Asianet Suvarna News Asianet Suvarna News

Pushpa: ಮಾಸ್ ಅವತಾರದ ಪೋಸ್ಟರ್ ಹಂಚಿಕೊಂಡ ನಟ ಅಲ್ಲು ಅರ್ಜುನ್

ಪುಷ್ಪ ಚಿತ್ರದ ಹೊಸ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್‌ನಲ್ಲಿ ಹಣೆಗೆ ಕೆಂಪು ತಿಲಕವನ್ನಿಟ್ಟುಕೊಂಡು ಸನ್‌ಗ್ಲಾಸ್ ತೊಟ್ಟು, ಕುತ್ತಿಗೆಗೆ ಚಿನ್ನದ ಸರಗಳನ್ನು ಹಾಕಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

Actor Allu Arjun shared a new poster of Pushpa Movie gvd
Author
Bangalore, First Published Nov 14, 2021, 5:05 PM IST

ಸುಕುಮಾರ್ (Sukumar) ಮತ್ತು 'ಯೂತ್ ಐಕಾನ್' ಅಲ್ಲು ಅರ್ಜುನ್ (Allu Arjun)  ಕಾಂಬಿನೇಷನ್​ನಲ್ಲಿ ಸಿದ್ಧವಾಗಿರುವ 'ಪುಷ್ಪ' (Pushpa) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಪುಷ್ಪ' ಕೂಡ ಮುಂಚೂಣಿಯಲ್ಲಿದೆ. ಈಗಾಗಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಾಗೂ ಚಿತ್ರದ ಹಾಡುಗಳನ್ನು ಚಿತ್ರತಂಡ ಒಂದೊಂದಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಚಿತ್ರದ ನಾಯಕ ಅಲ್ಲು ಅರ್ಜುನ್ ಚಿತ್ರದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಹೌದು! ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ  (Instagram) ಅಲ್ಲು ಅರ್ಜುನ್, 'ಪುಷ್ಪ' ಚಿತ್ರದ ನನ್ನ ಫೇವರೇಟ್ ಹಾಡು 'ಹೇ ಮಗ ಇದು ನನ್ ಜಾಗ' ಎಂಬ ಹಾಡು ನವೆಂಬರ್ 19ರಂದು ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಸ್ಪೆಷಲ್ ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್‌ನಲ್ಲಿ ಹಣೆಗೆ ಕೆಂಪು ತಿಲಕವನ್ನಿಟ್ಟುಕೊಂಡು ಸನ್‌ಗ್ಲಾಸ್ ತೊಟ್ಟು, ಕುತ್ತಿಗೆಗೆ ಚಿನ್ನದ ಸರಗಳನ್ನು ಹಾಕಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಹೊಸ ಪಾತ್ರಗಳನ್ನು ಪರಿಚಯಿಸಿತ್ತು.

'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ

ಈ ಚಿತ್ರದಲ್ಲಿ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಕೂಡಾ ರಗಡ್ ಆಗಿದೆ. ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಜೊತೆಗೆ ಸುನೀಲ್ ಕೂಡಾ ಖಳನಾಯಕನಾಗಿ ಅಬ್ಬರಿಸಿದ್ದಾರೆ.  ಈ ಬಗ್ಗೆ ಸುನೀಲ್, ಈ ಪಾತ್ರದ ನಟನೆಗೆ ಅವಕಾಶ ಕೊಟ್ಟಂತಹ ಸುಕ್ಕು ಡಾರ್ಲಿಂಗ್ ಮತ್ತು ಅಲ್ಲು ಅರ್ಜುನ್ ಗಾರು ಅವರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ಬರೆದು ತಮ್ಮ ಪಾತ್ರದ ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ತೆಲುಗು (Telugu) ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ ಅನಸೂಯ ಭಾರಧ್ವಾಜ್ (Anasuya Bharadwaj) ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ 'ಪುಷ್ಪ' ಚಿತ್ರತಂಡ ಇನ್‌ಸ್ಟಾಗ್ರಾಮ್‌ನಲ್ಲಿ, ಅವಳು ದುರಹಂಕಾರಿ ಮತ್ತು ಹೆಮ್ಮೆಯ ವ್ಯಕ್ತಿತ್ವ. ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ ಎಂದು ಕ್ಯಾಪ್ಷನ್ ಬರೆದು ಅವರ ಲುಕ್‌ನ ಪೋಸ್ಟರ್‌ನ್ನು ಶೇರ್ ಮಾಡಿಕೊಂಡಿದ್ದರು. 'ರಂಗಸ್ಥಳಂ' ಚಿತ್ರದ ರಂಗಮ್ಮತ್ತೆ ಪಾತ್ರ ಅನುಸೂಯ ಅವರಿಗೆ ತುಂಬಾ ಖ್ಯಾತಿಯನ್ನು ತಂದುಕೊಟ್ಟಿದೆ.

'ಪುಷ್ಪ' ಚಿತ್ರದ ಹೊಸ ಪೋಸ್ಟರ್ ರಿಲೀಸ್: ದಾಕ್ಷಾಯಿಣಿ ಲುಕ್‌ನಲ್ಲಿ ಅನಸೂಯ

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು,  'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 17ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
 

Follow Us:
Download App:
  • android
  • ios