. ಆದರೆ ಅವರ ಜೊತೆ ನಟಿಸಬೇಕು ಅಂತ ಅಂದುಕೊಂಡಿದ್ದೆ ಅಲ್ವಾ? ಅದೇ ಬೆಸ್ಟ್ ಕನಸು ಅಂದಿದ್ದಾರೆ ವಿವಾಹ್ ಬೆಡಗಿ.

View post on Instagram