ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ 'ಗಿಚ್ಚಿ ಗಿಲಿಗಿಲಿ'; ಪ್ರೇಕ್ಷಕರ ಅಸಮಾಧಾನ
ಕನ್ನಡ ಕಿರುತೆರೆಯಲ್ಲಿ ಗಿಚ್ಚಿ ಗಿಲಿಗಿಲಿ ಎನ್ನುವ ಹೊಸ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದ್ದು ದಿವ್ಯಾ ವಸಂತಾ ಮತ್ತು ನಿವೇದಿತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋ ವಿರುದ್ಧ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬರ್ತಿವೆ. ಹೊಸ ಹೊಸ ಶೋಗಳ ಮೂಲಕ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿವೆ. ಸಿಂಗಿಂಗ್ ಶೋ, ಕಾಮಿಡಿ ಶೋ, ಮಕ್ಕಳ ಶೋ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಕನ್ನಡ ಪ್ರೇಕ್ಷಕರಿಗೆ ಬರಪೂರ ಮನರಂಜನೆ ಕೊಡುತ್ತಿವೆ. ಇದೀಗ ಕಿರುತೆರೆ ಲೋಕದಲ್ಲಿ ಮತ್ತೊಂದು ರಿಯಾಲಿಟಿ ಶೋ ಎಂಟ್ರಿ ಕೊಟ್ಟಿದೆ. ಆದರೆ ಈ ಶೋ ಪ್ರಾರಂಭಕ್ಕೂ ಮುನ್ನವೇ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಎನ್ನುವ ಹೊಸ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ಈ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ನ್ಯೂಸ್ ಆಂಕರ್ ದಿವ್ಯಾ ವಸಂತ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಜೊತೆ ರಾಜ-ರಾಣಿ ರಿಯಾಲಿಟಿ ಶೋ ಖ್ಯಾತಿಯ ಶ್ರೀಕಾಂತ್ ಮತ್ತು ಅಯ್ಯಪ್ಪ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಶೋನ ಪ್ರೋಮೋ ಪ್ರಸಾರವಾಗುತ್ತಿದೆ. ಪ್ರೋಮೋದಲ್ಲಿ ಈ ನಾಲ್ಕು ಜನ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಆಂಕರ್ಸ್ ದಿವ್ಯಾ ವಸಂತ ಶೋನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ನನಗೆ ಪಾತ್ರೆ ತೊಳೆಯೋಕೆ ಬರೋಲ್ಲ ನನಗೆ ಇಷ್ಟವಿಲ್ಲ: Niveditha Gowda ಮನೆ ಇದು!
ಫೋನ್ ರಿಂಗ್ ಆಗುವ ಮೂಲಕ ಪ್ರೋಮೋ ಪ್ರಾರಂಭವಾಗುತ್ತೆ. ನಾವು ಕನ್ನಡ ಕಿರುತೆರೆಯಿಂದ ಫೋನ್ ಮಾಡುತ್ತಿದ್ದೇವೆ. ನಿಮ್ಮಗೆಲ್ಲ ಒಂದು ಸಿಹಿ ಸುದ್ದಿ ಇದೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ವಸಂತಾ ಇಡೀ ರಾಜ್ಯಕ್ಕೆಲ್ಲಾ ಸಿಹಿ ಸುದ್ದಿ ಹಂಚುವವರು ನಾವು, ನಮಗೆನಾ ಎಂದು ಕೇಳಿದ್ದಾರೆ. ನಮ್ಮಮ್ಮ ಸೂಪರ್ ಸ್ಟಾರ್ ಆದಮೇಲೆ ಮನರಂಜನಾ ಲೋಕದಲ್ಲಿ ಒಂದು ದೊಡ್ಡ ಜಾಗ ಕಾಲಿ ಇದೆ ಅದನ್ನ ನೀವೆ ತುಂಬಿಸಬೇಕು ಅಯ್ಯಪ್ಪ ಎಂದು ವಾಹಿನಿಯವರು ಕೇಳಿದಕ್ಕೆ ಅಯ್ಯಪ್ಪ ಇದು ಯಾವುದೋ ರಾಂಗ್ ಎಂದು ಕಾಲ್ ಕಟ್ ಮಾಡಿದರು.
ಇನ್ನು ನಿವೇದಿತಾ ಗೌಡ ನಾನು ಆಕ್ಟಿಂಗ್ ಮಾಡಿದ್ರೆ ಜನ ನಗ್ತಾರೆ ಎಂದು ಇಂದಿದಕ್ಕೆ, ವಾಹಿನಿಯವರು ಅದಕ್ಕೆ ಕರೆಯುತ್ತಿರೋದು ಎನ್ನುತ್ತಾರೆ. ಇದಕ್ಕೆ ಶ್ರೀಕಾಂತ್ ನನಗೆ ಕಾಮಿಡಿ ಬರಲ್ಲ ಎನ್ನುತ್ತಾರೆ. ಆದರೆ ಇದಕ್ಕೆ ಕಾಸು ಕೊಡ್ತಾರೆ ಎನ್ನುತ್ತಿದ್ದಂತೆ ಹಾಗಾದರೆ ಸರಿ ನಾವ್ ರೆಡಿ ಎಂದು ಈ ನಾಲ್ಕು ಜನ ಒಪ್ಪಿಗೆ ಸೂಚಿಸುತ್ತಾರೆ. ಹೊಸ ಪ್ರೋಮೋ ಗಮನ ಸೆಳೆಯುತ್ತಿದೆ. ಅಂದಹಾಗೆ ಈ ಶೋ ಸದ್ಯ ಕಲರ್ಸ್ ಕನ್ನಡ ಮಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಮುಗಿದ ಬಳಿಕ ಪ್ರಸಾರವಾಗಲಿದೆ.
ಅಬ್ಬಾ!! ನಿವೇದಿತಾ ಗೌಡ ಗೌನ್ ಕಲೆಕ್ಷನ್ ಮತ್ತು ಅದರ ಬೆಲೆ ಎಷ್ಟಿದೆ ನೋಡಿ..
ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಆಗಿದ್ದು, ಇನ್ನು ಯಾರೆಲ್ಲ ಈ ಶೋನಲ್ಲಿ ಇರಲಿದ್ದರೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಈ ಪ್ರೋಮೋಗೆ ಪ್ರೇಕ್ಷಕರು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ...ಈ ವಾಹಿನಿ ನೋಡುವುದು ಬಿಟ್ಟು ಬೇರೆ ವಾಹಿನಿ ನೋಡುತ್ತೇವೆ. ಖಂಡಿತ ಒಂದೇ ವಾರದಲ್ಲಿ ತೋಪು ಎದ್ದು ಹೋಗುತ್ತೆ ಎಂತೆಲ್ಲ ಕಾಮೆಂಟ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.
ಸದ್ಯ ಕುತೂಹಲದ ಜೊತೆಗೆ ಬೇಸರವನ್ನು ಮೂಡಿಸಿರುವ ಈ ಶೋ ಯಾವಾಗ ಪ್ರಸಾರ ಆಗಲಿದೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಇನ್ನು ಈ ಶೋ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಕಾಮಿಡಿ ಶೋ ಪ್ರಸಾರವಾಗುತ್ತಿದೆ. ಕಾಮಿಡಿ ಗ್ಯಾಂಗ್ ಎನ್ನುವ ಹೊಸ ರಿಯಾಲಿಟಿ ಶೋ ಶುರುವಾಗುತ್ತಿದೆ. ಈಗಾಗಲೇ ಕಾಮಿಡಿ ಗ್ಯಾಂಗ್ ಪ್ರೋಮೋ ಕೂಡ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ನಟಿ ಶ್ರುತಿ ಹರಿಹರನ್, ಮುಖ್ಯಮಂತ್ರಿ ಚಂದ್ರು ಮತ್ತು ಕುರಿ ಪ್ರತಾಪ್ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಧಾರಾವಾಹಿಗಳ ಹಾಗೆ ರಿಯಾಲಿಟಿಗಳ ನಡುವೆಯೂ ಪೈಪೋಟಿ ಜೋರಾಗಿದೆ. ಸೀರಿಯಲ್ ಮತ್ತು ರಿಯಾಲಿಟಿಗಳ ಶೋಗಳ ನಡುವಿನ ಪೈಪೋಟಿ ಒಂದೆಡೆ ಆದರೆ ವಾಹಿನಿಗಳ ನಡುವೆಯೂ ಪೈಪೋಟಿ ಇದೆ. ಹಾಗಾಗಿ ಪ್ರೇಕ್ಷಕರ ಗಮನ ಸೆಳೆಯಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇದೀಗ ಗಿಚ್ಚಿ ಗಿಲಿ ಗಿಲಿ ಮೂಲಕ ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈ ಶೋ ಹೇಗಿರಲಿದೆ, ಪ್ರೇಕ್ಷಕರು ಇಷ್ಟ ಪಡುತ್ತಾರಾ ಎನ್ನುವುದು ಶೋ ಪ್ರಾರಂಭವಾದ ಮೇಲೆ ಗೊತ್ತಾಗಲಿದೆ.