ನಟ ನಾಗಾರ್ಜುನ್ ತೆಲುಗು ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಶೋ ಕೂಡ ಒಂದು. ಬಿಗ್ ಬಾಸ್ ಅನೇಕ ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಸದ್ಯ ಬಿಗ್ ಬಾಸ್ 9ನೇ ಸೀಸನ್ ನಡೆಯುತ್ತಿದೆ. ಕೊನೆಯ ಹಂತಕ್ಕೆ ಬಂದಿದೆ. ಇತ್ತೀಚಿಗಷ್ಟೆ ತೆಲುಗು ಬಿಗ್ ಬಾಸ್‌ಗೆ ಅದ್ದೂರಿ ತೆರೆ ಬಿದ್ದಿದೆ. ತೆಲುಗಿನಲ್ಲಿ 7 ಸೀಸನ್‌ಗಳು ಯಶಸ್ವಿಯಾಗಿ ಮುಕ್ತಾಯವಾಗಿದೆ. ಅಂದಹಾಗೆ ತೆಲುಗು ಬಿಗ್ ಬಾಸ್ ಅನ್ನು ಸ್ಟಾರ್ ನಟ ನಾಗಾರ್ಜುನ್ ಹೋಸ್ಟ್ ಮಾಡಿದ್ದರು. 6ನೇ ಸೀಸನ್ ಮುಕ್ತಾಯವಾಗುತ್ತಿದ್ದಂತೆ ಮುಂದಿನ ಸೀಸನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಯಾರು ಹೋಸ್ಟ್ ಮಾಡ್ತಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ನಟ ನಾಗಾರ್ಜುನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹಿಂದೆ ಸರಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ನಾಗಾರ್ಜುನ್ ತೆಲುಗು ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ಆಯೋಜಕರು ಅಥವಾ ನಾಗಾರ್ಜುನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇನ್ಮುಂದೆ ನಾಗಾರ್ಜುನ್ ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ವೈರಲ್ ಆಗಿದೆ. ನಟ ನಾಗಾರ್ಜುನ್ ಅನೇಕ ಟೀಕೆ ಮತ್ತು ವಿರೋಧಗಳ ನಡುವೆಯೂ ತನ್ನದೆ ಶೈಲಿಯಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದರು. ಈ ಸೀಸನ್ ಕೂಡ ಯಶಸ್ವಿಯಾಗಿ ಮುಗಿಸಿ ಕೊಟ್ಟಿದ್ದಾರೆ. ಆದರೆ ಕಳೆದ ಸೀಸನ್ ನಲ್ಲಿ ನಾಗಾರ್ಜುನ್ ಅವರಿಗೆ ಎಲಿಮಿನೇಷನ್ ವಿಚಾರದಲ್ಲಿ ಅಸಮಾಧಾನಗೊಂಡಿದ್ದರು. ಹಾಗಾಗಿ ಬಿಗ್ ಬಾಸ್ ಶೋ ತೊರೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 

ನಾಗಾರ್ಜುನ್ ಬಿಗ್ ಬಾಸ್ ಶೋನಿಂದ ಹೊರಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಇನ್ಮುಂದೆ ಬಿಗ್ ಬಾಸ್ ಯಾರು ಹೋಸ್ಟ್ ಮಾಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಅಂದಹಾಗೆ ಈಗಾಗಲೇ ಇಬ್ಬರ ಹೆಸರು ವೈರಲ್ ಆಗಿದೆ. ಹೌದು, ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಮತ್ತು ಬಾಲಯ್ಯ ಹೆಸರು ಕೇಳಿಬರುತ್ತಿದೆ. ಅಂದಹಾಗೆ ರಾಣಾ ಹೆಸರು ಬಲವಾಗಿ ಕೇಳಿಬರುತ್ತಿದೆ. ನಾಟ ನಾಗಾರ್ಜುನ್ ಅವರೇ ರಾಣಾ ದಗ್ಗುಬಾಟಿ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಮುಂದಿನ ಸೀಸನ್ ರಾಣಾ ನಡೆಸಿಕೊಡುವ ಸಾಧ್ಯತೆ ಇದೆ. ಆಯೋಜಕರು ವಿಜಯ್ ದೇವರಕೊಂಡ ಅವರನ್ನು ಕರೆತರುವ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಹಾಗಾಗಿ ಮುಂದಿನ ಸೀಸನ್ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

ವಿಚ್ಛೇದನಕ್ಕೆ ಮುಂದಾದ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ; ಹೆಣ್ಣು ಮಗು ದತ್ತು ಸುಳಿವು ಕೇಳಿ ನೆಟ್ಟಿಗರು ಶಾಕ್

ಅಂದಹಾಗೆ ತೆಲುಗು ಬಿಗ್ ಬಾಸ್ ಮೊದಲ ಸೀಸನ್ ಅನ್ನು ಜೂನಿಯರ್ ಎನ್ ಟಿ ಆರ್ ಹೋಸ್ಟ್ ಮಾಡಿದ್ದರು. ಸೀಸನ್ 2 ಅನ್ನು ನಟ ನಾನಿ ನಡೆಸಿಕೊಟ್ಟಿದ್ದರು. ಸೀಸನ್ 3 ಯಿಂದ ಇತ್ತೀಚೆಗೆ ಕೊನೆಗೊಂಡ ಆರನೇ ಸೀಸನ್ ವರೆಗೂ ಕಿಂಗ್ ನಾಗಾರ್ಜುನ ಹೋಸ್ಟ್ ಮಾಡಿದ್ದರು. ಇದೀಗ ಬಿಗ್ ಬಾಸ್ ತೆಲುಗು ನಡೆಸಿಕೊಡುವ ಜವಾಬ್ದಾರಿ ಬೇರೆಯವರ ಹೆಗಲಿಗೆ ಬೀಳಲಿದೆ ಎನ್ನಲಾಗಿದೆ. ನಿಜಕ್ಕೂ ನಾಗಾರ್ಜುನ್ ಅವರು ಬಿಗ್ ಬಾಸ್ ಶೋನಿಂದ ಹೊರ ನಡೆದಿದ್ದಾರಾ ಎನ್ನುವುದು ಸದ್ಯದಲ್ಲೇ ಬಹಿರಂಗವಾಗಲಿದೆ. 

ಮಗಳಿಗೆ ಆಪರೇಷನ್; ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಹೋದ ಅರುಣ್ ಸಾಗರ್

ಅಂದಹಾಗೆ ತೆಲುಗು ಬಿಗ್ ಬಾಸ್ ಸೀಸನ್ 6 ಮುಗಿಸಿರುವ ಆಯೋಜಕರು ಮುಂದಿನ್‌ಗೆ ಈಗಾಲೇ ಪ್ಲಾನ್ ಮಾಡಿದ್ದಾರೆ, ಸದ್ಯದಲ್ಲೇ ಶುರುವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ಹೋಸ್ಟ್ ಯಾರು ಮಾಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 7 ಯಾರು ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆ ಇದೆ.