ಎಲ್ಲೇ ನೋಡಿದರೂ ಇದೀಗ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಡೆದ ಅಂಕಗಳದ್ದೇ ಸುದ್ದಿ. ನಿನಗೆಷ್ಟು, ನಿಮ್ಮ ಮಕ್ಕಳು ಟಾಪರ್‌ ಆ? ಅವರು ಮಕ್ಕಳು ಫೇಲ್ ಆದ್ರಾ? ಇದೇ ಮಾತು... ಇವರ ನಡುವೆ ನಟ ಮಾಧವನ್‌ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿ, ತಮ್ಮ ಮಾರ್ಕ್ಸ್ ರಿವೀಲ್ ಮಾಡಿದ್ದಾರೆ. ಆ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಯತ್ನಿಸಿದ್ದಾರೆ.

ಬರ್ತ್‌ಡೇ ಬಾಯ್‌ ಮಾಧವನ್‌ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಸಿದ ಕತೆ ಗೊತ್ತಾ?

ಮಾಧವನ್ ಮಾರ್ಕ್ಸ್‌:
'ಯಾರೆಲ್ಲಾ ಬೋರ್ಡ್‌ ಎಕ್ಸಾಂ ಫಲಿತಾಂಶ ಪಡೆದುಕೊಂಡಿದ್ದೀರಾ...ಅಂದುಕೊಂಡಷ್ಟು ಮಾರ್ಕ್ಸ್‌ ಗಳಿಸಿದವರಿಗೆ ನನ್ನ ಶುಭಾಶಯಗಳು. ಯಾರು ಕಡಿಮೆ ಪಡೆದರು ಅವರಿಗೆ ಒಂದು ಕಿವಿ ಮಾತು. ನನಗೆ ಬೋರ್ಡ್ ಪರೀಕ್ಷೆಯಲ್ಲಿ ಕೇವಲ 58 % ಬಂದಿತ್ತು. ಆದರೆ  ಆಗಿನ್ನೂ ನನ್ನ ಗೇಮ್‌ ಸ್ಟಾರ್ಟೇ ಆಗಿರಲಿಲ್ಲ. ಅಲ್ಲಿಂದ ಸ್ಟಾರ್ಟ್‌ ಆಯ್ತು ಗೆಳೆಯರೇ,' ಎಂದು ಟ್ಟೀಟ್‌ ಮಾಡಿದ್ದಾರೆ. 

ಈ ಸಾಲುಗಳ ಜೊತೆ ತಮ್ಮ ಹಳೇ ಸಿನಿಮಾದ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

 

ಅಭಿಮಾನಿಗಳಿಗೆ ಪ್ರೋತ್ಸಾಹ:
ಮಾಧವನ್‌ ತಮ್ಮ ಮಾರ್ಕ್ಸ್‌ ಬಹಿರಂಗ ಪಡಿಸುವ ಮೂಲಕ ಜೀವನದಲ್ಲಿ ಸಾಧಿಸುವುದು ತುಂಬಾನೇ ಇದೆ. ಮಾರ್ಕ್ಸ್‌ಗಳಿಂದ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಇದು ಕಡಿಮೆ ಅಂಕ ಪಡೆದಿರುವ ಮಕ್ಕಳಲ್ಲಿ ಧೈರ್ಯ ತುಂಬುವಂತಿದೆ.

ಮನರಂಜನೆ, ಸಮಾಜಕ್ಕೆ ಸ್ಪಂದನೆ: ಮಾಧವನ್ ಎಂಬ ನಟನ ವಿಶೇಷ ಸಾಧನೆ

ಆಮೀರ್ ಖಾನ್ ಹಾಗೂ ಮಾಧವನ್ ನಟಿಸಿರುವ, ಚೇತನ್ ಭಗತ್ ಕಾದಂಬರಿಯಾಧಾರಿತ ತ್ರಿ ಈಡಿಯಟ್ಸ್ ಇಂಥದ್ದೇ ಕಥೆ ಇರುವ ಚಿತ್ರವಾಗಿದ್ದು, ಪರೀಕ್ಷೆಯಲ್ಲಿ ಗಳಿಸುವ ಅಂಕಕ್ಕಿಂತಲೂ ಜೀವದಲ್ಲಿ ಸಾಧಿಸಬೇಕಾಗಿರುವುದು ಬಹಳ ಇದೆ ಎಂಬ ಸಂದೇಶ ಸಾರುತ್ತದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಬಾರದಿದ್ದರೂ, ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಚಿತ್ರದಲ್ಲಿ ನವೀರಾಗಿ ತೋರಿಸಲಾಗಿದೆ. 

ಅಂಕಗಳು ಬಂದರೆ ಓಕೆ. ಬಾರದಿದ್ದರೆ ಏನು ಮಾಡುವುದು? ಪ್ರಪಂಚ ವಿಶಾಲವಾಗಿದೆ. ಇದೀಗ ವಿಭಿನ್ನ ಕೋರ್ಸ್‌ಗಳೂ ಇವೆ. ತಮ್ಮಿಷ್ಟದ ಕೋರ್ಸನ್ನೂ ಮಾಡಬಹುದು.