ಮುಂಬೈ(ಜೂ. 01)  ಕೊರೋನಾ ಸಂಕಷ್ಟದ ಸಂದರ್ಭದಲ್ಲಿ  ಬಾಲಿವುಡ್ ನಟ ಸೋನು ಸೂದ್ ಪ್ರತಿದಿನ ಅಶಕ್ತರಿಗೆ, ಸಂಕಷ್ಟಕ್ಕೆ ಗಿರಿಯಾದವರಿಗೆ ನೆರವು ನೀಡಿಕೊಂಡೇ ಬಂದಿದ್ದಾರೆ.

ಮೊದಲನೇ ಅಲೆಯಲ್ಲಿ  ಕಾರ್ಮಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿಕೊಟ್ಟರೆ ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್ ನೀಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕೊರೋನಾ ಕಾಲದಲ್ಲಿ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಉಚಿತ ಶಿಕ್ಷಣಕ್ಕೆ ಸರ್ಕಾರ ಗಮನ ನೀಡಬೇಕು ಎಂದು ನಟ ಮನವಿ ಮಾಡಿಕೊಂಡಿದ್ದರು. ನಟಿ ಪ್ರಿಯಾಂಲಾ ಚೋಪ್ರಾ ಸಹ ಸೋನು ಬೆಂಬಲಕ್ಕೆ ನಿಂತಿದ್ದರು.

ತಬ್ಬಲಿ ಮಕ್ಕಳ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ಯೋಜನೆ

ಇದೀಗ ಸ್ವತಃ ಸೋನು ಸೂದ್ ಅವರೇ ಮುಂದಾಗಿದ್ದು ಕೊರೋನಾದಿಂದ ಅನಾಥರಾದ ಮಕ್ಕಳ ಶಿಕ್ಷಣಕ್ಕೆ ಯೋಜನೆ ರೂಪಿಸಿದ್ದಾರೆ.  ಈ ತುರ್ತು ಸಂದರ್ಭದ ಅರಿವು ನನಗಿದೆ.  ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಮಕ್ಕಳ ಕುಟುಂಬಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ.  ಕೆಲ ರಾಜ್ಯ ಸರ್ಕಾರಗಳು ಉಚಿತ ಶಿಕ್ಷಣದ ಭರವಸೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕೊರೋನಾದಿಂದ ತಬ್ಬಲಿಗಳಾದ ಮಕ್ಕಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬಾಲಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆ ಪ್ರಕಾರ ಕೊರೋನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳಿಗೆ 3,500 ರೂಪಾಯಿ, ಸರ್ಕಾರದಿಂದ ಉಚಿತ ಶಿಕ್ಷಣ ಹಾಗೂ ವಿಮೆ ಸೌಲಭ್ಯಗಳನ್ನು ನೀಡಲಾಗುತ್ತದೆ.   ಹಲವು ಸಂರಘ-ಸಂಸ್ಥೆಗಳು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಘೋಷಿಸಿವೆ. 

ಕಾಲಿಗೆ  ಬೀಳಬೇಡಿ, ನೆರವಿನ ಹಸ್ತ ನೀಡಿದ ಸೋನು ಸೂದ್

"