Asianet Suvarna News Asianet Suvarna News

14 ಆಪರೇಷನ್​, 65 ಬಾರಿ ಡಿಟಾಕ್ಸ್​: ಖಿನ್ನತೆಗೆ ಜಾರಿದ್ದ 'ಫ್ರೆಂಡ್ಸ್'​ ನಟ ಮ್ಯಾಥ್ಯು ಬದುಕಿನ ಕರಾಳ ಅಧ್ಯಾಯ!

ಕೋಟ್ಯಂತರ ಫ್ಯಾನ್ಸ್​ ಇದ್ದರೂ ಒಂಟಿತನಕ್ಕೆ ಬಲಿಯಾಗಿ ಜೀವನದುದ್ದಕ್ಕೂ ನೋವನ್ನುಂಡ 'ಫ್ರೆಂಡ್ಸ್'​ ನಟ ಮ್ಯಾಥ್ಯು ಕೊನೆಯುಸಿರೆಳೆದಿದ್ದಾರೆ.  14 ಆಪರೇಷನ್​, 65 ಬಾರಿ ಡಿಟಾಕ್ಸ್ ಮಾಡಿಸಿಕೊಂಡಿದ್ದ ನಟನ ಕರಾಳ ಕಥೆಯಿದು.
 

Actor Matthew Perry Best Known As Chandler Bing Of Friends Dies suc
Author
First Published Oct 29, 2023, 12:15 PM IST

ಅಮೆರಿಕದ ಜನಪ್ರಿಯ ಟೆಲಿವಿಷನ್​ ಸೀರಿಸ್​ ‘ಫ್ರೆಂಡ್ಸ್​’ (Friends) ಮೂಲಕ ವಿಶ್ವ ಖ್ಯಾತಿ ಗಳಿಸಿದ್ದ ನಟ ನಟ ಮ್ಯಾಥ್ಯು ಪೆರ್ರಿ ಕೊನೆಯುಸಿರೆಳೆದಿದ್ದಾರೆ.  ಹಾಟ್​ ಟಬ್​ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರ ಸಾವಿನ ಬಗ್ಗೆ ಅನುಮಾನ ಇದ್ದರೂ ಇವರದ್ದು ಕರಾಳ ಬದುಕು. ‘ಫೂಲ್ಸ್​ ರಶ್​ ಇನ್​’, ‘ದಿ ಹೋಲ್​ ನೈನ್​ ಯಾರ್ಡ್ಸ್​’ ಸೇರಿದಂತೆ ಕೆಲವು ಹಾಲಿವುಡ್​ ಸಿನಿಮಾಗಳಲ್ಲಿಯೂ ನಟಿಸಿ ಅಸಂಖ್ಯ ಅಭಿಮಾನಿಗಳನ್ನು ಪಡೆದಿದ್ದ ನಟನ ಬದುಕು ಮಾತ್ರ ಕೊನೆಯವರೆಗೂ ಹೋರಾಟವೇ. ಇವರಿಗೆ 49 ವರ್ಷ ವಯಸ್ಸಾಗಿದ್ದಾಗ ನಡೆದ ಸರ್ಜರಿ ಸಮಯದಲ್ಲೇ ಇವರ ಹೃದಯ 5 ನಿಮಿಷ ಸ್ಥಗಿತಗೊಂಡಿತ್ತು. ಬಳಿಕ ಇವರಿಗೆ ಎರಡನೇ ಬದುಕು ದೊರಕಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಜೀವನ್ಮರಣ ಹೋರಾಟ ನಡೆಸಿದ್ದರು. ಆದರೆ ಇವರು ಸುಮಾರು 30 ವರ್ಷಗಳವರೆಗೆ ಹೋರಾಟ ಬದುಕೇ ನಡೆಸಿದ್ದವರು. ಸಾವಿಗೂ ಮುನ್ನ ಅವರು ಕೊನೆಯದಾಗಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಶೇರ್​ ಮಾಡಿದ್ದಾರೆ. ಸ್ವಿಮ್ಮಿಂಗ್​ ಫೂಲ್​ನಲ್ಲಿ ಅವರು ಮುಳುಗಿರುವುದನ್ನು ನೋಡಬಹುದು. ಕಗ್ಗತ್ತಲ ರಾತ್ರಿಯಲ್ಲಿ ಮೇಲೆ ಚಂದ್ರನನ್ನು ನೋಡಬಹುದು. ಇದನ್ನು ನೋಡಿದರೆ ಅವರಿಗೆ ಸಾವಿನ ಸೂಚನೆ ಸಿಕ್ಕಿತ್ತಾ ಎನ್ನಿಸದೇ ಇರಲಾರದು.

 ಇವರ ಬದುಕಿನ ಕರಾಳ ಅಧ್ಯಾಯವನ್ನು  ಅವರೇ ಬರೆದ ಪುಸ್ತಕದಲ್ಲಿ ನೋಡಬಹುದು. ಅದೇನೆಂದರೆ, ಕೋಟ್ಯಂತರ ಅಭಿಮಾನಿಗಳಿದ್ದರೂ ಜೀವನದಲ್ಲಿ ಒಂಟಿತನ ಕಾಡುತ್ತಿತ್ತು. ಇದರಿಂದ ಅವರು ಖಿನ್ನತೆಗೆ ಜಾರಿ  ಮದ್ಯಪಾನ ಮತ್ತು ಡ್ರಗ್ಸ್‌ ದಾಸರಾಗಿದ್ದರಂತೆ. ಮ್ಯಾಥ್ಯೂ ಪೆರ್ರಿ ಅವರಿಗೆ ಮದ್ಯಪಾನ ಮತ್ತು ಇತರೆ ಚಟಗಳು ಇದ್ದವು. ನಾನು 14ನೇ ವರ್ಷದಲ್ಲಿಯೇ ಕುಡಿಯಲು ಆರಂಭಿಸಿದೆ. ನನಗೆ ಅರ್ಥವಾಗುವ ಮೊದಲೇ ಮದ್ಯಪಾನ ನನಗೆ ಹಾನಿ ಮಾಡಲು ಆರಂಭಿಸಿತ್ತು. ಕುಡಿತದ ಚಟದಂತೆಯೇ ಇನ್ನೊಂದು ಚಟ ನಟನೆ ಎಂದು ಬರೆದುಕೊಂಡಿದ್ದಾರೆ.

ಪುನೀತ್​ ಪುಣ್ಯಸ್ಮರಣೆ: ಓದಲು-ಬರೆಯಲು ಬರದಿದ್ರೂ ಡೈಲಾಗ್​ ಹೇಳಿದ್ದ ಅಪ್ಪು- ನೆನಪು ಮೆಲುಕು ಹಾಕಿದ ಅಕ್ಕ 

ಅಂದಹಾಗೆ ಮ್ಯಾಥ್ಯೂ ಪೆರ್ರಿ ಅವರು  14 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮದ್ಯಪಾನದ ಚಟದಿಂದ 65 ಬಾರಿ ಡಿಟಾಕ್ಸ್‌ ಮಾಡಲಾಗಿತ್ತು. 30 ವರ್ಷಗಳ ಕಾಲ ವಾರಕ್ಕೆ ಎರಡು ಬಾರಿ ಥೆರಪಿ ನಡೆಯುತ್ತಲೇ ಇತ್ತು. ಇವರು ತಮ್ಮ ಜೀವನದಲ್ಲಿ ಆರು ಸಾವಿರಕ್ಕೂ ಅಧಿಕ ಸಲ  ಮದ್ಯವರ್ಜನ ಸಭೆಗಳಲ್ಲಿ ಪಾಲ್ಗೊಂಡಿದ್ದರು.  ಬದುಕಿನ ಅರ್ಧಭಾಗವನ್ನು ಆಸ್ಪತ್ರೆಯಲ್ಲಿಯೇ ಕಳೆದಿದ್ದರು. ಒಂಟಿ ಜೀವನದಿಂದಾಗಿ  ನಿದ್ರಾಹೀನತೆ ಕಾಡಿತ್ತು. ತಮ್ಮ ಜೀವನದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚು ದೀರ್ಘ ನಿದ್ದೆ ನಾನು ಮಾಡಿಲ್ಲ ಎಂದು ಅವರ ಪುಸ್ತಕದಲ್ಲಿ ಬರೆಯಲಾಗಿದೆ. 

ಅಂದಹಾಗೆ ಮ್ಯಾಥ್ಯೂ ಪೆರ್ರಿ ಅವರು ತುಂಬಾ ಫೇಮಸ್​ ಆಗಿದ್ದು, ಅವರು ಫ್ರೆಂಡ್ಸ್​ ಸೀರಿಸ್​ ಮೂಲಕ. 10 ಸೀಸನ್​ಗಳಲ್ಲಿ ‘ಫ್ರೆಂಡ್ಸ್​’   ಪ್ರಸಾರ ಕಂಡಿತ್ತು. ಅದರಲ್ಲಿ ಮ್ಯಾಥ್ಯು ಪೆರ್ರಿ ಮಾಡಿದ್ದ ಚಾಂಡ್ಲರ್​ ಬೇಂಗ್​ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಆ ಮೂಲಕ ವಿಶ್ವಾದ್ಯಂತ ಅವರು ಖ್ಯಾತಿ ಪಡೆದಿದ್ದರು. ಅಮೆರಿಕದ ಕಿರುತೆರೆ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದರು.  ಹಾಟ್​ ಟಬ್​ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ.

Karachi to Noida: ಪ್ರೀತಿಗಾಗಿ ಪಾಕ್​ನಿಂದ ಬಂದ 4 ಮಕ್ಕಳ ತಾಯಿ ಸೀಮಾ ಹೈದರ್​ 'ರಾ' ಏಜೆಂಟ್​? ಏನಿದು ಟ್ವಿಸ್ಟ್​?

 

 
 
 
 
 
 
 
 
 
 
 
 
 
 
 

A post shared by Matthew Perry (@mattyperry4)

Follow Us:
Download App:
  • android
  • ios