ನ್ಯೂಯಾರ್ಕ್ (ನ. 12): ನಟ ಹೃತಿಕ್ ರೋಷನ್ ಬಗ್ಗೆ ಪತ್ನಿಯ ಅತಿಯಾದ ಪ್ರೀತಿಯಿಂದ ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ದಿನೇಶ್ವರ್ ಬುದ್ಧಿದತ್ (33) ಎಂಬಾತ ತನ್ನ ಪತ್ನಿ ಡೊನ್ನೆ ಡೊಜಾಯ್ (27) ಎಂಬಾಕೆಯನ್ನು ಶುಕ್ರವಾರ ರಾತ್ರಿ ಮನೆಯಲ್ಲಿ ಚಾಕುವಿನಿಂದ ಇರಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

ಆತ್ಮಹತ್ಯೆ ಪತ್ರದಲ್ಲಿ ತಾನು ಪತ್ನಿಯನ್ನು ಹತ್ಯೆ ಮಾಡಿರುವುದನ್ನು ದಿನೇಶ್ವರ್ ಒಪ್ಪಿಕೊಂಡಿದ್ದಾನೆ. ದಿನೇಶ್ವರ್ ನೇಣಿಗೆ ಶರಣಾಗುವ ಮುನ್ನ  ಪತ್ನಿಯ ತಂಗಿಗೆ ಮೆಸೇಜ್ ಮಾಡಿ, ನಾನು ಡೊನ್ನೆಯನ್ನು ಮರ್ಡರ್ ಮಾಡಿದ್ದೇನೆ. ಮನೆ ಕೀ ಫ್ಲವರ್ ಪಾಟ್ ಕೆಳಗಿದೆ ಎಂದಿದ್ದಾನೆ. 

ಡೊನ್ನೆ ಹೃತಿಕ್ ರೋಷನ್ ದೊಡ್ಡ ಅಭಿಮಾನಿಯಾಗಿದ್ದು ಅವರ ಸಿನಿಮಾಗಳನ್ನು, ಹಾಡುಗಳನ್ನು ಹೆಚ್ಚಾಗಿ ನೋಡುತ್ತಿದ್ದರು. ಇದು ದಿನೇಶ್ವರ್‌ಗೆ ಇಷ್ಟವಾಗುತ್ತಿರಲಿಲ್ಲ. ಅತಿಯಾದ ಪೊಸೆಸಿವ್‌ನೆಸ್ ಈ ದುರಂತಕ್ಕೆ ಕಾರಣವಾಗಿದೆ. 

ರಚ್ಚುಗೂ ಇದ್ಯಂತೆ ಲವ್ ಫೆಲ್ಯೂರ್; ರಿವೀಲ್ ಮಾಡೋಕೆ ಪ್ರೇಮ್ ಬರ್ಬೇಕಾಯ್ತು!

ದಿನೇಶ್ವರ್- ಡೊನ್ನೆ ಇದೇ ವರ್ಷ ಜುಲೈನಲ್ಲಿ ಮದುವೆಯಾಗಿದ್ದರು. ಹೃತಿಕ್ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬರುತ್ತಿತ್ತು. ನನ್ನ ಗಂಡ ನನ್ನನ್ನು ಕಂಟ್ರೋಲ್ ಮಾಡುತ್ತಾನೆ, ಬೈಯುತ್ತಾನೆ, ಸಾಯಿಸುವುದಾಗಿ ಬೆದರಿಸುತ್ತಾನೆ ಎಂದು ಡೊನ್ನೆ ಆಕೆಯ ಸ್ನೇಹಿತರ ವಲಯದಲ್ಲಿ ಹೇಳಿಕೊಂಡಿದ್ದಾರೆ.