Asianet Suvarna News Asianet Suvarna News
breaking news image

ಕಾಮ ಕೆರಳಿಸುವ ಸೆಕ್ಸಿ ಹೆಣ್ಣು ಟಬು ಎಂದಿದ್ದ ನಾಗಾರ್ಜುನ ಯಾಕೆ ಮದುವೆಯಾಗ್ಲಿಲ್ಲ?

'ನಿನಗೆ ಮಾತ್ರ ಸಂಸಾರ ಬೇಕು, ನನಗೆ ಬೇಡವೇ. ನಿನ್ನ ಸಂಸಾರದಲ್ಲಿ ಸುಖವಿಲ್ಲ ಎಂದು ನನ್ನ ಜೊತೆ ಇರುತ್ತೀಯೆ. ಆದರೆ, ಸುಖವಿಲ್ಲದ ಸಂಸಾರವನ್ನೂ ನೀನು ಬಿಟ್ಟು ಬರಲು ಸಿದ್ಧನಿಲ್ಲ. ಸುಖಕ್ಕೆ ನಾನು, ಸಂಸಾರಕ್ಕೆ ಅವಳು. ಇದನ್ನು ನನ್ನಿಂದ ಒಪ್ಪಲು ಆಗದು'

Actor Nagarjuna Akkineni and Actress Tabu love story ends with Tragedy srb
Author
First Published May 25, 2024, 1:40 PM IST

ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ (Nagarjuna Akkineni) ಹಾಗೂ ನಟಿ ಟಬು (Tabu) ಲವ್ ಸ್ಟೋರಿ ಬಹುತೇಕರಿಗೆ ಗೊತ್ತಿರುವ ಸಂಗತಿ. ನಟಿ ಅಮಲಾರನ್ನು ಮದುವೆಯಾಗಿದ್ದ ಹೆಂಡತಿ-ಮಕ್ಕಳೊಂದಿಗೆ ನಾಜಾರ್ಜುನ್ ಸಂಸಾರ ಮಾಡಿಕೊಂಡಿದ್ದ ನಟ ನಾಗಾರ್ಜುನ್‌ ನಟಿ ಟಬು ಜತೆ ಲವ್ ಅಪೇರ್ ಇಟ್ಟುಕೊಂಡಿದ್ದರು. ಅದೂ ಕೂಡ ಒಂದೆರಡು ವರ್ಷಗಳ ಲವ್ ಅಫೇರ್ ಅಲ್ಲ, ಅದು ಬರೋಬ್ಬರಿ ಹತ್ತು ವರ್ಷಗಳಷ್ಟು ದೀರ್ಘಕಾಲ ಅವರಿಬ್ಬರೂ ಪ್ರೀತಿಸುತ್ತಿದ್ದರು. ತೆರೆಯ ಆಚೆಗೂ ಟಬು-ನಾಗಾರ್ಜುನ್ ಡೇಟಿಂಗ್ ಹಾಗೂ ರೊಮ್ಯಾನ್ಸ್ ಬಗ್ಗೆ ಅರಿಯದ ತೆಲುಗು ಪ್ರೇಕ್ಷಕರು ಯಾರೂ ಇಲ್ಲ ಎನ್ನಬಹುದು. 

ಟಬು ಹಾಗೂ ನಾಗಾರ್ಜುನ ಪರಸ್ಪರ ಅದೆಷ್ಟು ಪ್ರೀತಿಸುತ್ತಿದ್ದರು ಎಂದರೆ ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿತ್ತು. ಆದರೆ, ಹಾಗೆ ಆಗಲೇ ಇಲ್ಲ. ಅಮಲಾಗೆ ನಾಗಾರ್ಜುನ ಡಿವೋರ್ಸ್ ಕೊಡುವುದಷ್ಟೇ ಬಾಕಿ ಎನ್ನಲಾಗುತ್ತಿರುವಾಗಲೇ ನಾಗಾರ್ಜುನ ಹಾಗೂ ಅಮಲಾ ದೂರವಾಗಿಬಟ್ಟರು. ಅದಕ್ಕೆ ಕಾರಣ ಬಹಳಷ್ಟು ತಡವಾಗಿ ಬಹಿರಂಗವಾಗಿದೆ. ಹಾಗಿದ್ದರೆ ಕಾರಣವೇನು ಗೊತ್ತೇ? ಹೌದು, ಅದಕ್ಕೆ ಕ್ಲಿಯರ್ ಕಾರಣವಿದೆ. ಅದು ಮತ್ತೇನೂ ಅಲ್ಲ, ನಟ ನಾಗಾರ್ಜುನ ಅಮಲಾಗೆ ಡಿವೋರ್ಸ್ ಕೊಡಲು ಒಪ್ಪಲಿಲ್ಲವಂತೆ. 

ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು?

ಹತ್ತು ವರ್ಷಗಳಷ್ಟು ದೀರ್ಘ ಕಾಲ ನಾಗಾರ್ಜುನ್ ಅವರನ್ನು ಪ್ರೀತಿಸಿದ ಬಳಿಕ ನಟಿ ಟಬು 'ನಾವಿಬ್ಬರೂ ಮದುವೆಯಾಗಿ ಸಂಸಾರ ಮಾಡೋಣ' ಎಂದಿದ್ದಾರೆ. ಆದರೆ ನಾಗಾರ್ಜುನ ಅದಕ್ಕೆ ಒಪ್ಪಲಿಲ್ಲ. 'ಈ ವಯಸ್ಸಿನಲ್ಲಿ ನಾನು ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ನಿನ್ನ ಜೊತೆ ಸಂಸಾರ ಮಾಡುವುದು ಹೇಗೆ? ನಾವಿಬ್ಬರೂ ಹೀಗೇ ಫ್ರೆಂಡ್ಸ್ ಆಗಿ ಇರೋಣ' ಎಂದಿದ್ದಾರಂತೆ. ಆದರೆ ಅದಕ್ಕೆ ನಟಿ ಟಬು ಸುತಾರಾಂ ಒಪ್ಪಿಲ್ಲ. 

ನಟ ದರ್ಶನ್‌ ಕಳುಹಿಸಿದ್ದ ಕಲ್ಲುಗಳ ಹಣವನ್ನು ಅರಣ್ಯ ಇಲಾಖೆ ವಾಪಸ್ ಮಾಡಿದ್ಯಾ?

'ನಿನಗೆ ಮಾತ್ರ ಸಂಸಾರ ಬೇಕು, ನನಗೆ ಬೇಡವೇ. ನಿನ್ನ ಸಂಸಾರದಲ್ಲಿ ಸುಖವಿಲ್ಲ ಎಂದು ನನ್ನ ಜೊತೆ ಇರುತ್ತೀಯೆ. ಆದರೆ, ಸುಖವಿಲ್ಲದ ಸಂಸಾರವನ್ನೂ ನೀನು ಬಿಟ್ಟು ಬರಲು ಸಿದ್ಧನಿಲ್ಲ. ಸುಖಕ್ಕೆ ನಾನು, ಸಂಸಾರಕ್ಕೆ ಅವಳು. ಇದನ್ನು ನನ್ನಿಂದ ಒಪ್ಪಲು ಆಗದು' ಎಂದು ಕಡ್ಡಿ ಮುರಿದಂತೆ ಹೇಳಿ ಆ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟುಬಿಟ್ಟರಂತೆ ನಟಿ ಟಬು. ಹೀಗಾಗಿ ಬರೋಬ್ಬರಿ ಹದಿನೈದು ವರ್ಷಗಳ ನಾಗಾರ್ಜುನ-ಟಬು ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ. ಆದರೆ, ಟಬು ಈಗಲೂ ಮದುವೆಯಾಗದೇ ಸಿಂಗಲ್ ಆಗಿಯೇ ಇದ್ದಾರೆ. 

ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!

ಒಟ್ಟಿನಲ್ಲಿ, ಸ್ಟಾರ್ ನಟರು ಸೇರಿದಂತೆ ಹಲವರು, ಒಬ್ಬರನ್ನು ಲವ್ ಮಾಡಿ ಮದುವೆಯಾಗಿ ಬಳಿಕ ಸಂಸಾರದಲ್ಲಿ ಸುಖವಿಲ್ಲ ಎಂದು ಇನ್ನೊಬ್ಬರ ಹಿಂದೆ ಬಿದ್ದು, ಮೊದಲ ಸಂಗಾತಿಗೆ ಡಿವೋರ್ಸ್ ಕೊಟ್ಟು ಎರಡನೆಯವರ ಜತೆ ಸಂಸಾರ ಸಾಗಿಸುವುದು ಅಥವಾ ಎರಡನೇ ಸಂಬಂಧವನ್ನೇ ಬಿಟ್ಟು ಮೊದಲನೆಯದಕ್ಕೇ ಮತ್ತೆ ಜೋತುಬೀಳುವುದು ಹೀಗೇ ಹಲವರ ಸಂಸಾರ ಸಾಗುತ್ತಿದೆ. ಯಾಕೆ ಹೀಗಾಗುತ್ತಿದೆ? ಇದರ ಅಸಲಿಯತ್ತೇನು? ಅರ್ಥಮಾಡಿಕೊಳ್ಳಲು ಹೋದರೆ ಬೇರೆಯದೇ ಪ್ರಪಂಚಕ್ಕೆ ಅದು ದಾರಿಯಾಗುತ್ತದೆ. ಅದನ್ನೆಲ್ಲ ಬರೆಯ ಹೊರಟರೆ ಅದೊಂದು ಕಾದಂಬರಿ ಮೀರಿದ ಮಹಾಕಾವ್ಯವೂ ಆಗಬಹುದು. ಸದ್ಯಕ್ಕೆ ಇಷ್ಟು ಸಾಕಲ್ಲವೇ? 
 

Latest Videos
Follow Us:
Download App:
  • android
  • ios