ನಟ ಸೋನು ಸೂದ್ ಕೊಟ್ಟ ಸ್ಪೆಷಲ್ ಗಿಫ್ಟ್ | ಶೂಸ್, ಪುಸ್ತಕ ಅಲ್ಲ, ರೈಫಲ್

ರಾಜ್ಯಮಟ್ಟದ ರೈಫಲ್ ಶೂಟಿಂಗ್ ಚಾಂಪಿಯನ್ ಕೊನಿಕಾ ಲಾಯಕ್ಗೆ ಬಾಲಿವುಡ್ ನಟ ಸೋನು ಸೂದ್ ರೈಫಲ್ ಗಿಫ್ಟ್ ಮಾಡಿದ್ದಾರೆ.
ಧನ್ಬಾದ್ನ ಕೊನಿಕಾಗೆ ಸೋನು ಕೈಯಿಂದಲೇ ರೈಫಲ್ ಸಿಕ್ಕಿದೆ.

ಈಕೆ ಈಶಾನ್ಯ ವಿಭಾಗದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಆಕಾಂಕ್ಷಿಯಾಗಿದ್ದಳು. ಆದರೆ ಈಕೆಯ ಬಳಿ ರೈಫಲ್ ಇರಲಿಲ್ಲ. ಕಳೆದ ವರ್ಷ ಈ 11ನೇ ಝಾರ್ಕಂಡ್ ರೈಫಲ್ ಶೂಟಿಂಗ್ ಚಾಂಪಿಯನ್ಶಿಪ್ ಗೆದ್ದಿದ್ದಳು.

ಝೀರೋ ಇನ್ವೆಸ್ಟ್‌ಮೆಂಟ್: ಸ್ಪೈಸ್ ಮನಿ ಬಗ್ಗೆ ಸೋನು ಸೂದ್ ಮಾತು

ಆದರೆ ತರಬೇತಿಗೆ ರೈಫಲ್ ಕೇಳಿ ತರಬೇಕಾಗಿತ್ತು. ಆದರೆ ಪ್ರತಿದಿನ ತರಬೇತಿ ಪಡೆಯಲಾಗುತ್ತಿರಲಿಲ್ಲ. ರೈಫಲ್ ಕೇಳಿ ತರುವುದರಿಂದ ತರಬೇತಿ ತಡವಾಗುತ್ತಿತ್ತು.

ಇದನ್ನು ನೆಟ್ಟಿಗರು ಸೋನು ಸೂದ್ ಗಮನಕ್ಕೆ ತಂದಿದ್ದಾರೆ. ನಂತರ ನಟ ಕೊನಿಕಾ ಮತ್ತು ಆಕೆಯ ಫ್ಯಾಮಿಯನ್ನು ಸಂಪರ್ಕಿಸಿದ್ದಾರೆ.

ಕೊನಿಕಾ ಅವರ ಕನಸುಗಳನ್ನು ಈಡೇರಿಸುವಷ್ಟು ಸಹಾಯ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಗುಂಪಿನ ಜನರು ಅವಳಿಗೆ ಸಹಾಯ ಮಾಡಲು ನನ್ನ ಬಳಿಗೆ ಬಂದಾಗ, ನಾನು ತಕ್ಷಣ ನನ್ನ ತಂಡವನ್ನು ರೈಫಲ್ ವ್ಯವಸ್ಥೆ ಮಾಡಲು ಸಂಪರ್ಕಿಸಿದೆ. ನಮ್ಮ ದೇಶದಲ್ಲಿ ಯಾರ ಪ್ರತಿಭೆ ವ್ಯರ್ಥವಾಗಬಾರದು. ಅವಳ ಪ್ರಯಾಣದ ಭಾಗವಾಗಲು ನನಗೆ ಅವಕಾಶ ಸಿಕ್ಕಿದೆ ಸೋನು ಹೇಳಿದ್ದಾರೆ.