ಬಾಲಿವುಡ್‌ ಪರ್ಫೆಕ್ಟ್‌ ಮ್ಯಾನ್ ಆಮೀರ್‌ ಖಾನ್‌ ಮುಂಬೈನ ಗಲ್ಲಿ ಹುಡುಗರ ಜೊತೆ ಗಲ್ಲಿ ಕ್ರಿಕೆಟ್ ಆಟವಾಡಿದ್ದಾರೆ. ನೆಟ್ಟಿಗನೊಬ್ಬ ಸೆರೆ ಹಿಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಆಮೀರ್‌ನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾವ್.. ಅಮೀರ್ ಖಾನ್ ಮನೆ ಎಷ್ಟು ಚಂದ..! ಇಲ್ನೋಡಿ ಫೋಟೋಸ್ 

ನಟ ಆಮೀರ್‌ ಖಾನ್‌ನನ್ನು ತೆರೆ ಮೇಲೆ ಕಂಡು ಎರಡು ವರ್ಷಗಳೇ ಕಳೆದಿದೆ. ನೆಚ್ಚಿನ ನಟನ ಸಿನಿಮಾ ನೋಡಬೇಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಲಾಲ್‌ ಸಿಂಗ್ ಚಡ್ಡಾ ಚಿತ್ರೀಕರಣ ಮುಕ್ತಾಯವಾಗಿರುವ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯ ಮನೆಯಲ್ಲಿ ಸಮಯ ಕಳೆಯುತ್ತಿರುವ ಆಮೀರ್ ಖಾನ್ ಹೊರಗೆ ಬಂದು ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಕ್ರಿಕೆಟ್ ಆಟವಾಡಿದ್ದಾರೆ. ಸ್ಟಾರ್ ನಟ ಗಲ್ಲಿ ಕ್ರಿಕೆಟ್ ಆಟವಾಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಅಮೀರ್ ಖಾನ್‌ ಸರಳತೆ ತೋರಿಸುವ ಈ ವಿಡಿಯೋಗೆ ನಟ ಕಿಶ್ವರ್ ಮರ್ಚೆಂಟ್‌ ಕಮೆಂಟ್ ಮಾಡಿದ ನಂತರ ನೆಟ್ಟಿಗರು ನೀಡುತ್ತಿರುವ ರೀತಿ ಬದಲಾಗಿದೆ. ಹೌದು! ಮನೆಯಿಂದ ಹೊರ ಬಂದ ಆಮೀರ್ ಮಾಸ್ಕ್‌ ಧರಿಸದೆ ಮಕ್ಕಳ ಜೊತೆ ಕ್ರಿಕೆಟ್ ಆಟವಾಡಿದ್ದಾರೆ. ಅಮೀರ್ ಜೊತೆಗಿದ್ದವರೂ ಮಾಸ್ಕ್‌ ಧರಿಸಿಲ್ಲ. ಕೊರೋನಾ ಸೋಂಕು ಕಡಿಮೆಯಾಗಿಲ್ಲ ಎಂದು ತಿಳಿದರೂ ನೀವೂ ಮಾಸ್ಕ್ ಇಲ್ಲದೆ ಹೊರ ಬಂದಿರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆಮೀರ್‌ ಖಾನ್‌ ಪ್ರೀತಿ ಜಿಂಟಾ ಸಿಕ್ರೇಟಾಗಿ ಮದುವೆಯಾಗಿದ್ರಾ? 

'ಅಲ್ಲಿ ಯಾರೂ ಮಾಸ್ಕ್ ಹಾಕಿಲ್ಲ. ಯಾಕೆ? ಹೇಗೆ?'ಎಂದು ಕಿಶ್ವರ್ ಮಾಡಿದ ಕಮೆಂಟ್‌ಗೆ ನೆಟ್ಟಿಗನೊಬ್ಬ 'ಯಾಕೆಂದರೆ ಅಲ್ಲಿ ಯಾರಿಗೂ ಸಾವಿನ ಭಯವಿಲ್ಲ'ಎಂದಿದ್ದಾರೆ.  ಇನ್ನೂ ಕೆಲವರ ಸಿನಿಮಾ ಸ್ಟಾರ್ ಅಂದ್ಮೇಲೆ ದುಬಾರಿ ಮಾಸ್ಕ್ ಇದ್ದೇ ಇರುತ್ತದೆ ಅದನ್ನು ಎಲ್ಲಿ ಮಿಸ್ ಮಾಡ್ಕೊಂಡ್ರಿ ಸರ್ ಎಂದು ಪ್ರಶ್ನಿಸಿದ್ದಾರೆ.

"