Asianet Suvarna News Asianet Suvarna News

12 ಗಂಟೆ EDಯಿಂದ ಡ್ರಿಲ್; ಪಾಪ್ಯುಲಾರಿಟಿ ಸೈಡ್‌ ಎಫೆಕ್ಟ್ಸ್‌ ಎಂದ ವಿಜಯ್ ದೇವರಕೊಂಡ

ಲೈಗರ್ ಚಿತ್ರಕ್ಕೆ ಬಂಡವಾಳ ಹಾಕಿ ಸಮಸ್ಯೆಯಲ್ಲಿ ಸಿಲುಕಿಕೊಂಡ ದೇವರಕೊಂಡಗೆ ಇಡಿಯಿಂದ 12 ಗಂಟೆಗಳ ಕಾಲ ಡ್ರಿಲ್....

Actor Vijay Deverakonda questioned by ED over funding for liger film vcs
Author
First Published Dec 1, 2022, 2:20 PM IST

ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಜಯ್ ದೇವರಕೊಂಡ ಬಹುಬೇಡಿಕೆಯ ನಟ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನ ಮಾಡಿರುವ ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಭಿನಯಿಸಿದ್ದಾರೆ. ನಿರ್ಮಾಪಕ ಚಾರ್ಮಿ ಕೌರ್ ಬಳಸಿರುವ ಹಣ ವಿದೇಶಿ ಮೂಲದಿಂದ ಬಂದಿದೆ ಎಂಬ ವರದಿಗಳ ನಂತರ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯನ್ನು ಉಲ್ಲಂಘನೆ ಮಾಡಲಾಗಿದೆ. ನಾಯಕನನ್ನು ವಿಚಾರಣೆ ಮಾಡಿದ್ದರೆ ಹಣಕಾಸುದಾರರು ಯಾರೆಂದು ತಿಳಿದು ಬರುತ್ತದೆ ಎಂದು ಇಡಿ ವಿಜಯ್‌ನ ವಿಚಾರಣೆ ಮಾಡಿದೆ.....

ಬುಧವಾರ ಇಡಿ ವಿಚಾರ ನಡೆದ ನಂತರ ಮಾತನಾಡಿದ ವಿಜಯ್ 'ದೊಡ್ಡ ಪಾಪ್ಯೂಲಾರಿಟಿ ಬರುತ್ತಿದ್ದಂತೆ ಜವಾಬ್ದಾರಿಗಳು ಇರುತ್ತದೆ ಹೀಗಾಗಿ ಇದರ ಬಗ್ಗೆ ಏನೂ ಮಾತನಾಡುವತಿಲ್ಲ. ಆದರೆ ಇದೆಲ್ಲಾ ನನಗೊಂದು ಮರೆಯಲಾಗದ ಅನುಭವ. ನನ್ನನ್ನು ಕರೆದರು ನನ್ನ ಕರ್ತವ್ಯ ಮುಗಿದಿದೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವೆ' ಎಂದಿದ್ದಾರೆ. 

Actor Vijay Deverakonda questioned by ED over funding for liger film vcs

ಸುಮಾರು 12 ಗಂಟೆಗಳ ಕಾಲ ವಿಜಯ್‌ರನ್ನು ಇಡಿ ಪ್ರಶ್ನೆ ಮಾಡಿತ್ತು ಎನ್ನಲಾಗಿದೆ ಆದರೆ ಮತ್ತೆ ವಿಜಯ್ ವಿಚಾರಣೆಗ ಬರಬೇಕಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಎರಡು ವಾರಗಳ ಹಿಂದೆ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಇಡಿ 12 ಗಂಟೆಗಳ ಕಾಲ ಪ್ರಶ್ನೆ ಮಾಡಿದ್ದರು. 'ಇಡಿ ಅಧಿಕಾರಿಗಳು ಕಂಪನಿ ಮತ್ತು ಹಣಕಾಸುದಾರರು ಯಾರೆಂದು ತಿಳಿದುಕೊಳ್ಳಲು ವಿಚಾರಣೆಗೆ ಕರೆದಿದ್ದರು. ವಿದೇಶದ ಯಾವುದೋ ಕಂಪನಿಯಿಂದ ಚಿತ್ರಕ್ಕೆ ಹಣ ತರಲಾಗಿದೆ ಎಂದು ನಂಬಿಕೊಂಡು ವಿಚಾರ ಮಾಡಿದ್ದರು. ಈ ಹಣವನ್ನು ಯಾವುದಾದರೂ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಲು  ಅವರು ತನಿಖೆ ಮಾಡಿದ್ದಾರೆ'ಎಂದು ಹಿಂದೂಸ್ತಾನ್ ಟೈಮ್ಸ್ ನಲ್ಲಿ ವರದಿ ಮಾಡಲಾಗಿತ್ತು. ಇನ್ನೂ ಕೆಲವರು ಹೇಳುವ ಮಾಹಿತಿ ಪ್ರಕಾರ ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಈ ಚಿತ್ರಕ್ಕೆ ಬಂಡವಾಳವಾಗಿ ಹಾಕಿದ್ದಾರೆ ಎನ್ನಲಾಗಿದೆ. 

ಯಶ್, ಪ್ರಭಾಸ್, ಹೃತಿಕ್, ರಣ್ವೀರ್ ರಿಜೆಕ್ಟ್ ಮಾಡಿದ ಪಾತ್ರದಲ್ಲಿ ವಿಜಯ್ ದೇವರಕೊಂಡ; ಯಾವ ಸಿನಿಮಾ?

ಕೆಲವು ದಿನಗಳ ಹಿಂದೆ ಇಡಿ ಅನನ್ಯಾ ಪಾಂಡೆಗೂ ನೋಟಿಸ್‌ ಕಳುಹಿಸಿ ವಿಚಾರಣೆ ಮಾಡಿದ್ದರು. 'ಅಧಿಕಾರಿಗಳು ನನ್ನನ್ನು ಪ್ರಶ್ನೆ ಮಾಡಿಲ್ಲ ಮಾಹಿತಿ ಪಡೆದುಕೊಂಡಿದ್ದಾರೆ ಅಷ್ಟೆ' ಎಂದು ಕ್ಲಾರಿಟಿ ಕೊಟ್ಟಿದ್ದರು.

ಲೈಗರ್ ಸಿನಿಮಾದಲ್ಲಿ ಅನನ್ಯಾ ಪಾಂಡೆ, ರಮ್ಯಾ ಕೃಷ್ಣ ಮತ್ತು ರೋಣಿತ್ ರಾಯ್ ಅಭಿನಯಿಸಿದ್ದಾರೆ. ಲೈಗರ್ ಹಿಂದಿ ಸಿನಿಮಾ ರಿಲೀಸ್ ಮಾಡಲು ಕರಣ್ ಜೋಹಾರ್ ಮುಂದೆ ಬಂದ ಕಾರಣ ಇದನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ಚಿತ್ರಕ್ಕೆ 3 ವರ್ಷ ಮೀಸಲಿಟ್ಟಿದ್ದು ವ್ಯರ್ಥ ಎಂದು ವಿಜಯ್‌ಗೆ ಅಭಿಮಾನಿಗಳು ಮೆಸೇಜ್ ಮಾಡುತ್ತಿದ್ದಾರೆ. 

ಮುಂದಿನ ಪ್ರಾಜೆಕ್ಟ್‌:

ಟಾಲಿವುಡ್ ಬ್ಯೂಟಿ ಸಮಂತಾ ಜೊತೆ ವಿಜಯ್ ದೇವರಕೊಂಡ ಖುಷಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೊಸ ವರ್ಷ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಡಿಸೆಂಬರ್ 2023ರಲ್ಲಿ ಬಿಡುಗಡೆ ಆಗಲಿದೆ.

ಅಂಗಾಂಗ ದಾನ ಮಾಡಲು ವಿಜಯ್ ನಿರ್ಧಾರ:

 ಇತ್ತೀಚಿಗೆ ಆಸ್ಪತ್ರೆ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡುವುದಾಗಿ ವಿಜಯ್ ಮತ್ತು ಅವರ ತಾಯಿ ಮಾತು ಕೊಟ್ಟು ಪತ್ರಕ್ಕೆ ಸಹಿ ಮಾಡಿದ್ದಾರೆ. ಪತ್ರಕ್ಕೆ ಸಹಿ ಹಾಕಿರುವ ಕಾರಣ ತಮ್ಮ ಅಂಗಾಂಗವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ವಿಜಯ್ ನಿರ್ಧಾರವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಅದರಲ್ಲೂ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. 

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಎಲ್ಲಾ ಭಾಷೆ ಸ್ಟಾರ್ ನಟ-ನಟಿಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪು ಕಣ್ಣು 8 ಜನಕ್ಕೆ ಉಪಯೋಗವಾದ ಕಾರಣ ಅದೆಷ್ಟೋ ಜನರು ನೇತ್ರದಾನಕ್ಕೆ ಮುಂದಾದರು ಅಪ್ಪು ಸಮಾದಿಗೆ ಭೇಟಿ ನೀಡಿದ ನಂತರ ವಿಜಯ್ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅಪ್ಪು ಅಭಿಮಾನಿಗಳು ಬೇಷ್ ಎಂದಿದ್ದಾರೆ. 

'ಅಂಗಾಂಗಗಳನ್ನು ದಾನ ಮಾಡಿದರೆ ಮಾತ್ರ ವೈದ್ಯರು ಅದೆಷ್ಟೋ ಆಪರೇಷನ್‌ಗಳನ್ನು ಮಾಡಿ ಜನರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು. ನಮ್ಮ ಸೌತ್ ಏಷಿಯನ್‌ ಕಂಟ್ರಿಗಳಲ್ಲಿ ಅಂಗಾಂಗ ದಾನಗಳ ಬಗ್ಗೆ ಹೆಚ್ಚಿನ ಮಹತ್ವ ಸಾರಬೇಕಿದೆ. ನನಗೂ ಅಂಗಾಂಗ ದಾನ ಮಾಡಬೇಕು ಅನ್ನೋ ಆಸೆ ಇದೆ ಹೀಗಾಗಿ ಆದಷ್ಟು ಆರೋಗ್ಯದ ಕಡೆ ಗಮನ ಹರಿಸುವೆ ನನ್ನ ಅಂಗಾಂಗಳನ್ನು ಚೆನ್ನಾಗಿ ನೋಡಿಕೊಳ್ಳುವೆ. ನನ್ನ ಅಂಗಾಂಗಗಳು ಆರೋಗ್ಯವಾಗಿದ್ದರೆ ಅದನ್ನು ಖಂಡಿತ ಬಳಸಿಕೊಳ್ಳಬೇಕು. ಹೀಗಾಗಿ ನನ್ನ ತಾಯಿ ಮತ್ತು ನಾನು ಪತ್ರಕ್ಕೆ ಸಹಿ ಹಾಕಿದ್ದೀವಿ. ಈ ಮೂಲಕ ನಾವು ಒಂದು ಜೀವ ಉಳಿಸುತ್ತೀವಿ ಹಾಗೇ ನಮ್ಮದೊಂದ ಭಾಗದ ಮೂಲಕ ಮತ್ತಷ್ಟು ದಿನ ಉಳಿದುಕೊಳ್ಳುತ್ತೀವಿ. ದಯವಿಟ್ಟು ಎಲ್ಲರು ಅಂಗಾಂಗ ದಾನ ಮಾಡಿ' ಎಂದು ವಿಜಯ್ ಮಾತನಾಡಿದ್ದಾರೆ.

Follow Us:
Download App:
  • android
  • ios