ಮುಂಬೈ(ಏ. 21)   ಬಾಲಿವುಡ್​ ಭಾಯ್​ ಜಾನ್​ ಸಲ್ಮಾನ್​​ ಖಾನ್​​​​ ಇತ್ತೀಚೆಗೆ ಯ್ಯೂಟೂಬ್​ ಚಾನೆಲ್​​ ಅನ್ನು ಪ್ರಾರಂಭಿಸಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ  ಆ ಯ್ಯೂಟೂಬ್​ ಚಾನೆಲ್​ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಲು ಸಲ್ಮಾನ್​ ಖಾನ್​ ಪ್ಲಾನ್​ ಪ್ಲಾನ್​ ಮಾಡಿದ್ದಾರೆ.

ವೈದ್ಯರ ಮೇಲೆ ಹಲ್ಲೆ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

ಕೊರೋನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ‘ಪ್ಯಾರ್​ ಕರೋನಾ‘ ಎಂಬ ಹಾಡನ್ನು ತಮ್ಮ ಯ್ಯೂಟೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ. ವಿಶೇಷವೆಂದರೆ ಈ ಹಾಡಿಗೆ ಸಲ್ಮಾನ್​ ಖಾನ್​ ಸಾಹಿತ್ಯ ಬರೆಯುವುದರ ಜೊತೆಗೆ ಧ್ವನಿಯನ್ನು ನೀಡಿದ್ದಾರೆ. ಹಾಡಿನಲ್ಲಿ ಕೊರೋನಾ ಜಾಗೃತಿಯ ಜೊತೆಗೆ ಕೊರೋನಾ ವಾರಿಯರ್ಸ್​​ ಬಗ್ಗೆಯೂ ಸಾಹಿತ್ಯವನ್ನು ಗೀಚಿದ್ದಾರಂತೆ.

ಸಾಜಿದ್​ ವಜಿದ್​​ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ‘ಪ್ಯಾರ್​ ಕರೋನಾ‘ ಹಾಡು ಸಲ್ಮಾನ್​ ಖಾನ್​ ಅವರ ಯ್ಯೂಟೂಬ್​ ಚಾನೆಲ್​ನಲ್ಲಿ ರಿಲೀಸ್​ ಆಗಿದ್ದು ವೀವ್ಸ್ ಮೇಲೆ ವೀವ್ಸ್ ಕಾಣುತ್ತಿದೆ.