ತಮಿಳು ಚಿತ್ರ 'ಅದಾಯಿ' ಯಲ್ಲಿ ಸಂಪೂರ್ಣ ಬೆತ್ತಲಾಗಿ ಶಾಕ್ ನೀಡಿದ್ದ ಅಮಲಾ ಪೌಲ್ ನಿಜಜೀವನದಲ್ಲೂ ಬೆತ್ತಲಾಗಿ ಶಾಕ್ ನೀಡಿದ್ದಾರೆ. 

ಸದ್ಯ ಚಿತ್ರದಿಂದ ಬ್ರೇಕ್ ತೆಗೆದುಕೊಂಡಿದ್ದು ಇಂಡೋನೇಷ್ಯಾದ ಬಾಲಿಯಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 


ತಮಿಳಿನ 'ಆಡೈ' ಚಿತ್ರದಲ್ಲಿ ಅಮಲಾ ಪೌಲ್ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು ಎಲ್ಲಡೆ ಚರ್ಚೆಗೆ ಒಳಪಟ್ಟಿತ್ತು. ಟಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಮಂದಿ ಅಮಲಾ ಪೌಲ್ ಧೈರ್ಯವನ್ನು ಮೆಚ್ಚಿಕೊಂಡಿದ್ದರು. 

ನಿರ್ದೇಶಕ ವಿಜಯ್ ಹಾಗೂ ಅಮಲಾ ಪೌಲ್ 2014 ರಲ್ಲಿ ಪ್ರೀತಿಸಿ ಮದುವೆಯಾದರು. ಮೂರು ವರ್ಷ ಸಂಸಾರ ಮಾಡಿ 2017 ರಲ್ಲಿ ಡಿವೋರ್ಸ್ ಪಡೆದುಕೊಂಡರು. ನಂತರ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಬೇರೋಬ್ಬರ ಜೊತೆ ಲವ್ವಲ್ಲಿ ಬಿದ್ದಿರುವುದಾಗಿ ಹೇಳಿದ್ದಾರೆ.