ತಮಿಳು ನಟ ಶಿವಕಾರ್ತಿಕೇಯನ್ ಮತ್ತು ಅವರ ಪತ್ನಿ ಆರತಿ ಗಂಡು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ.  

ಕಾಲಿವುಡ್ ಚಿತ್ರರಂಗದ ಸಿಂಪಲ್ ಆ್ಯಂಡ್ ಹಂಬಲ್ ನಟ ಶಿವಕಾರ್ತಿಕೇಯನ್ ಮತ್ತು ಅವರ ಪತ್ನಿ ಆರತಿ ತಮ್ಮ ಕುಟುಂಬಕ್ಕೆ ಸೋಮವಾರ (ಜುಲೈ 12) ಹೊಸ ಅತಿಥಿ ಆಗಮಿಸಿರುವ ಬಗ್ಗೆ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಕಾರ್ತಿಕೇಯನ್ ಟ್ಟೀಟ್‌ಗೆ ಅಭಿಮಾನಿಗಳು ಹಾಗೂ ಸಿನಿ ಆಪ್ತರು ಶುಭ ಹಾರೈಸಿದ್ದಾರೆ. 

'ಇಂದು, 18 ವರ್ಷಗಳ ನಂತರ ನನ್ನ ತಂದೆ ನನ್ನ ಮಗನ ರೂಪದಲ್ಲಿ ಕೈ ಬೆರಳುಗಳನ್ನು ಹಿಡಿದುಕೊಂಡಿದ್ದಾರೆ. ಲೈಫ್‌ ಲಾಂಗ್ ಮರೆಯಲಾಗದ ನೋವು ಸಹಿಸಿಕೊಂಡ ನನ್ನ ಹೆಂಡತಿಗೆ ಧನ್ಯವಾದಗಳು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ,' ಎಂದು ಕಾರ್ತಿಕೇಯನ್ ಟ್ಟೀಟ್ ಮಾಡಿದ್ದಾರೆ. ಈಗಾಗಲೇ ಇವರಿಗೆ ಆರಾಧನಾ ಎಂಬ ಮಗಳಿದ್ದಾಳೆ.

ಕಾಲಿವುಡ್ ಸೂಪರ್ ಸ್ಟಾರ್ ಶಿವ ಕಾರ್ತಿಕೇಯನ್‌ ಲವ್‌ ಸ್ಟೋರಿ ಇದು!

ಕೊನೆಯ ಬಾರಿ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದು, 'ನಮ್ಮ ವೀಟು ಪಿಲೈ' ಚಿತ್ರದಲ್ಲಿ. ಇನ್ನೂ 'ಡಾಕ್ಟರ್' ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಡಾಕ್ಟರ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಫೀಶಿಯಲ್ ಅನೌನ್ಸ್ ಆಗಿಲ್ಲ.

Scroll to load tweet…