ಅನಿಲ್ ಕಪೂರ್ ಜೊತೆ ಫೋಟೋ ಅಪ್ಲೋಡ್ ಮಾಡಿದ ಜಾನ್ ಎಫರ್. ನೆಟ್ಟಿಗರು ಫುಲ್ ಶಾಕ್....

ಬಹುಭಾಷಾ ನಟ ಅನಿಲ್ ಕಪೂರ್ (Anil Kapoor) ಅವರ ತದ್ರೂಪಿಯೊಬ್ಬರ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜತ್ತಿನಲ್ಲಿ ಒಂದೇ ರೀತಿಯಲ್ಲಿ ಏಳು ಜನರಿರುತ್ತಾರೆ ಎನ್ನುತ್ತಾರೆ. ಏಳು ಜನರು ಇದ್ದಾರೂ ಇಲ್ವೋ ಗೊತ್ತಿಲ್ಲ ಆದರೀಗ ಅನಿಲ್ ಕಪೂರ್‌ ಅವರ ಒಬ್ಬ ತದ್ರೂಪಿ ಸಿಕ್ಕಿದ್ದಾರೆ. ಅವರೇ ಜಾನ್ ಎಫರ್.

ಹೌದು! ಸೋಷಿಯಲ್ ಮೀಡಿಯಾ ಪಬ್ಲಿಕ್ ಫಿಗರ್, ಬಾಡಿ ಬಿಲ್ಡರ್ ಮತ್ತು ಡಯಟ್ ಕೋಚ್ ಆಗಿ ಕೆಲಸ ಮಾಡುತ್ತಿರುವ ಜಾನ್ ಎಫರ್ ಕೆಲವು ದಿನಗಳ ಹಿಂದೆ ತಮ್ಮ ಬಾಡಿ ಬಿಲ್ಡ್‌ ಮಾಡಿರುವ ಫೋಟೋ ಪಕ್ಕದಲ್ಲಿ ಅನಿಲ್ ಕಪೂರ್ ಫೋಟೋ ಹಾಕಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ನಾನು ಬಾಲಿವುಡ್‌ನಿಂದ ಕರೆ ಬರಲು ಕಾಯುತ್ತಿರುವೆ. ಏನಿದೆಲ್ಲಾ ಅನಿಲ್‌ ಕಪೂರ್‌? ನನ್ನ ಮಗನೂ ಗ್ರೇಟ್ ಆಕ್ಟರ್ ಎಂದು ನನ್ನ ತಂದೆ ಹೇಳುತ್ತಾರೆ' ಎಂದು ಜಾನ್ ಎಫರ್ ಬರೆದುಕೊಂಡಿದ್ದಾರೆ. 

ಬೆಂಗಳೂರಲ್ಲೇ ಇದ್ದಾರೆ ರಾಕಿಂಗ್ ಸ್ಟಾರ್ ಯಶ್ ತದ್ರೂಪಿ!

ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಫೋಟೋ ವೈರಲ್ ಆಗಿದೆ. ಏನಿದು ಇಬ್ಬರೂ ಸೇಮ್ ಸೇಮ್ ಎಂದು ಒಬ್ಬರು ಹೇಳಿದ್ದರೆ ಮತ್ತೊಬ್ಬರು ಅನಿಲ್ ಕಪೂರ್ ಮಗನೂ ನೋಡಲು ಈ ರೀತಿ ಇಲ್ಲ ನೀವು ಸೂಪರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯಾವಾಗಿ ಸ್ಟಾರ್ ಸೆಲೆಬ್ರಿಟಿಗಳ ರೀತಿ ವೇಷ ಧರಿಸಿ ಮನೋರಂಜನೆ ನೀಡಿ ಕೆಲವು ಜೀವನ ನಡೆಸುತ್ತಾರೆ ಇವರ ನಡುವೆ ತದ್ರೂಪಿಗಳು ಸಿಗುವುದು ತುಂಬಾನೇ ಕಷ್ಟ. ಅನಿಲ್‌ ಮಾತ್ರವಲ್ಲ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ತದ್ರೂಪಿಗಳು ವೈರಲ್ ಆಗಿದ್ದಾರೆ.

View post on Instagram

ಅಮಿತಾಬ್‌ ಬಚ್ಚನ್ ತದ್ರೂಪಿ:

ಅಮಿತಾಭ್ ಬಚ್ಚನ್ ಅವರ ತದ್ರೂಪಿ (doppelganger) ಶಶಿಕಾಂತ್ ಪೆಡ್ವಾಲ್ ಅವರು ಪಾರ್ಕ್‌ನಲ್ಲಿ ಅಡ್ಡಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಜನರು ಅವರ ಹೋಲಿಕೆಯನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ.ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಭಾರತ ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಅಮಿತಾಬ್ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಬಿಳಿ ಶೂ ಧರಿಸಿದ್ದು, ಬೂದು ಬಣ್ಣದ ಅಥ್ಲೆಟಿಕ್‌ ಉಡುಪಿನೊಂದಿಗೆ ಉದ್ಯಾನವನದಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ. ಬಚ್ಚನ್ ಅವರಂತೆ ಗಡ್ಡ ಬಿಟ್ಟಿದ್ದ ಅವರು ನಡಿಗೆಯೂ ಕೂಡ ಬಿಗ್‌ ಬೀಯನ್ನೇ ಹೋಲುತ್ತಿತ್ತು. ಹೀಗಾಗಿ ಜನ ಇವರು ನಿಜವಾಗಿಯೂ ಶೋಲೆ ಸಿನಿಮಾದ ಹೀರೋನೇ ಎಂದು ಆಶ್ಚರ್ಯಪಟ್ಟರು ಆದರೆ ನಂತರದಲ್ಲಿ ಇದು ಅವರ ತದ್ರೂಪಿ ಎಂಬುದನ್ನು ಅರಿತುಕೊಂಡರು.ಇನ್ನು ಈ ಶಶಿಕಾಂತ್ ಪೆಡ್ವಾಲ್ ಅವರು ಅಮಿತಾಬ್ ಬಚ್ಚನ್ ಅವರ ಐಕಾನಿಕ್ 1987 ರ ಚಲನಚಿತ್ರ ಶಾಹೆನ್‌ಶಾದಿಂದ (Shahenshah) 'ಅಂಧೇರಿ ರಾತನ್ ಮೇ'(Andheri Raaton Mein) ಹಾಡುಗಳವರೆಗೆ ಹಲವು ಹಾಡುಗಳಿಗೆ ರೀಲ್ಸ್‌ ಮಾಡಿ ಫೇಮಸ್‌ ಆಗಿದ್ದಾರೆ.

ಆಲಿಯಾ ಭಟ್ ತದ್ರೂಪಿ:

ಬಾಲಿವುಡ್‌ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಆಲಿಯಾ ಭಟ್‌ (Alia Bhat) ರೀತಿ ಸೋಷಿಯಲ್ ಮೀಡಿಯಾದಲ್ಲಿ ಸೆಲೆಸ್ಟಿ (Celesti) ಎಂಬ ಯುವತಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ದಿಲ್ ತೋ ಪಾಗಲ್ ಹೈ (Dil toh pagal hai) ಹಾಡಿಗೆ ಆಲಿಯಾ ಭಟ್‌ ಅವರ ಗಂಗೂಬಾಯಿ ಕಾಠಿವಾಡಿ ಲುಕ್‌ನಲ್ಲಿ ರೆಡಿಯಾಗಿ ಡ್ಯಾನ್ಸ್‌ ಮಾಡಿದ ವಿಡಿಯೋ ಹೊಸ ಸೆನ್ಸೇಷನ್‌ ಕ್ರಿಯೇಟ್ ಮಾಡಿದೆ. 

ಐಶ್ವರ್ಯಾ ರೈ ತದ್ರೂಪಿ:

ಬಾಲಿವುಡ್ ನಟ ಐಶ್ವರ್ಯಾ ರೈ ಬಚ್ಚನ್ ಅವರ ಕಾಪಿಯಂತಿರೋ ಸುಂದರಿಯರ ಪಟ್ಟಿಗೆ ಮತ್ತೊಂದು ಸೇರ್ಪಡೆ ಸಿಕ್ಕಿದೆ.ಹಿಂದಿನ ಮಿಸ್ ವರ್ಲ್ಡ್‌ನ ಹೋಲಿಕೆ ಇರೋ ಮಾನಸಿ ನಾಯಕ್, ಅಮೃತ ಅಮ್ಮು ಮತ್ತು ಮಹ್ಲಘಾ ಜಬೆರಿ ನಂತರ ಇದೀಗ ನೆಟ್ಟಿಗರಯ ಜನರ ಗಮನ ಸೆಳೆದದ್ದು ಆಮ್ನಾ ಇಮ್ರಾನ್.ಆಮ್ನಾ ಪಾಕಿಸ್ತಾನದ ಸೌಂದರ್ಯ ಬ್ಲಾಗರ್ ಆಗಿದ್ದು, ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್.

View post on Instagram