Asianet Suvarna News Asianet Suvarna News

ನಿನ್ನ ಕೈ ಹಿಡಿದು ಮುನ್ನಡೆಸಲು ನಾನಿದ್ದೇನೆ... ಅಭಿಷೇಕ್​ ಬಚ್ಚನ್​ ಭಾವನಾತ್ಮಕ ಪೋಸ್ಟ್​ ವೈರಲ್

ನಿನ್ನ ಕೈ ಹಿಡಿದು ಮುನ್ನಡೆಸಲು ನಾನಿದ್ದೇನೆ... ಅಭಿಷೇಕ್​ ಬಚ್ಚನ್​ ಭಾವನಾತ್ಮಕ ಪೋಸ್ಟ್​ ವೈರಲ್ ಆಗಿದೆ. ಅಷ್ಟಕ್ಕೂ ಈ ಮಾತನ್ನು ನಟ ಹೇಳಿದ್ದು ಯಾರಿಗೆ? ಇಲ್ಲಿದೆ ಡಿಟೇಲ್ಸ್​...
 

Abhishek Bachchans note for nephew Agastya Nanda ahead of The Archies suc
Author
First Published Dec 6, 2023, 5:30 PM IST

ನಟ ಅಭಿಷೇಕ್‌ ಬಚ್ಚನ್‌ ಹಾಗೂ ಪತ್ನಿ ಐಶ್ವರ್ಯ ರೈ ಅವರ ವಿಚ್ಛೇದನದ ಸುದ್ದಿ ಬಿ-ಟೌನ್​ನಲ್ಲಿ ಸಕತ್​ ಚರ್ಚೆಗೆ ಒಳಗಾಗುತ್ತಿದೆ. ಅಭಿಷೇಕ್​ ಅವರು ಕಾರ್ಯಕ್ರಮವೊಂದರಲ್ಲಿ ಮದುವೆಯ ಉಂಗುರ ಧರಿಸಿ ಬರಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಈ ಚರ್ಚೆ ರೆಕ್ಕೆಪುಕ್ಕ ಪಡೆಯುತ್ತಿದೆ. ಇದರ ನಡುವೆಯೇ ಅಭಿಷೇಕ್​ ಬಚ್ಚನ್​ ಅವರು, ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಅಷ್ಟಕ್ಕೂ ಇದು ಅವರ ವೈಯಕ್ತಿಕ ಜೀವನವಾಗಲೀ, ಪತ್ನಿ ಐಶ್ವರ್ಯ ಬಗ್ಗೆಯಾಗಲೀ ಅಲ್ಲ. ಬದಲಿಗೆ ತಮ್ಮ ಸಹೋದರಳಿದ ​ ಆಗಸ್ತ್ಯ ಬಚ್ಚನ್‌ ಕುರಿತು.

ಅಮಿತಾಭ್​ ಬಚ್ಚನ್​ ಅವರ ಮಗಳು ಶ್ವೇತಾ ಬಚ್ಚನ್‌ ಅವರ ಮಗನಾಗಿರುವ ಅಗಸ್ತ್ಯ ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಅದು ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಜೊತೆ ಡೇಟಿಂಗ್​ ವಿಷಯದಿಂದಾಗಿ.  ಕೆಲ ತಿಂಗಳ ಹಿಂದೆ ನಡೆದ ಪಾರ್ಟಿಯೊಂದರಲ್ಲಿ ಸುಹಾನಾ ಖಾನ್​ (Suhana Khan) ಅವರನ್ನು ಕಾರು ಹತ್ತಿಸಿದ ಅಗಸ್ತ್ಯ ನಂದ ಪ್ರೀತಿಯ  ಫ್ಲೈಯಿಂಗ್ ಕಿಸ್​ ಕೊಟ್ಟಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿತ್ತು.  ಇಬ್ಬರೂ  ಚಿತ್ರದ ಸೆಟ್ ಗಳಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿರುತ್ತಾರೆ ಎನ್ನಲಾಗಿದೆ.   

ಅಮಿತಾಭ್​ ಮೊಮ್ಮಗನ ಜೊತೆ ಡೇಟಿಂಗ್​ ಮಾಡ್ತಿರೋ ಶಾರುಖ್​ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್​ಬಿ ಕೇಳಿದ್ದೇನು?

ಇದರ ನಡುವೆಯೇ, ಅಗಸ್ತ್ಯ ಬಚ್ಚನ್​, ಸುಹಾನಾ ಖಾನ್​ ಅವರು ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಲಿದ್ದಾರೆ. ಡಿಸೆಂಬರ್ 7 ರಂದು ಅಂದರೆ ನಾಳೆ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಯಶಸ್ವಿಗೆ ಕೋರಿ ಅಭಿಷೇಕ್​ ಬಚ್ಚನ್​ ಭಾವನಾತ್ಮಕ ಪೋಸ್ಟ್​ ಹಾಕಿದ್ದಾರೆ.  'ನೀನು ಇನ್ನಷ್ಟು ತಲುಪಲು ಪ್ರಯತ್ನಿಸುವುದನ್ನಷ್ಟೇ ಮಾಡಬೇಕಷ್ಟೇ. ನಿನ್ನ ಕೈ ಹಿಡಿದು ಮುನ್ನಡೆಸಲು ನಾನಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ನನ್ನ ಪ್ರೀತಿಯ ಆಗಸ್ತ್ಯನಿಗೆ ಸುಸ್ವಾಗತ' ಎಂದು ಅಭಿಷೇಕ್‌ ಬಚ್ಚನ್‌ ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಇದಕ್ಕೆ ಹಲವರು ಶುಭಾಶಯ ಕೋರುತ್ತಿದ್ದಾರೆ. ಇಂದು  ಈ ಸಿನಿಮಾದ  ಮುಂಬೈನಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌  ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಹಲವಾರು ಬಾಲಿವುಡ್​ ನಟ-ನಟಿಯರು ಆಗಮಿಸಿದ್ದರು.   ಶಾರುಖ್‌ ಖಾನ್‌, ಬಾಬಿ ಡಿಯೋಲ್‌, ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌, ಶಿಲ್ಪಾ ಶೆಟ್ಟಿ, ಜಾಹ್ನವಿ ಕಪೂರ್‌ ಮುಂತಾದವರು ಕಾಣಿಸಿಕೊಂಡಿದ್ದರು. ಅಭಿಷೇಕ್​ ಬಚ್ಚನ್​ ಅವರು ಪತ್ನಿ ಐಶ್ವರ್ಯ, ಮಗಳು ಆರಾಧ್ಯ ಜೊತೆ ಆಗಮಿಸಿದ್ದರು. ಈ ಚಿತ್ರದ ಮೂಲಕ ಶ್ರೀದೇವಿ ಮತ್ತು ಬೋನಿ ಕಪೂರ್​ ಅವರ ಎರಡನೆಯ ಪುತ್ರಿ ಖುಷಿ ಕಪೂರ್​ ಕೂಡ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ.  
 

ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?

Follow Us:
Download App:
  • android
  • ios