ಆಕ್ಸಿಜನ್ ಸಿಲಿಂಡರ್, ರೇಷನ್, ವೆಂಟಿಲೇಟರ್; ರಿಯಲ್ ಹೀರೋ ಅಜಯ್ ದೇವಗನ್
ಕೊರೋನಾ ಸಂಕಷ್ಟ/ ಸ್ಲಂ ಜನರ ನೆರವಿಗೆ ನಿಂತ ಅಜಯ್ ದೇವಗನ್/ ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್ ಕೊಡುಗೆ/ ಬಾಲಿವುಡ್ ನಾಯಕನ ಮಾದರಿ ಕೆಲಸ
ಮುಂಬೈ(ಜೂ. 02) ಕೊರೋನಾ ಸಂಕಷ್ಟದ ಸಮಯದಲ್ಲಿ ಸೆಲೆಬ್ರಿಟಿಗಳು ಸಂಕಷ್ಟದಲ್ಲಿ ಇರುವವರ ನೆರವಿಗೆ ನಿಲ್ಲುತ್ತಿದ್ದಾರೆ. ಈ ಸಾರಿ ಬಾಲಿವುಡ್ ನಾಯಕ ಅಜಯ್ ದೇವಗನ್ ಸರದಿ.
ಮುಂಬೈನ ಧಾರವಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ನಟ ಅಜಯ್ ದೇವಗನ್ ಆಕ್ಸಿಟನ್ ಸಿಲಿಂಡರ್ ಮತ್ತು ಎರಡು ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡಿದ್ದಾರೆ. ಈ ಪ್ರದೇಶವನ್ನು ಏಷ್ಯಾದ ಅತಿದೊಡ್ಡ ಸ್ಲಂ ಎಂದೇ ಕರೆಯಲಾಗುತ್ತದೆ. 2.5 ಕಿಮೀ ವ್ಯಾಪ್ತಿಯಲ್ಲಿ ಸುಮಾರು 6.5 ಲಕ್ಷ ಜನ ವಾಸವಿದ್ದಾರೆ. ಈ ಪ್ರದೇಶದಲ್ಲಿ 1500ಕ್ಕೂ ಅಧಿಕ ಕೊರೋನಾ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ.
ಮಗುವಿಗೆ ಸೋನು ಸೂದ್ ಹೆಸರಿಟ್ಟು ಧನ್ಯವಾದ ಹೇಳಿದೆ ಕಾರ್ಮಿಕೆ
ಬ್ರಿಹಾನ್ ಮುಂಬೈ ಮುಸ್ನಿಪಲ್ ಕಾರ್ಪೋರೇಶನ್ ಜತೆ ಕೈಜೋಡಿಸಿರುವ ಅಜಯಯ್ ದೇವಗನ್ ತಮ್ಮ ಪ್ರೋಡಕ್ಷನ್ ಹೌಸ್ ಹೆಸರಿನಲ್ಲಿ ಸಹಾಯ ಮಾಡಿದ್ದಾರೆ. ಅಜಯ್ ದೇವಗನ್ ಫಿಲ್ಮ್ ಫೌಂಡೇಶನ್ ಬಾಲಿವುಡ್ ನಲ್ಲಿ ಒಂದು ಸ್ಥಾನ ಪಡೆದುಕೊಂಡಿದೆ.
ಇದೇ ಪ್ರದೇಶದ ಏಳು ನೂರು ಜನರಿಗೆ ರೇಷನ್ ಕಿಟ್ ಮತ್ತು ಸುರಕ್ಷಾ ಸಾಮಗ್ರಿ ವಿತರಣೆ ಮಾಡಿದ ಮರುದಿನ ಅಜಯ್ ಈ ಮಾದರಿ ಕೆಲಸ ಮಾಡಿದ್ದಾರೆ.
ಸಲ್ಮಾನ್ ಖಾನ್ ಹಿಂದಿಕ್ಕಿದ ಸೋನು ಸೂದ್, ಸಾಕ್ಷ್ಯ ಇಲ್ಲಿದೆ
ಧಾರವಿಯಲ್ಲಿ ಕೊರೋನಾ ರುದ್ರತಾಂಡವವಾಡಿದೆ. ಅಜಯ್ ಮಾತ್ರವಲ್ಲದೇ ಅನೇಕ ಜನರು ಇಲ್ಲಿನ ಜನರ ಕಷ್ಟಕ್ಕೆ ನೆರವಾಗಿದ್ದಾರೆ. ನಾನು ಇನ್ನು ಹೆಚ್ಚಿನ ಸಹಾಯ ನೀಡಲು ಬಯಸುತ್ತೇನೆ ಎಂದು ಅಜಯ್ ಹೇಳಿದ್ದಾರೆ.
ಸಿನಿಮಾ ಕಲಾವಿದರ ಕುಟುಂಬಕ್ಕೆ ನೆರವಾಗಲು ಅಜಯ್ ದೇವಗನ್ 51 ಲಕ್ಷ ರು. ನೀಡಿದ್ದರು. ಸಿನಿಮಾ ಇಂಡಸ್ಟ್ರಿಯ ದಿನಗೂಲಿ ಕೆಲಸಗಾರರ ನೆರವಿಗೆ ಧಾವಿಸಿದ್ದರು.