ತೆಲುಗು ಸ್ಟಾರ್ ನಾಗಾರ್ಜುನ್  Kia EV6 ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಈ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ನಾಗಾರ್ಜುನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ದೊಡ್ಡ ಸಹಾಯವಾಗುತ್ತಿದೆ. ಪರಿ,ರ ಕಾಳಜಿ ಮೆರೆಯುವ ಅನೇಕರು ಪರಿಸರ ಪ್ರೇಮಿಗಳು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಾರೆ. ಇದೀಗ ತೆಲುಗು ಸ್ಟಾರ್ ನಾಗಾರ್ಜುನ್ ಕೂಡ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಈ ಮೂಲಕ ನಾಗಾರ್ಜುನ್ ಪರಿಸರ ಪ್ರೇಮ ಮೆರೆದಿದ್ದಾರೆ. ತೆಲುಗು ಸ್ಟಾರ್ ನಾಗಾರ್ಜನ್ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಹೊಸ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. 

ನಾಗಾರ್ಜುನ ದೇಶದ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿರುವ Kia EV6 ಅನ್ನು ಕೊಂಡುಕೊಂಡಿದ್ದಾರೆ. ನಾಗಾರ್ಜುನ ಮತ್ತು ಪತ್ನಿ ಅಮಲಾ ಅಕ್ಕಿನೇನಿ ಇಬ್ಬರೂ ಹೊಸ ಕಾರಿನ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ಹೊಸ Kia EV6 ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ನಿವಾಸದಲ್ಲೇ ಹೊಸ ಕಾರನ್ನು ಸ್ವೀಕರಿಸಿದ ಸಂತಸವನ್ನು ಪೋಸ್ಟರ್‌ನಲ್ಲಿ ನೋಡಬಹುದು. 

ನಾಗಾರ್ಜುನ ಮತ್ತು ಪತ್ನಿ ಅಮಲಾ ವಾಸವಿರುವ ಜುಬಿಲಿ ಹಿಲ್ಸ್‌ನ ನಿವಾಸದಲ್ಲಿ ಹೊಸ ಕಾರನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ Kia ಕಂಪನಿ, 'ಹೊಸ Kia EV6 ಖರೀದಿಸಿದ ನಾಗಾರ್ಜುನ ಮತ್ತು ಅಮಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಚಲನಶೀಲತೆಯ ಭವಿಷ್ಯಕ್ಕಾಗಿ ನೀವು ಸ್ಮಾರ್ಟ್ ಮತ್ತು ಸಮರ್ಥನೀಯ ಆಯ್ಕೆಯನ್ನು ಮಾಡಿದ್ದೀರಿ' ಎಂದು ಹೇಳಿದ್ದಾರೆ. 

ದಕ್ಷಿಣ ಭಾರತದ ಈ ಸ್ಟಾರ್ ತನ್ನ ಕ್ರಶ್ ಎಂದ ರಮ್ಯಾ ಕೃಷ್ಣನ್; ಯಾರು ಆ ನಟ?

ಕಿಯಾ ಕಂಪನಿಯು ಎಲ್ಲಾ-ಹೊಸ EV6 ಅನ್ನು ಭಾರತದಲ್ಲಿ ತನ್ನ ಮೊದಲ ಮತ್ತು ಏಕೈಕ ಎಲೆಕ್ಟ್ರಿಕ್ ಕಾರ್ ಆಗಿ ಪರಿಚಯಿಸಿತು. ಕಿಯಾ ಆರಂಭದಲ್ಲಿ ಭಾರತದಲ್ಲಿ ಸುಮಾರು 100 ಘಟಕಗಳನ್ನು ಮಾರಾಟ ಮಾಡಲು ಯೋಜಿಸಿತ್ತು. ಆದಾಗ್ಯೂ, ಅವರು ಅದರ ಪ್ರಾರಂಭದ ದಿನದಂದು 355 ಕ್ಕೂ ಹೆಚ್ಚು ಬುಕಿಂಗ್‌ಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದರು. Kia EV6 ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಅಂದಹಾಗೆ Kia EV6 ಭಾರತದ ಮತ್ತೋರ್ವ ಗಣ್ಯ ವ್ಯಕ್ತಿ ಕ್ರಿಕೆಟಿಗ ಎಂ ಎಸ್ ಧೋನಿ ಕೂಡ ಖರೀದಿಸಿದ್ದಾರೆ. ಇದೀಗ ತೆಲುಗು ಸ್ಟಾರ್ ನಾಗಾರ್ಜುನ ಖರೀದಿ ಮಾಡಿ ಚಲಾಯಿಸಿದ್ದಾರೆ. ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

'ಬಿಗ್ ಬಾಸ್'‌ ಶೋಯಿಂದ ಹಿಂದೆ ಸರಿದ ನಟ ನಾಗಾರ್ಜುನ್; ಮುಂದಿನ ಹೋಸ್ಟ್ ಯಾರು?

ಇನ್ನೂ ನಾಗಾರ್ಜುನ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ದಿ ಗೋಷ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಾರ್ಜುನ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಬಂಗರಾಜು ಕೂಡ ಸೋಲು ಕಂಡಿದೆ. ಸದ್ಯ ನಾಗಾರ್ಜುನ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.