ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಇದು ರಿಮೇಕ್ ಅಲ್ಲ, ಮೂಲ ಕಥೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಸಂತೋಷ್ ನಾರಾಯಣ್ ಅವರ ಸಂಗೀತ ಚಿತ್ರಕ್ಕಿದೆ. 2025ರ ಮಾರ್ಚ್ 28ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸತ್ಯರಾಜ್, ಕಾಜಲ್ ಅಗರ್ವಾಲ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಸಲ್ಮಾನ್ ಖಾನ್ ಅವರ 'ಸಿಕಂದರ್' ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ, ಇದರ ಬಗ್ಗೆ ಜನರ ಉತ್ಸಾಹ ಹೆಚ್ಚುತ್ತಿದೆ. ಚಿತ್ರದ ನಿರ್ದೇಶಕರು ಎ. ಆರ್. ಮುರುಗದಾಸ್, ಸಲ್ಮಾನ್ ಖಾನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲ ಚಿತ್ರವಲ್ಲ, ಬದಲಿಗೆ ದಕ್ಷಿಣದ ಸಿನಿಮಾದ ರಿಮೇಕ್ ಎಂದು ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದಲ್ಲಿ ಹೇಳಲಾಗುತ್ತಿದೆ. ಈಗ ಸ್ವತಃ ಚಿತ್ರದ ನಿರ್ದೇಶಕರೇ ಇದು ರಿಮೇಕ್ ಅಥವಾ ಮೂಲ ಕಥೆಯೇ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು ಹೇಳಿಕೆ ನೀಡಿದ್ದು, ಅದು ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಮೀರ್ ಖಾನ್‌ಗೆ ಹೀರೋಯಿನ್ ಆದ ಆಕೆ ಸಿಕ್ಕಿ ಬಿದ್ದದ್ದು ನಾನಾ ಪಾಟೇಕರ್ ಜೊತೆ!
'ಸಿಕಂದರ್' ನಿಜವಾಗಿಯೂ ರಿಮೇಕ್ ಸಿನೆಮಾವೇ?,,ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಎ. ಆರ್. ಮುರುಗದಾಸ್ "ಇದು ಸಂಪೂರ್ಣವಾಗಿ ಮೂಲ ಕಥೆ. ಪ್ರತಿಯೊಂದು ದೃಶ್ಯ ಮತ್ತು ಫ್ರೇಮ್ ಅನ್ನು ನಮ್ಮ ಯೋಜನೆಯಂತಯೇ ಮಾಡಲಾಗಿದೆ. ಇದು ಯಾವುದೇ ಸಿನಿಮಾದ ರಿಮೇಕ್ ಅಥವಾ ತುಣುಕುಗಳನ್ನು ಅಳವಡಿಕೆ ಮಾಡಲಾಗಿಲ್ಲ. ಚಿತ್ರದ ಪ್ರಮುಖ ಭಾಗವೆಂದರೆ ಪ್ರತಿಭಾವಂತ ಸಂತೋಷ್ ನಾರಾಯಣ್ ಅವರು ಸಂಯೋಜಿಸಿದ ಅದ್ಭುತ ಹಿನ್ನೆಲೆ ಸಂಗೀತ. ಅವರ ಸಂಗೀತವು ಚಿತ್ರದ ಶಕ್ತಿಯುತ ಟೋನ್ ಮತ್ತು ರೋಮಾಂಚಕ ದೃಶ್ಯಗಳಿಗೆ ಹೇಳಿ ಮಾಡಿಸಿದಂತಿದೆ ಮತ್ತು ಪ್ರತಿಯೊಂದು ದೃಶ್ಯಕ್ಕೂ ಭಾವನಾತ್ಮಕ ಸಂಬಂಧವನ್ನು ಕಲ್ಪಿಸಿದೆ ಎಂದು ಹೇಳಿದ್ದಾರೆ.
'ಸಿಕಂದರ್' ಯಾವ ಸಿನಿಮಾದ ರಿಮೇಕ್ ಎನ್ನಲಾಗುತ್ತಿತ್ತು?:ಕೆಲವು ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' 2018 ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ 'ಸರ್ಕಾರ್' ನ ರಿಮೇಕ್ ಆಗಿದೆ. ಅದರಲ್ಲಿ ತಳಪತಿ ವಿಜಯ್, ವರಲಕ್ಷ್ಮಿ ಮತ್ತು ಕೀರ್ತಿ ಸುರೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಆದರೆ, ಈಗ ಎ. ಆರ್. ಮುರುಗದಾಸ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಗ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ; ಸಲ್ಮಾನ್ ಖಾನ್ ʼಸಿಕಂದರ್ʼ ಅಡ್ಡಾದಲ್ಲಿ ʼಕಿರಿಕ್ ಬೆಡಗಿʼ
