ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟ ಸಮೀರ್ ಶರ್ಮಾ(44) ಮಾನಸಿಕ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದಾರೆ. ಸುಶಾಂತ್‌ ಸಿಂಗ್ ಬಗ್ಗೆ ಪ್ರೀತಿ ಇದ್ದರೆ ಇದನ್ನು ಓದಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ನಟ ಮಾನಸಿಕ ಆರೋಗ್ಯ ಮತ್ತು ಡಿಪ್ರೆಷನ್‌ನಿಂದ ಬಳಲುವ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ನಿಮ್ಮನ್ನು ನೀವೇ ಕೊಲ್ಲುವುದರ ಅರ್ಥ ನಿಮಗೆ ಗೊತ್ತೇ..? ಅದನ್ನು ಊಹಿಸಲೂ ಬೇಡಿ ಎಂದು ತಮ್ಮ ಯೋಚನೆಗಳನ್ನು ಪೋಸ್ಟ್ ಮೂಲಕ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ಕಿರುತೆರೆ ನಟ ಸಮೀರ್‌ ಶರ್ಮಾ!

ಒಂದು ಕ್ಷಣವೂ ಆತ ಹೇಡಿ ಎಂದು ಯೋಚಿಸಬೇಡಿ. ಹಾಗಾದರೆ ಆತ ಆ ರೀತಿ ಮಾಡಿಕೊಂಡಿದ್ದೇಕೆ..? ಸಮಾಜಿಕ, ಆರ್ಥಿಕ ಅಥವಾ ಇನ್ಯಾವುದೇ ಒತ್ತಡ ಇದಕ್ಕೆ ಕಾರಣವಲ್ಲ ಎಂಬುದು ಅವರ ಅಭಿಪ್ರಾಯ.

ಅವನು ಯಾಕೆ ಆತ್ಮಹತ್ಯೆ ಮಾಡುತ್ತಾನೆ ಎಂದರೆ ಕರಾಳತೆ ಕಿರುಚಾಟವನ್ನು ನಿಲ್ಲಿಸುವುದಿಲ್ಲ, ಇದು ಅಸಹನೀಯ ನೋವನ್ನು ಉಂಟು ಮಾಡುತ್ತದೆ, ಈ ನೋವು ಅಸಹನೀಯ ಮತ್ತು ಸಂಪೂರ್ಣವಾಗಿ ವಿವರಿಸಲಾಗದ್ದು ಎಂದು ಬರೆದಿದ್ದಾರೆ.

'ಅವಕಾಶಕ್ಕಾಗಿ ಹಿರೋಗಳ ಜೊತೆ ಮಲಗಿಲ್ಲ': ಬಾಲಿವುಡ್ ಏಕಸ್ವಾಮ್ಯದ ಬಗ್ಗೆ ರವೀನಾ ಮಾತು

ಸಮುದ್ರದ ಫೋಟೋವೊಂದನ್ನು ಸಮೀರ್ ಕೊನೆಯದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್  ಮಾಡಿದ್ದರು. ಸಮುದ್ರ, ಸಮುದ್ರ ಕಿನಾರೆ, ಮುಂಬೈ ನಗರ ಹೀಗೆ ಇಂತಹುದೇ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದರು ನಟ ಸಮೀರ್.

ನಾನು ನನ್ನ ಚಿತೆಯನ್ನು ಮಾಡಿದೆ, ಅದರಲ್ಲಿ ಮಲಗಿದೆ, ನನ್ನ ಬೆಂಕಿ ನನ್ನನ್ನೇ ಸುಟ್ಟಿತು, ನಾನದರಲ್ಲಿ ಸುಟ್ಟು ಹೋದೆ ಎಂ ಅರ್ಥದ ಕವಿತೆಯಿಂದನ್ನೂ ಶೇರ್ ಮಾಡಿದ್ದರು. ಚಿತ್ರರಂಗದ ಪ್ರಮುಖರು ಖಿನ್ನತೆಯನ್ನು ದಾಟಿ ಬಂದಿರುವ ಬಗ್ಗೆ ಹೇಳುತ್ತಿರುತ್ತಾರೆ.

ನಟಿ ದೀಪಿಕಾ ಪಡುಕೋಣೆಯೂ ಇದಕ್ಕೆ ಹೊರತಲ್ಲ. ದೀಪಿಕಾ ಅವರೂ ಹಲವು ಬಾರಿ ತಮ್ಮ ಖಿನ್ನತೆ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಸುಶಾಂತ್ ಸಾವಿನ ನಂತರ ಡಿಪ್ರಿಷನ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.