Asianet Suvarna News Asianet Suvarna News

ಮುಂಬೈ ರಸ್ತೆಯಲ್ಲಿ ರಾತ್ರಿ ತೂರಾಡಿಕೊಂಡು ನಡೆದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸನ್ನಿ!

ಡಿಸೆಂಬರ್ 5 ರ ಮಂಗಳವಾರ ರಾತ್ರಿ ಮುಂಬೈನ ಜುಹು ರಸ್ತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸನ್ನಿ ಡಿಯೋಲ್ ರಸ್ತೆಯಲ್ಲಿ ತೂರಾಡುತ್ತಾ ತಿರುಗಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

actor Sunny Deol clarifies he wasn't roaming drunk on Mumbai streets after video goes viral gow
Author
First Published Dec 6, 2023, 3:36 PM IST

ಡಿಸೆಂಬರ್ 5 ರ ಮಂಗಳವಾರ ರಾತ್ರಿ ಮುಂಬೈನ ಜುಹು ರಸ್ತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸನ್ನಿ ಡಿಯೋಲ್ ರಸ್ತೆಯಲ್ಲಿ ತಿರುಗಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಸನ್ನಿ ಡಿಯೋಲ್ ರಸ್ತೆ  ಮಧ್ಯದಲ್ಲಿ ನಡೆದಾಡುವಾಗ ಕುಡಿದಿದ್ದಾರೆಯೇ ಎಂದು ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಗೆ ತೂರಾಡುತ್ತಾ  ಆಟೋರಿಕ್ಷಾದಲ್ಲಿ ಬಂದು ಕುಳಿತರು.

ಡಿಯೋಲ್ ತನ್ನ ಹಲವು ಸಂದರ್ಶನಗಳಲ್ಲಿ ತಾನು ದುಶ್ಚಟಗಳಿಂದ ದೂರು ಇರುವ ವ್ಯಕ್ತಿ ಎಂದು ಹೇಳಿದ್ದಾರೆ. ಆದರೆ ಈ ವೀಡಿಯೊ ನೋಡಿದ ಬಳಿಕ ಅಭಿಮಾನಿಗಳು ಶಾಕ್‌ ಆದರು. ಆದರೆ ಕೆಲ ಸನ್ನಿ ಡಿಯೋಲ್ ಫ್ಯಾನ್‌ ಪೇಜ್‌ಗಳು ನಟ ಮದ್ಯ ಕುಡಿದ ಸ್ಥಿತಿಯಲ್ಲಿದ್ದಾರೆ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದವು.

13ನೇ ವಯಸ್ಸಿನಲ್ಲಿ ತನಗಿಂತ 30ವರ್ಷ ದೊಡ್ಡ ಗುರುವನ್ನೇ ಮದುವೆಯಾಗಿ ಇಸ್ಲಾಂಗೆ ಮತಾಂತರವಾದ ಪ್ರಸಿದ್ಧ ಕೊರಿಯೋಗ್ರಾಫರ್

ಇದರ ಅಸಲಿ ಕಾರಣ ಎಂದರೆ ನಟ ಮುಂಬೈನಲ್ಲಿ ತಮ್ಮ ಮುಂದಿನ ಸಫರ್  ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹೀಗಾಗಿ ಶೂಟಿಂಗ್‌ನಲ್ಲಿರುವ ಈ ವಿಡಿಯೋ ವೈರಲ್ ಆಗಿದೆ. ಸನ್ನಿ ಅವರು ನಟಿಸುತ್ತಿರುವ ಈ  ಚಿತ್ರವನ್ನು ನಟ-ನಿರ್ಮಾಪಕ ಶಶಾಂಕ್ ಉದಪುರ್ಕರ್ ನಿರ್ದೇಶಿಸುತ್ತಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ನಟ ಸನ್ನಿ ಡಿಯೋಲ್‌ ಕೂಡ ಶೂಟಿಂಗ್‌ ವಿಡಿಯೋವನ್ನು ಪ್ರಕಟಿಸಿ ಗಾಸಿಪ್‌ಗಳ ಪ್ರಯಾಣ ಇಲ್ಲಿ ತನಕ ಮಾತ್ರ ಎಂದು ತನ್ನ ಬಗ್ಗೆ ಹಬ್ಬಿರುವ ರೂಮರ್‌ ಗೆ ಅಂತ್ಯ ಹಾಡಿದ್ದಾರೆ.

ವರದಿಗಳ ಪ್ರಕಾರ, ಸಫರ್ 2020 ರ ಮರಾಠಿ ಭಾಷೆಯ ಪ್ರವಾಸ್‌ ಚಲನಚಿತ್ರ  ರಿಮೇಕ್ ಎಂದು ಹೇಳಲಾಗುತ್ತದೆ, ಇದನ್ನು ಸ್ವತಃ ಶಶಾಂಕ್ ಅವರೇ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಅಶೋಕ್ ಸರಾಫ್, ಪದ್ಮಿನಿ ಕೊಲ್ಹಾಪುರೆ, ವಿಕ್ರಮ್ ಗೋಖಲೆ ಮತ್ತು ರಜಿತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

55 ವಯಸ್ಸಿನಲ್ಲಿ 18ರ ನಟಿಯನ್ನು ಮೂರನೇ ಮದುವೆಯಾಗಿ ವಿವಾದದಲ್ಲಿದ್ದ ಪ್ರಸಿದ್ದ ನಿರ್ಮಾಪಕನಿಗೆ ಹುಬ್ಬಳ್ಳಿ ನಂಟು!

ಈ ನಡುವೆ ಸನ್ನಿ ಡಿಯೋಲ್ ಕೊನೆಯ ಬಾರಿಗೆ ದೇಶಭಕ್ತಿಯ ಆಕ್ಷನ್ ಸಿನೆಮಾ ಗದರ್ 2 ನಲ್ಲಿ ಕಾಣಿಸಿಕೊಂಡಿದ್ದರು. ಸಿನೆಮಾ ಗಲ್ಲಾಪೆಟ್ಟಿಗೆಯಲ್ಲಿ ಕಬಳಿಸಿತು.  ಭಾರತದಲ್ಲಿ ರೂ 525.70 ಕೋಟಿ ನಿವ್ವಳ ಮತ್ತು ವಿಶ್ವಾದ್ಯಂತ ರೂ 686 ಕೋಟಿ ಗಳಿಸಿತು, ಶಾರುಖ್ ಖಾನ್ ಅವರ ಜವಾನ್ ಮತ್ತು ಪಠಾನ್ ನಂತರ ಈ ವರ್ಷ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮಿದೆ.

 

Follow Us:
Download App:
  • android
  • ios