ಹೈದರಾಬಾದ್(ಜು. 27)  ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ್ದಾರೆ.

"

ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯ ರೈತರಿಗೆ ಟ್ರ್ಯಾಕ್ಟರ್ ಕಳುಹಿಸಿಕೊಟ್ಟಿದ್ದಾರೆ. ಹೆಣ್ಣು ಮಕ್ಕಳು ಎತ್ತುಗಳಾಗಿ ಭೂಮಿ ಉಳುತ್ತಿದ್ದ ವಿಡಿಯೋವನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ನಂತರ ವಿಡಿಯೋ ವಿಡಿಯೋ ವೈರಲ್ ಆಗಿತ್ತು. 

ವಿಡಿಯೋ ನೋಡಿದ ಸೋನು ಸೂದ್  ಎತ್ತುಗಳನ್ನು ಕೊಡಿಸುತ್ತೇನೆ ಎಂದು ಹೇಳಿದ್ದರು.  ನಂತರ ಎತ್ತುಗಳ ಬದಲಾಗಿ ಇದೀಗ ಟ್ರ್ಯಾಕ್ಟರ್ ನೀಡಿದ್ದಾರೆ.   ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳ ತವರಿಗೆ ಕರೆತಂದ ಸೋನು ಸೂದ್

ಸೋನು ಸೂದ್ ಕಾರ್ಯವನ್ನು ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೊಂಡಾಡಿದ್ದಾರೆ. ಚಂದ್ರಬಾಬು ನಾಯ್ಡು ಹೊಗಳಿಗೆ ಸೋನು ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ತೂರ್ ಜಿಲ್ಲೆಯ ರಾಜುವರಿಪಿಲ್ಲೆಯ ರೈತ ನಾಗೇಶ್ವರ ರಾವ್ ಕುಟುಂಬಕ್ಕೆ ಸೋನು ಸೂದ್ ಟ್ರ್ಯಾಕ್ಟರ್ ನೀಡಿದ್ದಾರೆ.  ನಾಗೇಶ್ವರ ರಾವ್ ಮಕ್ಕಳಾದ ವೆನೆಲ್ಲಾ ಮತ್ತು ಚಂದನಾ ಎತ್ತುಗಳ ರೀತಿ ನೇಗಿಲು ಎಳೆದಿದ್ದರೆ ತಂದ ತಾಯಿ ಬಿತ್ತನೆ ಕೆಲಸ ಮಾಡಿದ್ದರು.  

ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದ ಸೋನು ಸೂದ್ ಈಗ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.