ನಟ ವಿಶಾಲ್, ಕೀರ್ತಿ ಸುರೇಶ್ ಅವರನ್ನು ಮದುವೆಯಾಗಲು ಬಯಸಿದ್ದರು. 2018ರಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದಾಗ ವಿಶಾಲ್‌ಗೆ ಕೀರ್ತಿ ಮೇಲೆ ಪ್ರೀತಿಯಾಯಿತು. ವಿಶಾಲ್ ತಂದೆ, ನಿರ್ದೇಶಕ ಲಿಂಗುಸ್ವಾಮಿ ಮೂಲಕ ಕೀರ್ತಿಗೆ ಪ್ರಸ್ತಾಪವನ್ನಿಟ್ಟರು. ಆದರೆ ಕೀರ್ತಿ, ತನಗೆ ಬೇರೆಯವರ ಜೊತೆ ಸಂಬಂಧವಿರುವುದಾಗಿ ಹೇಳಿ ಮದುವೆಯನ್ನು ನಿರಾಕರಿಸಿದರು ಎಂದು ಲಿಂಗುಸ್ವಾಮಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಮಿಳು ಚಿತ್ರರಂಗದ ಸ್ಟಾರ್ ನಟ ವಿಶಾಲ್ ಮದುವೆ, ಬ್ರೇಕಪ್, ಸಿನಿಮಾ ಹಾಗೂ ಗಾಸಿಪ್ ಅಂತ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಕೆಲವು ದಿನಗಳಿಂದ ಕೀರ್ತಿ ಮತ್ತು ವಿಶಾಲ್ ನಡುವೆ ಕುಚುಕುಚು ನಡೆಯುತ್ತಿತ್ತು, ಕೀರ್ತಿ ವಿಶಾಲ್‌ನ ರಿಜೆಕ್ಟ್‌ ಮಾಡಿದ್ದಾರೆ, ಕೀರ್ತಿಗೆ ಬಾಯ್‌ಫ್ರೆಂಡ್‌ ಇದ್ದಾನೆ ಅಂತ ಗೊತ್ತಿದ್ದರು ವಿಶಾಲ್‌ ತಂದೆ ಪ್ರಪೋಸಲ್ ಮುಂದಿಟ್ಟರು, ವಿಶಾಲ್ ವೈವಾಹಿಕ ಜೀವನ ಯಾಕೆ ಶುರುವಾಗಿಲ್ಲ ಯಾಕೆ....ಹೀಗೆ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿದೆ. ಈ ಪ್ರಶ್ನೆಗಳಿಗೆ ನಿರ್ದೇಶಕರಾದ ಎಸ್‌. ಲಿಂಗುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಹೌದು! 2018ರಲ್ಲಿ ವಿಶಾಲ್ ಮತ್ತು ಕೀರ್ತಿ ಸುರೇಶ್ ಜೋಡಿಯಾಗಿ ಸಂಡಕೊಳ್ಳಿ 2 ಸಿನಿಮಾದಲ್ಲಿ ಅಭಿನಯಿಸಿದ್ದರು. ಸಿನಿಮಾ ಸೂಪರ್ ಹಿಟ್ ಪ್ರದರ್ಶನ ಕಂಡಿತ್ತು ಹಾಗೂ ಈ ಜೋಡಿಗೆ ಸಿಕ್ಕಾಪಟ್ಟೆ ಪ್ರೀತಿ ಕೊಟ್ಟರು. ಹೀಗಾಗಿ ವಿಶಾಲ್‌ಗೆ ಕೀರ್ತಿ ಸುರೇಶ್ ಮೇಲೆ ಸ್ವಲ್ಪ ಲವ್ ಆಯ್ತು. ಈ ಹಿಂದೆ ವಿಶಾಲ್‌ಗೆ ಮದುವೆ ಸೆಟ್‌ ಆಗಿ ನಿಶ್ಚಿತಾರ್ಥದ ಕೂಡ ಆಗಿತ್ತು. ಆದರೆ ಸಣ್ಣ ಪುಟ್ಟ ಮನಸ್ಥಾಪ ಹಾಗೂ ಹಣ ಕಾಸಿನ ಚರ್ಚೆಯಿಂದ ಮುರಿದು ಬಿತ್ತು. ಅಲ್ಲಿಂದ ವಿಶಾಲ್ ಮದುವೆಗೆಂದು ಹುಡುಗಿಯನ್ನು ಹುಡುಕುತಲ್ಲೇ ಇದ್ದರು. ಸರಿಯಾದ ಸಮಯಕ್ಕೆ ಸಿನಿಮಾ ಆಯ್ತು ಕೀರ್ತಿ ಮೇಲೆ ಲವ್ ಕೂಡ ಆಯ್ತು. ಹೀಗಾಗಿ ಕೀರ್ತಿ ಮುಂದೆ ಮದುವೆ ಚರ್ಚೆ ಮಾಡದೆ ಅವರ ತಂದೆ ಜಿಕೆ ರೆಡ್ಡಿ ಮೂಲಕ ಪ್ರಪೋಸಲ್‌ ಮುಂದಿಟ್ಟರಂತೆ.

ಯಾಕೆ ಶುಭಾ ಪೂಂಜಾ ಇಷ್ಟೊಂದು ಸಣ್ಣ ಆಗಿದ್ಯಾ...ನೀನು ದಪ್ಪನೇ ಇರು; ಫ್ಯಾನ್‌ ಕಾಮೆಂಟ್ ವೈರಲ್

ವಿಶಾಲ್‌ಗೆ ಕೀರ್ತಿ ಸುರೇಶ್ ಮೇಲೆ ಮನಸ್ಸಾಗಿ ಹಾಗೂ ಮದುವೆಯಾಗಲು ಬಯಸಿದರು. ನೇರವಾಗಿ ವಿಶಾಲ್ ಅಥವಾ ಅವರ ತಂದೆ ಜಿಕೆ ರೆಡ್ಡಿ ಕೇಳಬಾರದು ಎಂದು ಸಂಡಕೋಳಿ ನಿರ್ದೇಶಕರಾದ ಲಿಂಗುಸ್ವಾಮಿಯನ್ನೇ ಮುಂದೆ ಬಿಟ್ಟರು. ಈ ವಿಷಯವನ್ನು ಕೀರ್ತಿ ಜೊತೆ ಚರ್ಚೆ ಮಾಡಿದಾಗ ಪ್ರಪೋಸಲ್‌ ನಿರಾಕರಿಸಿದರಂತೆ. ನಾನು ವಿಶಾಲ್‌ರನ್ನು ಮದುವೆ ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಕಳುಹಿಸಿದ್ದಾರೆ. ಕಾರಣ ಏನು ಎಂದು ಪ್ರಶ್ನೆ ಮಾಡಿದಾಗ ಅವರ ಬಾಯ್‌ಫ್ರೆಂಡ್ ವಿಚಾರ ರಿವೀಲ್ ಮಾಡಿದ್ದಾರೆ. ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದೀವಿ ನಾವಿಬ್ಬರೂ ಮದುವೆ ಆಗುತ್ತೀವಿ ಈ ವಿಚಾರ ನಮ್ಮ ಮನೆಗಳಲ್ಲಿ ಗೊತ್ತಿದೆ ಎಂದಿದ್ದಾರೆ. ಈ ವಿಚಾರವನ್ನು ಖಾಸಗಿ ಸಂದರ್ಶನದಲ್ಲಿ ಲಿಂಗುಸ್ವಾಮಿ ರಿವೀಲ್ ಮಾಡಿದ್ದಾರೆ. 

ಐಕಾನಿಕ್ ಜೀನತ್ ಅಮಾನ್‌ ಭೇಟಿ ಮಾಡಿದ ಸಾನ್ಯಾ ಅಯ್ಯರ್; ಯಾರ್ ಈ ಬ್ಯೂಟಿ ಎಂದ ನೆಟ್ಟಿಗರು