ಪ್ಯಾನ್ ಇಂಡಿಯಾ ಏನು ಹೊಸದಲ್ಲ; KGF, RRRಗೂ ಮೊದಲೇ ಇತ್ತು- ಕಮಲ್ ಹಾಸನ್

ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಪ್ಯಾನ್ ಇಂಡಿಯಾ(Pan-India) ಪದದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಲಿವುಡ್ ವರ್ಸಸ್ ಸೌತ್ ಎನ್ನುವ ಚರ್ಚೆಯೊ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಮೊದಲ ಬಾರಿಗೆ ಕಮಲ್ ಹಾಸನ್(Kamal Haasan) ಮೌನ ಮುರಿದಿದ್ದಾರೆ. ಪ್ಯಾನ್ ಇಂಡಿಯಾ ಎನ್ನುವ ಪದ ಹೊಸದೇನಲ್ಲ, 1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿತ್ತು ಎಂದು ಹೇಳಿದ್ದಾರೆ.

Actor Kamal Haasan says pan-India films like KGF and RRR are nothing new sgk

ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಪ್ಯಾನ್ ಇಂಡಿಯಾ(Pan-India) ಪದದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಲಿವುಡ್ ವರ್ಸಸ್ ಸೌತ್ ಎನ್ನುವ ಚರ್ಚೆಯೊ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಮೊದಲ ಬಾರಿಗೆ ಕಮಲ್ ಹಾಸನ್(Kamal Haasan) ಮೌನ ಮುರಿದಿದ್ದಾರೆ. ಪ್ಯಾನ್ ಇಂಡಿಯಾ ಎನ್ನುವ ಪದ ಹೊಸದೇನಲ್ಲ, 1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿತ್ತು ಎಂದು ಹೇಳಿದ್ದಾರೆ. 1960ರಲ್ಲಿ ಬಂದ ಕೆ ಆಸಿಫ್ ಅವರ ಕ್ಲಾಸಿಕ್ ಮೊಘಲ್ ಎ ಅಜಮ್ ಮತ್ತು 1965ರಲ್ಲಿ ಬಂದ ಮಲಯಾಳಂನ ಚೆಮ್ಮೀನ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದವು ಎಂದು ಹೇಳಿದ್ದಾರೆ.

ಅಂದಹಾಗೆ ಕಮಲ್ ಹಾಸನ್ ಅವರು ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ತಮಿಳಿನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ ಸಿನಿಮಾಗಳನ್ನು ಮಾಡಿದ್ದಾರೆ. ಕಮಲ್ ಹಾಸನ್ ಸದ್ಯ ವಿಕ್ರಮ್ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಸಕಲಕಲಾವಲ್ಲಭ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದ ಸಕ್ಸಸ್ ಸಿನಿಮಾ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳು ಯಾವಾಗಲು ಇರುತ್ತವೆ ಎಂದು 67 ವರ್ಷದ ನಟ ಕಮಲ್ ಹಾಸನ್ ಹೇಳಿದ್ದಾರೆ. 'ಶಾಂತರಾಮ್ ಪ್ಯಾನ್ ಇಂಜಿಯಾ ಚಿತ್ರಗಳನ್ನು ಮಾಡಿದ್ದಾರೆ. ಪಡೋಸನ್ ಕೂಡ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದೆ. ಮೆಹಮೂದ್ ಜಿ ಚಿತ್ರದಲ್ಲಿ ಬಹುತೇಕ ತಮಿಳು ಮಾತನಾಡುತ್ತದ್ದರು. ನೀವು ಮೋಘಲ್ ಎ ಅಜಮ್ ಅನ್ನು ಏನೆಂದು ಕರೆಯುತ್ತೀರಿ. ಇದು ನನ್ನ ಪಾಲಿಗೆ ಪ್ಯಾನ್ ಇಂಡಿಯಾ ಸಿನಿಮಾ. ಪ್ಯಾನ್ ಇಂಡಿಯಾ ಏನು ಹೊಸದೇನಲ್ಲ. ನಮ್ಮ ದೇಶ ವಿಶಿಷ್ಟವಾಗಿದೆ. ಅಮೆರಿಕಾಗಿಂತ ವಿಭಿನ್ನವಾಗಿದೆ. ನಾವು ವಿವಧ ಭಾಷೆಗಳನ್ನು ಮಾತನಾಡುತ್ತೇವೆ. ಆದರೆ ನಾವು ಒಗ್ಗಟ್ಟಾಗಿದ್ದೇವೆ. ಅದೆ ನಮ್ಮ ದೇಶದ ಸೌಂದರ್ಯ. ನಾವು ಯಾವಾಗಲು ಪ್ಯಾನ್ ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿರುತ್ತೇವೆ' ಎಂದಿದ್ದಾರೆ.

ಅಕ್ಷಯ್ ಕುಮಾರ್ v/s ಕಮಲ್ ಹಾಸನ್; ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮೆಗಾವಾರ್, ಗೆಲ್ಲೋರ್ಯಾರು?

'ಪ್ಯಾನ್ ಇಂಡಿಯಾ ಎನ್ನುವುದು ಸಿನಿಮಾ ಎಷ್ಟು ಉತ್ತಮವಾಗಿದೆ ಮತ್ತು ಸಾರ್ವತ್ರಿಕವಾಗಿ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ನಂತರ ಅದನ್ನು ಪ್ರತಿಯೊಬ್ಬರು ನೋಡುತ್ತಾರೆ. ಇದೇ ಸಮಯದಲ್ಲಿ ಆರ್ ಆರ್ ಆರ್ ಮತ್ತು ಕೆಜಿಎಫ್ ಸಿನಿಮಾಗಳ ಸಕ್ಸಸ್ ಬಗ್ಗೆಯೂ ಮಾತನಾಡಿದ್ದಾರ. ನಾನು ಭಾರತೀಯ. ನೀವು ಏನು ತಾಜ್ ಮಹಲ್ ನನ್ನದು, ಮಧುರೈೈ ದೇವಸ್ಥಾನ ನಿಮ್ಮದು. ಕಾಶ್ಮೀರ ನನ್ನದು ಎಂಬಂತೆ ಕನ್ಯಾಕುಮಾರಿಯೂ ನಿನ್ನದಾಗಿದೆ' ಎಂದು ಹೇಳಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಖ್ಯಾತ ನಟ ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ

ಕಮಲ್ ಹಾಸನ್ ಸದ್ಯ ವಿಕ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕಮಲ್ ಹಾಸನ್ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ವಿಕ್ರಮ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ವಿಜಯ್ ಸೇತುಪತಿ, ಫಹಾದ್ ಫೀಸಿಲ್, ಆಂಟೋನಿ ವರ್ಗೀಸ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸಿದ್ದಾರೆ.

 

Latest Videos
Follow Us:
Download App:
  • android
  • ios